Ads By Google

Dhananjay Marriage: ಈ ಕಾರಣಕ್ಕೆ ಡಾಲಿಗೆ ಹೆಣ್ಣು ಕೊಡುತ್ತಿಲ್ಲವಂತೆ, ಬೇಸರ ಹೊರಹಾಕಿದ ಡಾಲಿ ಧನಂಜಯ್.

Actor Dali Dhananjay About Marriage

Image Source: Zee5

Ads By Google

Actor Dali Dhananjay About Marriage: ಸ್ಯಾಂಡಲ್ ವುಡ್ ನ ನಟ ರಾಕ್ಷಸ ಡಾಲಿ ಧನಂಜಯ್ (Daali Dhananjay) ಇದೀಗ ಸುದ್ದಿಯಲ್ಲಿದ್ದಾರೆ. ಡಾಲಿ ಅಭಿನಯದ ಹೊಯ್ಸಳ ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದೆ. ಇನ್ನು ಇತ್ತೀಚೆಗಷ್ಟೇ ಡಾಲಿ ಧನಂಜಯ್ ಅವರ ಪ್ರೀತಿಯ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಡಾಲಿ ತಮ್ಮ ಸಹ ನಟಿ ಅಮೃತ ಅಯ್ಯಂಗಾರ್ (Amrutha Iyenger) ಅವರನ್ನು ಪ್ರೀತಿಸುವ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿ ಬಂದಿದ್ದವು. ಇದೀಗ ನಟ ಡಾಲಿ ಧನಂಜಯ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಡಾಲಿಯ ಪ್ರತಿಕ್ರಿಯೆ ಹೇಗಿದೆ ಎನ್ನುವ ಬಗ್ಗೆ ತಿಳಿಯೋಣ.

Image Source: Tv9

ಮದುವೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಾಲಿ ಧನಂಜಯ್
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಮದುವೆ ಆಗದೆ ಇದ್ದರೆ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಎದುರಿಸಲೇ ಬೇಕಾಗುತ್ತದೆ. ಇನ್ನು ಚಂದನವನದ ಸ್ಟಾರ್ ನಟ ಡಾಲಿ ಇನ್ನೂ ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ. ಹೀಗಾಗಿ ಇವರಿಗೆ ಈ ಪ್ರಶ್ನೆ ಎದುರಾಗುವುದು ಸಾಮಾನ್ಯ.

ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರದ ಹಾಡೊಂದು ಏಪ್ರಿಲ್ 12 ಕ್ಕೆ ರಿಲೀಸ್ ಆಗಲಿದೆ. ಈ ಸಾಂಗ್ ಸಿಂಗಲ್ಸ್ ಬಗ್ಗೆ ಇರುದರಿಂದ ಸಿಂಗಲ್ ಆಗಿರುವ ಸ್ಟಾರ್ ನಟರಿಂದ ಪ್ರಚಾರ ಮಾಡಿಸಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಈ ಕಾರಣಕ್ಕೆ ಡಾಲಿ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದ ಹಾಡಿನ ರಿಲೀಸ್ ಬಗ್ಗೆ ಪ್ರಚಾರದ ಮಾಡಿದ್ದರು. ಈ ವೇಳೆ ನಟ ಮದುವೆಯ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ.

Image Source: Zee5

ಸಿನಿಮಾದವರು ಎಂದು ಹೆಣ್ಣು ಕೊಡುತ್ತಿಲ್ಲ ಎಂದ ಡಾಲಿ ಧನಂಜಯ್
ಡಾಲಿ ಧನಂಜಯ್ ಅವರಿಗೆ ಮದುವೆಗೆ ಬಗ್ಗೆ ಪ್ರಶ್ನೆ ಕೇಳಿದಾಗ ಸಿನಿಮಾದವರಿಗೆ ಹೆಣ್ಣು ಸಿಗ್ತಿಲ್ಲ. ಸಿನಿಮಾದವರು ಎಂದು ಹೆಣ್ಣು ಕೊಡದಿದ್ದರೆ ಬೇಡ, ತೆರೆಯ ಮೇಲೆ ನಾವು 10 ಮದುವೆ ಆಗ್ತಿವಿ ಎಂದು ಡಾಲಿ ಹೇಳಿದ್ದಾರೆ.

Image Source: Kannada Nade
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in