Sowjanya Case: ಕುಟುಂಬಸ್ಥರ ಪರ ಧ್ವನಿ ಎತ್ತಿದ ನಟ ದುನಿಯಾ ವಿಜಯ್ ಹೊಸ ನಿರ್ಧಾರ .

ಟ್ವೀಟ್ ಮಾಡುವ ಮೂಲಕ ಸೌಜನ್ಯ ಕುಟುಂಬಕ್ಕೆ ಸಂತಾಪ ಸೂಚಿಸಿದ ನಟ ದುನಿಯಾ ವಿಜಯ್.

Actor Duniya Vijay Tweet: ಸರಿ ಸುಮಾರು 11 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಜ್ಜಿರೆ ಮತ್ತು ಧರ್ಮಸ್ಥಳ ದೇವಾಲಯದ ಪಟ್ಟಣದಲ್ಲಿ 17 ವರ್ಷದ ಸೌಜನ್ಯಳ(Sowjanya) ಹತ್ಯೆ ಪ್ರಕರಣ ನೆಡೆದಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ನೆಡೆದಿವೆ. ಈಗಲೂ ಈ ಪ್ರಕರಣದ ಬಗ್ಗೆ ಪ್ರತಿಭಟನೆ ನೆಡೆಸುತ್ತಲೇ ಇದ್ದಾರೆ. ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.
ಸೌಜ್ಯನ್ಯಾಳ ಸಾವಿಗೆ ನ್ಯಾಯ ದೊರಕಿಸಲು ಅನೇಕ ವರ್ಷಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಇದೀಗ ಸೌಜ್ಯನ್ಯಾಳ ಸಾವಿನ ಪ್ರಕರಣದ ತನಿಖೆ ವಿಚಾರ ಮತ್ತೆ ಶುರುವಾಗಿದ್ದು ಮತ್ತೆ ನ್ಯಾಯ ದೊರಕಿದಂತಾಗಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದುನಿಯಾ ವಿಜಯ್ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

Actor Duniya Vijay Tweet About Sowjanya Case
Image Credit: Zeenews

ಸೌಜನ್ಯ ಕುಟುಂಬದ ಪರ ನಿಂತ ನಟ ದುನಿಯಾ ವಿಜಯ್
ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ. ಸಿಬಿಐ ಈ ವಿಷಯ ಕುರಿತು 11 ವರ್ಷಗಳ ಕಾಲ ತನಿಖೆ ನೆಡೆಸಿದೆ. ನ್ಯಾಯಾಲಯ  ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸಂತೋಷ್ ರಾವ್ ಅನ್ನು ಬಿಡುಗಡೆ ಮಾಡಿದೆ. ವಿವಿಧ ಜನಪರ ಸಂಘಟನೆಗಳು ಆರೋಪಿಯನ್ನು ಮರು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ನಟ ದುನಿಯಾ ವಿಜಯ್ ಅವರು ಟ್ವೀಟ್ ಮಾಡುವ ಮೂಲಕ ಸೌಜನ್ಯ ಕುಟುಂಬದ ಪರ ನಿಂತಿದ್ದಾರೆ.


ನಟ ದುನಿಯಾ ವಿಜಯ್ ಟ್ವೀಟ್
ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆ ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು ಎಂಬ ಹೇಳಿಕೆಯೊಂದಿಗೆ # Justice for Soujanya ಎಂಬ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group