Prabhas Health Issue: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟ, ಸಾಲಾರ್ ಶೂಟಿಂಗ್ ಕ್ಯಾನ್ಸಲ್.

Actor Prabhas Suffer Fever: ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ (PRabhas) ಬಾಹುಬಲಿ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ನಟ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ದೇಶದಾದ್ಯಂತ ತೆರೆ ಕಂಡಿದ್ದು ಅದ್ಭುತವನ್ನು ಸೃಷ್ಟಿ ಮಾಡಿದೆ.

ಅಲ್ಲದೆ ಈ ಸಿನಿಮಾದಿಂದ ನಟ ಪಭಾಸ್ ಅಧಿಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಪ್ರಭಾಸ್ ಈಗ ಸಾಲಾರ್ (Salaar) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ನಟ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Shooting stopped due to high fever of actor Prabhas
Image Credit: instagram

ತೀವ್ರ ಜ್ವರದಿಂದ ಚಿತ್ರೀಕರಣದಿಂದ ದೂರ ಉಳಿದ ನಟ ಪ್ರಭಾಸ್
ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಈಗ ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ಸಾಲಾರ್ ಸಿನಿಮಾದ ಶೂಟಿಂಗ್ ನಿಂದ ದೂರ ಇದ್ದು ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಜ್ವರ ಕಡಿಮೆ ಆಗುತ್ತಿದ್ದು ಆತಂಕ ಪಡಬೇಕಾಗಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಶೂಟಿಂಗ್ ಕ್ಯಾನ್ಸಲ್ ಮಾಡಿಸಿದ್ದಾರೆ ನಿಜ ಆದರೆ ಜ್ವರದ ಕಾರಣಕ್ಕೋ ಅಥವಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.

Actor Prabhas suffering from fever
Image Credit: instagram

ಜ್ವರದಿಂದ ವಿಶ್ರಾಂತಿ ಪಡೆಯುತ್ತಿರುವ ನಟ ಪ್ರಭಾಸ್
ಖ್ಯಾತ ನಟ ಪ್ರಭಾಸ್ ಅವರಿಗೆ ಜ್ವರ ಬಂದ ಕಾರಣ ತಮ್ಮ ಸಿನಿಮಾ ಕೆಲಸ ಕಾರ್ಯಗಳಿಗೆ ಬ್ರೇಕ್ ಹಾಕಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

Join Nadunudi News WhatsApp Group

ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಬಾಲಿವುಡ್ (Bollywood) ಸಿನಿಮಾಗಳ ವಿಮರ್ಶಕ ಉಮೈರ್ ಸಂಧು ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ.

Actor Prabhas came out of shooting due to high fever
Image Credit: instagram

ಸದ್ಯದಲ್ಲಿಯೇ ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಾಲ್ಡಿವ್ಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಎಂಗೇಜ್ ಮೆಂಟ್ ನಂತರ ಬಹುಬೇಗ ಅವರು ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Join Nadunudi News WhatsApp Group