Sudeep And Shikhar Dhawan: ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್, ಫೋಟೋ ವೈರಲ್.

Kichha Sudeep with Shikhar Dawan: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ (Kiccha Sudeep) ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟ ಕಿಚ್ಚ ಸುದೀಪ್ ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಭೇಟಿ ಮಾಡಿದ್ದಾರೆ.

ಶಿಖರ್ ಧವನ್ (Shikhar Dhawan) ಅವರ ಜೊತೆಗಿನ ಫೋಟೋಗಳನ್ನು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋಗಳನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kiccha Sudeep met cricketer Shikhar Dhawan, photo went viral.
Image Credit: instagram

ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್
ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಮೇಲೆ ಹಲವು ಹೆಚ್ಚು ಹಾಗಾಗಿ ಅವರು ಆಗಾಗ ಕ್ರಿಕೆಟಿಗರನ್ನು ಭೇಟಿ ಮಾಡುತ್ತಾರೆ. ಇದೀಗ ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಕಿಚ್ಚ ಸುದೀಪ್ ಭೇಟಿ ಮಾಡಿದ್ದಾರೆ.

ಶಿಖರ್ ಧವನ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡು ವಿಶ್ ಮಾಡಿದ ಕಿಚ್ಚ ಸುದೀಪ್
ಶಿಖರ್ ಧವನ್ ಜೊತೆಗೆ ಕಿಚ್ಚ ಕೆಲವು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಸುದೀಪ್ ಅವರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by KicchaSudeepa (@kichchasudeepa)

Join Nadunudi News WhatsApp Group

ಹಾಗೆಯೆ ಮುಂಬರುವ ಐಪಿಎಲ್ (IPL) ಗೆ ಒಳ್ಳೆಯದಾಗಲಿ ಬ್ರದರ್, ನಿಮ್ಮ ಜೊತೆ ಕಾಲ ಕಳೆದಿದ್ದು ಖುಷಿ ನೀಡಿದೆ ಎಂದಿದ್ದಾರೆ. ಇವರ ಫೋಟೋಗಳಿಗೆ ನೋಡುಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಸುದೀಪ್ ಬಹಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರು ಕಮೆಂಟ್ ಮಾಡುತ್ತಿದ್ದಾರೆ.

Actor Kichcha Sudeep appeared with Shikhar Dhawan
Image credit: instagram

ಸುದೀಪ್ ಗೆ ಬೇಡಿಕೆ ಇಟ್ಟ ಅಭಿಮಾನಿಗಳು
ಇನ್ನು ಕಿಚ್ಚ ಸುದೀಪ್ ಹಾಗೂ ಶಿಖರ್ ಧವನ್ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸುದೀಪ್ ಅಭಿಮಾನಿಗಳು ಕಮೆಂಟ್ ಮಾಡಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ‘ಒಂದು ಬಾರಿ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿ’ ಎಂದು ಸುದೀಪ್ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

Join Nadunudi News WhatsApp Group