Chetan Ahimsa About Ambedkar: ಅಂಬೇಡ್ಕರ್ ಬಗ್ಗೆ ಅಪಹಾಸ್ಯ ಮಾಡುವುದು ಅಪರಾಧವಲ್ಲ ಎಂದ ನಟ ಚೇತನ್.

Actor Chetan Ahimsa talk About B. R. Ambedkar: ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್ (Cethan Ahimsa) ಇತ್ತೀಚಿಗೆ ಹಲವು ವಿಷಯಗಳ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ನಾಟಕ ಒಂದರಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವ ಆರೋಪ ಕೇಳಿ ಬಂದಿದೆ.

ನಾಟಕದಲ್ಲಿ ನಟಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯವು ಅಮಾನತು ಮಾಡಿದೆ. ವಿಶ್ವವಿದ್ಯಾಲಯ ನಡಯ ಬಗ್ಗೆ ನಟ ಚೇತನ್ ಕಿಡಿಕಾರಿದ್ದಾರೆ. ಅಂಬೇಡ್ಕರ್ ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ ಎಂದು ನಟ ಚೇತನ್ ವಾಗ್ದಾಳಿ ಮಾಡಿದ್ದಾರೆ.

Chetan Ahimsa About Ambedkar
Image Source: India Today

 

ಅಂಬೇಡ್ಕರ್ ಬಗ್ಗೆ ಅಪಹಾಸ್ಯ ಮಾಡಿದ ವಿದ್ಯಾರ್ಥಿಗಳು
ನಟ ಚೇತನ್ ಅಂಬೇಡ್ಕರ್ ಬಗ್ಗೆ ಅಪಹಾಸ್ಯ ಮಾಡುವುದು ಅಪರಾಧ ಅಲ್ಲ ಎಂದಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಪ್ರದರ್ಶಿಸಿದ ಕಿರು ನಾಟಕದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಈ ಕಿರು ನಾಟಕದ ವಿರುದ್ಧ ಕಿಡಿಕಾರಿದ್ದಾರೆ. ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿಸುವ ಮೂಲಕ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದ್ದಾರೆ. ಹಾಗೆಯೇ ಹಲವು ಕಡೆ ವಿದ್ಯಾರ್ಥಿಗಳ ವಿರುದ್ಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Join Nadunudi News WhatsApp Group

Chetan Ahimsa About Ambedkar
Image Source: India Today

ಅಂಬೇಡ್ಕರ್ ಬಗ್ಗೆ ಅಪಹಾಸ್ಯ ಮಾಡುವುದು ಅಪರಾಧವಲ್ಲ ಎಂದ ನಟ ಚೇತನ್
ಈ ವಿಚಾರದ ಕುರಿತು ನಟ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಬಲವಾದ ಪ್ರಜಾಪ್ರಭುತ್ವಕ್ಕಾಗಿ ಎಲ್ಲವನ್ನು ಮತ್ತು ಎಲ್ಲರನ್ನು ತಮಾಷೆ ಮಾಡುವ ಹಕ್ಕು ನಮಗಿರಬೇಕು.

Chetan Ahimsa About Ambedkar
Image Source: India Today

ನಾವುಗಳು ಮೋದಿಯನ್ನು ಅಪಹಾಸ್ಯ ಮಾಡುವ ಸ್ಟಾಂಡ್ ಅಪ್ ಕಾಮಿಕ್ಸ್ ಮತ್ತು ನಾಟಕಗಳನ್ನು ಹೇಗೆ ಸೆನ್ಸಾರ್ ಮಾಡಬಾರದು.ರಾಮ, ಮಹಮ್ಮದ್, ಬಸವ ಅಂಬೇಡ್ಕರ್, ದಲಿತರ ವಿರುದ್ಧ ಹಾಸ್ಯವನ್ನ ಕೂಡ ಅಪರಾಧವೆಂದು ಪರಿಗಣಿಸುವುದು ಮಾಡುವುದು ಪ್ರಜಾಪ್ರಭುತ್ವ ಅಲ್ಲ ಎಂದು ನಟ ಚೇತನ್ ಟ್ವೀಟ್ ಮಾಡಿದ್ದಾರೆ.

ಜೈನ ಯೂನಿವರ್ಸಿಟಿಯ 6 ವಿದ್ಯಾರ್ಥಿಗಳ ಮೇಲೆ ಎಫ್ ಐ ಆರ್ ಅಮಾನತು ವಾಕ್ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ನಟ ಚೇತನ್ ಕಿಡಿಕಾರಿದ್ದಾರೆ.

Chetan Ahimsa About Ambedkar
Image Source: Times of India

Join Nadunudi News WhatsApp Group