Prabhas Adipurush: ಆದಿಪುರುಷ್ ಚಿತ್ರಕ್ಕೆ ನಟ ಪ್ರಭಾಸ್ ಪಡೆದುಕೊಂಡ ಸಂಭಾವನೆ ಎಷ್ಟು, ದೇಶದ ದುಬಾರಿ ನಟ.

ಆದಿಪುರುಷ ಸಿನಿಮಾದಲ್ಲಿ ನಟ ಪ್ರಭಾಸ್ ಅವರು ಹೆಚ್ಚಿನ ಸಂಭಾವನೆಯನ್ನು ಪಡೆದಿದ್ದಾರೆ.

Prabhas Wages In Adipurush: ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ (Prabhas) ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಪ್ರಭಾಸ್ ಬಾಹುಬಲಿ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.

ಇನ್ನು ಈ ಸಿನಿಮಾದ ನಂತರ ನಟ ಪ್ರಭಾಸ್ ಅವರು ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ನಟ ಪ್ರಭಾಸ್ ನಟನೆಯ ಅನೇಕ ಕೆಲವು ಸಿನಿಮಾಗಳು ಸೋಲು ಕಂಡಿದ್ದರು ಇನ್ನು ಕೆಲವು ಸಿನಿಮಾಗಳು ಜನಪ್ರಿಯತೆ ಪಡೆದಿದೆ. ಇನ್ನು ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ ಚಿತ್ರೀಕರಣ ಪೂರ್ತಿಗೊಂಡಿದ್ದು ಮೊನ್ನೆ ಅಷ್ಟೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

Prabhas Adipurush Movie Salary
Image Credit: businesstoday

ಆದಿಪುರುಷ ಸಿನಿಮಾಗಾಗಿ ದುಬಾರಿ ಸಂಭಾವನೆ ಪಡೆದ ನಟ ಪ್ರಭಾಸ್
ಆದಿಪುರುಷ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಈಗಾಗಲೇ ಈ ಸಿನಿಮಾ ಟ್ರೈಲರ್ ಮೂಲಕವೇ ಜನರ ಮನ ಗೆದ್ದಿದೆ. ಆದಿಪುರುಷ ಸಿನಿಮಾ ಭಾರತೀಯ ಪೌರಾಣಿಕ ಕಥೆಯ ಸಿನಿಮಾವಾಗಿದೆ . ಈ ಸಿನಿಮಾ ರಾಮಾಯಣ ಕಥೆಯನ್ನು ಒಳಗೊಂಡಿದೆ. ಇನ್ನು ಪ್ರಭಾಸ್ ನಟನೆಯ ಈ ಸಿನಿಮಾ ಜೂನ್ 16 ರಂದು ರಿಲೀಸ್ ಆಗಲಿದೆ. ನಟ ಪ್ರಭಾಸ್ ಆದಿಪುರುಷ ಸಿನಿಮಾಗಾಗಿ 120 ರಿಂದ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

Adipurusha movie is an Indian mythological story movie
Image Credit:: filmfare

700 ಕೋಟಿ ರೂಪಾಯಿ ಬಜೆಟ್ ನಲ್ಲಿ ಆದಿಪುರುಷ ಸಿನಿಮಾ
ಇನ್ನು ಆದಿಪುರುಷ ಸಿನಿಮಾ 700 ಕೋಟಿಗಿಂತ ಹೆಚ್ಚು ಬಜೆಟ್ ನಲ್ಲಿ ಚಿತ್ರಿತವಾಗಿದೆ. ನಟ ಪ್ರಭಾಸ್ ಈ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣ ಕಥೆಯನ್ನು ಹೊಂದಿರುವ ಈ ಸಿನಿಮಾವನ್ನು ನೋಡಲು ಮತ್ತು ನಟ ಪ್ರಭಾಸ್ ಅವರ ರಾಮನ ಪಾತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group