Salaar is a remake of Ugram: ಸಲಾರ್ ಚಿತ್ರ ಉಗ್ರಂ ರಿಮೇಕ್ ಎಂದವರಿಗೆ ಉತ್ತರ ಕೊಟ್ಟ ನಟ ಪ್ರಮೋದ್
Salaar is a remake of Ugram: ಸದ್ಯ ಇದೀಗ ಪ್ರಭಾಸ್ (Prabhas) ಅಭಿಮಾನಿಯದ ಸಲಾರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಚಿತ್ರದಲ್ಲಿ ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್ ಜಗಪತಿ ಬಾಬು ರೀತಿಯ ದೊಡ್ಡ ನಟರೂ ಕೂಡ ಅಭಿನಯಿಸುತ್ತಿದ್ದಾರೆ.
ಇನ್ನು ಈ ತಂಡಕ್ಕೆ ಇತ್ತೀಚೆಗಷ್ಟೆ ಕನ್ನಡದ ರತ್ನನ್ ಪ್ರಪಂಚ ಚಿತ್ರದ ಮೂಲಕ ವೈರಲ್ ಆಗಿದ್ದ ನಟ ಪ್ರಮೋದ್ ಪಂಜು (Pramod Panju) ಕೂಡ ಸೇರಿಕೊಂಡಿದ್ದು ಸಲಾರ್ (Salaar Movie) ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ಈ ಹಿಂದಿನಿಂದಲೂ ಕೂಡ ಸಲಾರ್ ಚಿತ್ರ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಎಂಬ ದೊಡ್ಡ ಅನುಮಾನ ಹಾಗೂ ಕುತೂಹಲವಿದ್ದು ಈ ಕುರಿತಾಗಿ ಸದ್ಯ ಇದೀಗ ನಟ ಪ್ರಮೋದ್ ಕೂಡ ಮಾತನಾಡಿದ್ದಾರೆ.
ಸಾಲಾರ್ ಚಿತ್ರದ ಬಗ್ಗೆ ಮಾತನಾಡಿದ ನಟ ಪ್ರಮೋದ್ ಪಂಜು
ಹೌದು ಕನ್ನಡ ಫಿಲ್ಮೋಲಜಿ ಎಂಬ ಯುಟ್ಯೂಬ್ ವಾಹಿನಿ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ನಟ ಪ್ರಮೋದ್ ಪಂಜು ಅವರು ತಾವು ಸಲಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿರುವುದನ್ನು ಹೇಳಿಕೊಂಡಿದ್ದು ಇದೇ ಸಂದರ್ಶನದಲ್ಲಿ ಎಲ್ಲರೂ ಸಲಾರ್ ಉಗ್ರಂ ಚಿತ್ರದ ರಿಮೇಕ್ ಎನ್ನುತ್ತಿದ್ದಾರೆ.
ಇದು ನಿಜಾನಾ ಎಂಬ ಪ್ರಶ್ನೆಯನ್ನ ಪ್ರಮೋದ್‌ಗೆ ಕೇಳಲಾಗಿದ್ದು ಇದಕ್ಕೆ ಉತ್ತರಿಸಿದ ಪ್ರಮೋದ್, ಇಲ್ಲ ನನಗೆ ಗೊತ್ತಿಲ್ಲ ಅದನ್ನು ಪ್ರಶಾಂತ್ ಸರ್ (Prashant Neel) ಹತ್ರಾನೇ ಕೇಳಬೇಕು.
ಚಿತ್ರ ತೆರೆಗೆ ಬಂದಮೇಲೆ ತಿಳಿಯಲಿದೆ
ಮಾಧ್ಯಮದವರ ಜೊತೆ ಸಾಲಾರ್ ಚಿತ್ರ ಉಗ್ರಂ ಚಿತ್ರದ ರಿಮೇಕ್ ವಿಷಯವಾಗಿ ಮಾತನಾಡಿದ ನಟ ಪ್ರಮೋದ್ ಪಂಜು ಅವರು, ನನ್ನ ಅನಿಸಿಕೆ ಪ್ರಕಾರ ಆ ತರಹದ ಐಡಿಯಾನೇ ಬಂದಿಲ್ಲ. ಇದು ತುಂಬಾ ದೊಡ್ಡದಾಗಿ ಇದೆ. ಜಡ್ಜ್ ಕೂಡ ಮಾಡೋಕಾಗಲ್ಲ ಅಷ್ಟು ದೊಡ್ಡ ಮಟ್ಟದ ಪಾತ್ರ ಮಾಡುತ್ತಿದ್ದು ಇಂತಹ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನನಗೆ ಖುಷಿಯಿದೆ ಎಂದು ಹೇಳಿದ್ದಾರೆ.
ಇದನ್ನು ನೀವು ಸುಲಭವಾಗಿ ಇದು ಅದೇನಾ ಅಂತ ಹೇಳಿಬಿಡುವುದಕ್ಕಾಗುವುದಿಲ್ಲ ಇದರಲ್ಲಿ ಒಂದಷ್ಟು ಬೇರೆ ಇದೆ. ಬಂದಮೇಲೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇನ್ನು ತಮಗೆ ಪ್ರಶಾಂತ್ ನೀಲ್ ಅವರೇ ಖುದ್ದಾಗಿ ಕರೆಮಾಡಿ ಅವಕಾಶ ನೀಡಿದ್ದಾರೆ ಎಂಬುದನ್ನು ನಟ ಪ್ರಮೋದ್ ತಿಳಿಸಿದ್ದು ರತ್ನನ್ ಪ್ರಪಂಚ ಚಿತ್ರದಲ್ಲಿನ ತನ್ನ ನಟನೆಯನ್ನು ನೋಡಿ ಮೆಚ್ಚಿಕೊಂಡ ಪ್ರಶಾಂತ್ ನೀಲ್ ರವರು ಅದೇ ಕಾರಣಕ್ಕಾಗಿ ಸಲಾರ್ ಚಿತ್ರದಲ್ಲಿ ಅವಕಾಶ ನೀಡಿದರು ಎಂದು ಪ್ರಮೋದ್ ಹೇಳಿಕೊಂಡಿದ್ದಾರೆ.
ಇನ್ನು ಚಿತ್ರೀಕರಣದ ಸ್ಥಳದಲ್ಲೂ ಸಹ ಪ್ರಶಾಂತ್ ನೀಲ್ ತಮ್ಮ ನಟನೆಯನ್ನು ನೋಡಿ ಅನೇಕ ಬಾರಿ ಹೊಗಳಿದ್ದಾರೆ ಎಂದು ಪ್ರಮೋದ್ ಖುಷಿಯಿಂದ ಹಂಚಿಕೊಂಡಿದ್ದು ಡಾಲಿ ಅಭಿನಯದ ರತ್ನನ್ ಪ್ರಪಂಚ ಚಿತ್ರದ ಮೂಲಕ ಹೆಚ್ಚು ಹೆಸರು ಹಾಗೂ ಐಡೆಂಟಿಟಿ ಪಡೆದ ಪ್ರಮೋದ್ ಪಂಜು ಈ ಹಿಂದೆ ಗೀತಾ ಬ್ಯಾಂಗಲ್ ಸ್ಟೋರ್ ಮತ್ತು ಪ್ರೀಮಿಯರ್ ಪದ್ಮಿನಿ ಚಿತ್ರದ ಮೂಲಕವೂ ಕೂಡ ವೀಕ್ಷಕರ ಮನ ಗೆದ್ದಿದ್ದರು.
ಸದ್ಯ ಸಲಾರ್ ಚಿತ್ರದಲ್ಲಿ ನಟಿಸುತ್ತಿರುವ ಪ್ರಮೋದ್ ಅಭಿನಯದ ಬಾಂಡ್ ರವಿ ಬಿಡುಗಡೆಗೆ ರೆಡಿ ಇದ್ದು ಇಂಗ್ಲಿಷ್ ಮಂಜ ಎಂಬ ಸಿನಿಮಾದಲ್ಲಿ ಕೂಡ ಪ್ರಮೋದ್ ನಟಿಸುತ್ತಿದ್ದಾರೆ.