Chandu Gowda: ಮಗಳ ಕಿವಿ ಚುಚ್ಚುವ ವೇಳೆ ಚಂದು ಗೌಡ ಭಾವುಕ, ವಿಡಿಯೋ ವೈರಲ್ ಆಗಿದೆ.

ಮಗಳಿಗೆ ಕಿವಿ ಚುಚ್ಚಿಸುವ ಸಮಯದಲ್ಲಿ ನಟ ಚಂದು ಗೌಡ ಅವರು ಭಾವುಕರಾಗಿದ್ದು ಅದರ ವಿಡಿಯೋ ವೈರಲ್ ಆಗಿದೆ.

Serial Actor Chandu Gowda Daughter: ಕಿರುತೆಯ ಸ್ಟಾರ್ ನಟ ಚಂದು ಗೌಡ (Chandu Gowda) ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗ್ರಹಾಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಚಂದು ಗೌಡ ಪರಿಚಯವಾಗಿದ್ದರು.

ಇದೀಗ ನಟ ಚಂದು ಗೌಡ ಅವರು ತಮ್ಮ ಮಗಳ ಕಿವಿ ಚುಚ್ಚುವ ಶಾಸ್ತ್ರವನ್ನು ನೆರವೇರಿಸಿದ್ದಾರೆ. ಈ ವೇಳೆ ನಟ ಚಂದು ಗೌಡ ಅವರು ಭಾವುಕರಾಗಿದ್ದಾರೆ.

Actor Chandu Gowda gets emotional while getting his daughter's ears pierced and the video has gone viral.
Image Credit: instagram

ಮಗಳ ಕಿವಿ ಚುಚ್ಚುವ ವೇಳೆ ಚಂದು ಗೌಡ ಭಾವುಕ
ನಟ ಚಂದು ಗೌಡ ಅವರು ತಮ್ಮ ಮಗಳಿಗೆ ಒಂಬತ್ತು ತಿಂಗಳು ಪೂರ್ಣಗೊಂಡ ಕಾರಣ ಮಗಳಿಗೆ ಕಿವಿ ಚುಚ್ಚಿಸಿದ್ದಾರೆ. ತಮ್ಮ ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಚಂದು ಮಗಳ ಕಿವಿ ಚುಚ್ಚಿಸಿದ್ದಾರೆ.

ಮಗಳ ಕಿವಿ ಚುಚ್ಚುವ ಸಂದರ್ಭದಲ್ಲಿ ಚಂದು ತಮ್ಮ ಮಗಳ ನೋವನ್ನು ತಾವೇ ಅನುಭವಿಸಿದ್ದಾರೆ. ಚಂದು ಅವರು ಕಣ್ಣು ಮುಚ್ಚಿ ಭಾವುಕರಾಗಿದ್ದಾರೆ. ಮಗುವಿಗೆ ಕಿವಿ ಚುಚ್ಚಿಸುತ್ತಿರುವ ವಿಡಿಯೋವನ್ನು ಚಂದು ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು ಸಾಕಷ್ಟು ಮೆಚ್ಚುಗೆಗಳನ್ನು ಗಳಿಸುತ್ತಿದೆ.

Actor Chandu Gowda shed tears while getting his daughter's ears pierced
Image Credit: instagram

ಕಿರುತೆಯ ಸ್ಟಾರ್ ಹೀರೋ ಚಂದು ಗೌಡ
ನಟಿ ಚಂದು ಗೌಡ ಅವರು ಕನ್ನಡದಲ್ಲಿ ಗೃಹಲಕ್ಷ್ಮಿ ಸೀರಿಯಲ್ ಅಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ನಂತರ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪರ ಭಾಷೆಯಲ್ಲೂ ಚಂದು ಗೌಡ ಖ್ಯಾತಿ ಪಡೆದಿದ್ದಾರೆ. ಇನ್ನು ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಕೂಡ ಚಂದು ಗೌಡ ಮಿಂಚಿದ್ದಾರೆ.

Join Nadunudi News WhatsApp Group

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನೆಗಟಿವ್ ಪಾತ್ರ ಮಾಡುವ ಮೂಲಕ ಚಂದು ಗೌಡ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇನ್ನೂ ‘ಕುಷ್ಕ’, ‘ಜಾಕ್ ಪಾಟ್’, ‘ಕಮರೊಟ್ಟು ಚಕ್ ಪೋಸ್ಟ್’, ‘ಶ್ರೀ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಸ್ತುತ ತ್ರಿನಯನಿ ಹಾಗೂ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದಾರೆ. ಧಾರಾವಾಹಿಗಳ ಜೊತೆಗೆ ಸಿನಿಮಾರಂಗದಲ್ಲೂ ಕೂಡ ಚಂದು ಗೌಡ ಬ್ಯುಸಿ ಆಗಿದ್ದಾರೆ.

Join Nadunudi News WhatsApp Group