Actor Aditi Prabhudeva: ಅರ್ಧ ಡಜನ್ ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು, ವರ್ಷ ಪೂರ್ತಿ ಮಿಂಚಿದ ಅದಿತಿ ಪ್ರಭುದೇವ.

Actor Aditi Prabhudeva: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಮಿಂಚುತ್ತಿರುವ ನಟಿ ಅದಿತಿ ಪ್ರಭುದೇವ (Aditi Prabhudeva). ಇವರು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇವರನ್ನು ಹೆಮ್ಮೆಯ ನಟಿ ಎಂದು ಕರೆಯುತ್ತಾರೆ.

ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆ ಯಾಗುವ ಮೂಲಕ ಒಬ್ಬೊಬ್ಬ ನಾಯಕಿಯರು ಮಿಂಚುತ್ತಿದ್ದಾರೆ.

Image Credit: timesofindia.indiatimes

ಅದರಲ್ಲೂ ಅದಿತಿ ಪ್ರಭುದೇವ ಇತ್ತೀಚೆಗೆ ಹಲವು ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಒಂದೊಂದು ಸಿನಿಮಾದಲ್ಲೂ ತನ್ನದೇ ಎಡಿಎ ಪಾತ್ರವನ್ನು ನಿರ್ವಹಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಇವರು ಮೊಟ್ಟ ಮೊದಲು ಕನ್ನಡದ ಕಲರ್ಸ್ ಕನ್ನಡ ಚಾನೆಲ್ ಅಲ್ಲಿ ಬರಿತಿದ್ದ ನಾಗಕನ್ನಿಕೆ ಸೀರಿಯಲ್ (Nagakannike Serial) ನಲ್ಲಿ ನಟಿಸಿ ಅನಂತರ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸೀರಿಯಲ್ ನಲ್ಲಿಯೇ ತುಂಬಾ ಚೆನ್ನಾಗಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುತ್ತಾರೆ.

Aditi Prabhudeva acted in 7 films in a single year
Image Credit: newindianexpress

ಅದಿತಿ ಪ್ರಭುದೇವ ಕನ್ನಡದ ಟಾಪ್ ನಟಿ

Join Nadunudi News WhatsApp Group

2022 ರಲ್ಲಿ ಅತಿ ಹೆಚ್ಚು ಸಿನಿಮಾ ರಿಲೀಸ್ ಆಗಿ ಮಿಂಚಿರುವ ನಟಿ ಯಾರೆಂದರೆ ಸದ್ಯದಲ್ಲಿ ಮದುವೆ ಆಗುತ್ತಿರುವ ನಟಿ ಅದಿತಿ ಪ್ರಭುದೇವ ಅವರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಮದುವೆ ಆಗುತ್ತಿರುವ ನಟಿ ಅದಿತಿ ಪ್ರಭುದೇವ. ಇನ್ನೇನು ಸ್ವಲ್ಪ ದಿನಗಳಲ್ಲಿ ಅದಿತಿ ಪ್ರಭುದೇವ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ (Social Media) ಹರಡುತ್ತಿದೆ. ಇದೆ ನವೆಂಬರ್ 28 ಅದಿತಿ ಪ್ರಭುದೇವ ಮದುವೆ ಅಗಲಿದ್ದಾರೆ.

ವರ್ಷದಲ್ಲಿ ಏಳು ಸಿನಿಮಾ ಬಿಡುಗಡೆ

ಈ ವರ್ಷ ರಿಲೀಸ್ ವಿಷಯಕ್ಕೆ ಬರುವುದಾದರೆ ಅದಿತಿ ನಟಿಸಿರುವ ಆರು ಸಿನಿಮಾಗಳು ಈಗಾಗಲೇ ತೆರೆಕಂಡಿದ್ದು ಏಳನೇ ಸಿನಿಮಾ ಜಮಾಲಿಗುಡ್ಡ ವರ್ಷಾಂತ್ಯಕ್ಕೆ ತೆರೆ ಮೇಲೆ ಬರಲಿದೆ. ಅಲ್ಲಿಗೆ 2022 ರಲ್ಲಿ ಅತಿ ಹಚ್ಚು ಸಿನಿಮಾಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡ ನಟಿ ಅದಿತಿ ಪ್ರಭುದೇವ.

Aditi Prabhudeva is an actress who has achieved a great level in the Kannada film industry
Image Credit: timesofindia.indiatimes

ಈ ವರ್ಷ ಅದಿತಿ ನಾಯಕಿಯಾಗಿ ತೆರೆ ಮೇಲೆ ಬಂದಿರುವ ಸಿನಿಮಾಗಳ ಪಟ್ಟಿ ನೋಡುವುದಾದರೆ ಒಂಬತ್ತನೇ ದಿಕ್ಕು, ಓಲ್ಡ್ ಮಾಂಕ್ (Old monk), ಗಜಾನನ ಅಂಡ್ ಗ್ಯಾಂಗ್, ತೋತಾಪುರಿ, ಚಾಂಪಿಯನ್, ತ್ರಿಬಲ್ ರೈಡಿಂಗ್ (Tribal raiding), ಜಮಾಲಿಗುಡ್ಡ ಚಿತ್ರಗಳಲ್ಲಿ ಈ ವರ್ಷ ಅದಿತಿ ಪ್ರಭುದೇವ ಮಿಂಚಿದ್ದಾರೆ.

ಇದರ ಜೊತೆಗೆ ಅದೊಂದಿತ್ತು ಕಾಲ 5ಡಿ ಚಿತ್ರಗಳು ಕೂಡ ಬಿಡುಗಡೆಗೆ ಸಿದ್ಧವಿದ್ದು, ಒಂದುವೇಳೆ ಡಿಸೆಂಬರ್ ನಲ್ಲಿ ತೆರೆ ಮೇಲೆ ಬಂದರೆ ಈ ವರ್ಷ ಒಂಬತ್ತು ಸಿನಿಮಾಗಳಲ್ಲಿ ಅದಿತಿ ಮಿಂಚಿದಂತಾಗುತ್ತದೆ.

ಅದಿತಿ ಪ್ರಭುದೇವ ಸಿನಿಮರಂಗಕ್ಕೆ ಎಂಟ್ರಿ  ಕೊಟ್ಟ ದಿನದಿಂದಲೂ ಬ್ಯುಸಿ  ನಟಿಯಾಗಿಯೇ ಬಂದವರು. ಸ್ಟಾರ್ ಗಳಿಂದ ಹಿಡಿದು ಹೊಸ ನಟರ ಚಿತ್ರಗಳಲ್ಲಿ ನಟಿಸುತ್ತಾ ಅದಿತಿ ವರ್ಷಪೂರ್ತಿ ಬ್ಯುಸಿ ಆಗಿದ್ದರು.

ಅದಿತಿ ಪ್ರಭುದೇವ ಅವರಿಗೆ ತಾನು ಮದುವೆ ಆಗುವ ಹುಡುಗ ಹೀಗೆ ಇರಬೇಕು ಎಂಬ ಕಲ್ಪನೆ ಇತ್ತಂತೆ. ಈಗ ಅದಕ್ಕೆ ತಕ್ಕಂತ ಹುಡುಗ ಸಿಕ್ಕಿದ್ದಾನೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಅದಿತಿ ಹೇಳಿಕೊಂಡಿದ್ದಾರೆ.

 

View this post on Instagram

 

A post shared by ADITI PRABHUDEVA (@aditiprabhudeva)

Join Nadunudi News WhatsApp Group