ACP Chandan Kumar: ಯಾವುದೇ ಮುಲಾಜಿಲ್ಲದೆ ದರ್ಶನ್ ಅವರನ್ನ ಹೆಡೆಮುರಿ ಕಟ್ಟಿದ ಈ ACP ಚಂದನ್ ಯಾರು…? ಅಪಾರ ಮೆಚ್ಚುಗೆ

ಅಷ್ಟಕ್ಕೂ ಈ ಚಂದನ್ ಕುಮಾರ್ ಯಾರು..? ಈತನ ಹಿನ್ನಲೆ ಏನು..?

ACP Chandan Kumar: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ ಒಟ್ಟು 17 ಜನರನ್ನು ಬಂಧಿಸಲಾಗಿದೆ. ಕೋರ್ಟ್ ನಲ್ಲಿ ವಿಚಾರಣೆ ನಡೆಸಿ ಮತ್ತೆ 5 ದಿನಗಳ ಕಾಲ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಅಷ್ಟಕ್ಕೂ ದರ್ಶನ್ ಅವರನ್ನು ಅರೆಸ್ಟ್ ಮಾಡಿದ್ದು ಯಾರು..? ಆತನ ಹಿನ್ನಲೆ ಏನು..? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ACP Chandan Kumar Arrested Actor Darshan
Image Credit: Oneindia

ದರ್ಶನ್ ಗೆ ನೀನ್ಯಾರು ನಿನ್ ಕಥೆ ಏನು ಗೊತ್ತು, ಜೀಪ್ ಹತ್ತು ಎಂದ ಪೊಲೀಸ್ ಆಫೀಸರ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎಂಬ ಸುದ್ದಿ ರಾಜ್ಯಾದ್ಯಂತ ಹಬ್ಬಿದಾಗ ದರ್ಶನ್ ಮೈಸೂರಿನಲ್ಲಿದ್ದರು. ಶೂಟಿಂಗ್ ಗಾಗಿ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ತಂಗಿದ್ದರು. ಬೆಳಗ್ಗೆ ಜಿಮ್‌ ನಿಂದ ಹೊರಡುತ್ತಿದ್ದಂತೆ ಎಸಿಪಿ ಚಂದನ್‌ ದರ್ಶನ್ ಅನ್ನು ಬಂಧಿಸಿದ್ದರು.

ಈ ವೇಳೆ ದರ್ಶನ್ ‘ನನ್ನ ಬರ್ತೀನಿ ಮುಂದೆ ನಡೀರಿ, ನಿಮ್ಮ ಜೊತೆ ಬಂದರೆ ಜನರು ತಪ್ಪು ತಿಳಿದುಕೊಳ್ಳುತ್ತಾರೆ, ನನ್ನ ಕಾರಿನಲ್ಲಿ ಬರುತ್ತೇನೆ ಎಂದರು. ಈ ಮಾತಿಗೆ ಎಸಿಪಿ ಚಂದನ್ ಕುಮಾರ್ ನೀನ್ಯಾರು ನಿನ್ ಕಥೆ ಏನು ಗೊತ್ತು, ಜೀಪ್ ಹತ್ತು ಎಂದಿದ್ದಾರೆ. ಒಬ್ಬ ಸ್ಟಾರ್ ನಟನಿಗೆ ಸ್ವಲ್ಪವೂ ಹಿಂಜರಿಯದೆ ಈ ರೀತಿ ಹೇಳಿದ್ದ ಚಂದನ್ ಕುಮಾರ್ ಬಗ್ಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ,. ಅಷ್ಟಕ್ಕೂ ಈ ಚಂದನ್ ಕುಮಾರ್ ಯಾರು..? ಈತನ ಹಿನ್ನಲೆ ಏನು ಅನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ACP Chandan Kumar And Darshan
Image Credit: News 18

ಅಷ್ಟಕ್ಕೂ ಈ ಚಂದನ್ ಕುಮಾರ್ ಯಾರು..? ಈತನ ಹಿನ್ನಲೆ ಏನು..?
ಎಸಿಪಿ ಚಂದನ್ ಕುಮಾರ್ ಅವರು ತಮ್ಮ ಬಾಲ್ಯವನ್ನು ಕಳೆದಿದ್ದು, ಓದಿದ್ದು ಮೈಸೂರಿನಲ್ಲಿ. ದರ್ಶನ್ ಮತ್ತು ಚಂದನ್ ಕುಮಾರ್ ಮೈಸೂರಿನ ಇಟ್ಟಿಗೆ ಊರಿನವರು, ಒಂದೇ ಏರಿಯಾದವರು. ಚಂದನ್ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿ ಕೆಲಕಾಲ ಕೆಲಸ ಮಾಡಿ ನಂತರ KPSC ಪರೀಕ್ಷೆ ಬರೆದು ನಾಲ್ಕನೇ ರ್ಯಾಂಕ್ ಪಡೆದು ಡಿವೈಎಸ್ ಪಿ ಆದರು. ಚಂದನ್ ಹೈಸ್ಕೂಲ್, ಪಿಯುಸಿ ಓದಿದ್ದು ಮೈಸೂರಿನ ಶಾರದವಿಲಾಸ ಕಾಲೇಜಿನಲ್ಲಿ. ವಿದ್ಯಾವರ್ಧಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದರು. ಇನ್ಫೋಸಿಸ್‌ ನಲ್ಲಿ ಕೆಲಕಾಲ ಕೆಲಸ ಮಾಡಿದರು. ಚಂದನ್ ತಂದೆ ನೀಲಕಂಠ ಮತ್ತು ತಾಯಿ ಮಂಜುಳಾ. ಪ್ರಭಾವಿ ನಟನ ವಿಚಾರದಲ್ಲಿ ಚಂದನ್ ಅವರ ಧೈರ್ಯ ಮತ್ತು ಪ್ರಾಮಾಣಿಕತೆಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Join Nadunudi News WhatsApp Group

ದರ್ಶನ್ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ವರ್ತಿಸುತ್ತಿರುವ ಚಂದನ್ ಗೆ ಸ್ನೇಹಿತರು ಹಾಗೂ ಬಡಾವಣೆಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಚಿರಪರಿಚಿತ ಆಗಿರುವ ಕಾರಣಕ್ಕೆ ಚಂದನ್ ಕುಮಾರ್ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಕರಣದ ಮಾಹಿತಿ ಸಿಗುತ್ತಿದ್ದಂತೆ ಪ್ರಕರಣದ ಇಂಚಿಂಚೂ ಶ್ರದ್ಧೆಯಿಂದ ಕೆಲಸ ಮಾಡಿದ ಚಂದನ್ ಗೆ ಈಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ACP Chandan Kumar
Image Credit: Original Source

Join Nadunudi News WhatsApp Group