Darshan Tattoo: ಅಭಿಮಾನಿಗಳಿಗೆ ಅಭಿಮಾನಿಯಾದ ಡಿ ಬಾಸ್, ದರ್ಶನ್ ಮೇಲೆ ಎದೆ ಮೇಲೆ ಟಾಟೂ.

Actor Darshan Viral Tattoo: ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ದರ್ಶನ್ ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಕರುನಾಡ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ನಟ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇತ್ತೀಚಿಗೆ ಬಿಡುಗಡೆ ಆಗಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ನಟ ದರ್ಶನ್ ಅಭಿಮಾನಿಗಳಿಗಾಗಿ ಕನ್ನಡದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ.

Actor Darshan, who is a fan of fans, Darshan has a tattoo on his chest.
Image Credit: instagram

ಅಭಿಮಾನಿಗಳಿಗಾಗಿ ಎದೆ ಮೇಲ ಹಚ್ಚೆ ಹಾಕಿಸಿಕೊಂಡ ನಟ ದರ್ಶನ್
ನಟ ದರ್ಶನ್ “ನನ್ನ ಸೆಲಬ್ರೆಟಿಸ್” ಅಂತ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಅವರು ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಗೌರವ ಸಲ್ಲಿಸಿದ್ದಾರೆ.

ದರ್ಶನ್ ಅವರ ಈ ನಡೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಿತ್ರರಂಗ ಇತಿಹಾಸದಲ್ಲಿ ಒಬ್ಬ ಸ್ಟಾರ್ ನಟ ಕನ್ನಡದಲ್ಲಿ ಟ್ಯಾಟೂ ಹಾಕಿಸಿ ಅಭಿಮಾನಿಗಳಿಗೆ ಗೌರವ ನೀಡಿದ ಏಕೈಕ ವ್ಯಕ್ತಿ ಡಿ ಬಾಸ್.

Join Nadunudi News WhatsApp Group

Actor Darshan got a tattoo for his fans
Image Credit: instagram

ನಟ ಡಿ ಬಾಸ್ ನನ್ನ ಸೆಲಬ್ರೆಟಿಸ್ ಅಂತ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Actor Darshan got a tattoo on his chest for his fans
Image Credit: zee news

ದರ್ಶನ್ ಗೆ ಫಿದಾ ಆದ ಅಭಿಮಾನಿಗಳು
ನಟ ದರ್ಶನ್ ಅವರ ಈ ಗುಣ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ನಟ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಯಾರು ಮಾಡದ ಕೆಲಸವನ್ನು ಮಾಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಹಲವಾರು ಕಿರುತೆರೆ ನಟ ನಟಿಯರು ದರ್ಶನ್ ಅವರ ಈ ಗುಣ ನೋಡಿ ಹೊಗಳಿದ್ದಾರೆ.

Join Nadunudi News WhatsApp Group