Pratham Tweet: ಆತನನ್ನ ಜಾಡಿಸಿದರೆ ಪ್ರಕರಣ ಹೊರಬರುತ್ತದೆ, ಸೌಜನ್ಯ ಕೇಸ್ ಬಗ್ಗೆ ನಟ ಪ್ರಥಮ್ ಹೇಳಿದ್ದೇನು…?
ಟ್ವೀಟ್ ಮಾಡುವ ಮೂಲಕ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದ ನಟ ಪ್ರಥಮ್.
Actor Pratham Tweet About Sowjanya Case: ಪ್ರಸ್ತುತ ರಾಜ್ಯದಲ್ಲಿ ಸೌಜನ್ಯಸಾವಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. 2012 ರಲ್ಲಿ ನಡೆದ ಘಟನೆಗೆ ಇನ್ನು ನ್ಯಾಯ ದೊರಕದೆ ಇರುವುದು ಕನ್ನಡಿಗರಿಗೆ ಬೇಸರ ನೀಡಿದೆ.ಅಂತಹ ನೀಚ ಕೃತ್ಯ ಮಾಡಿದವರಿಗೆ ಇನ್ನು ಶಿಕ್ಷೆಯಾಗಿಲ್ಲ. ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕುವವರೆಗೂ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಜಸ್ಟಿಸ್ ಫಾರ್ ಸೌಜನ್ಯ ಹ್ಯಾಶ್ ಟ್ಯಾಗ್ ಬಾರಿ ವೈರಲ್ ಆಗುತ್ತಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಜ್ಜಿರೆ ಮತ್ತು ಧರ್ಮಸ್ಥಳದ ದೇವಾಲಯದ ಪಟ್ಟಣಗಳಲ್ಲಿ 17 ವರ್ಷದ ಸೌಜನ್ಯಳ ಹತ್ಯೆಯ ಪ್ರಕರಣ (Sowjanya Case) ಸಂಭವಿಸಿದೆ. ಸೌಜ್ಯನ್ಯಾಳ ಸಾವಿಗೆ ನ್ಯಾಯ ದೊರಕಿಸಲು ಅನೇಕ ವರ್ಷಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಸೌಜನ್ಯಾಳ ಪ್ರಕರಣದ ಮರು ತನಿಖೆ ನಡೆದರೂ ಕೂಡ ಅಪರಾಧಿಗಳನ್ನು ಶಿಕ್ಷಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಆರೋಪಿಯನ್ನು ಬಂಧಮುಕ್ತಗೊಳಿಸಿದ ನ್ಯಾಯಾಲಯ
ಇನ್ನು ಇತ್ತೀಚೆಗಷ್ಟೇ ಪ್ರಮುಖ ಆರೋಪಿ ಎಂದು ಬಂಧಿಸಲಾಗಿದ್ದ ಸಂತೋಷ್ ರಾವ್ ಅವರನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಈ ಕಾರಣಕ್ಕೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹೆಚ್ಚುತ್ತಿದೆ. ಈಗಾಗಲೇ ಸ್ಟಾರ್ ಸೆಲೆಬ್ರೆಟಿಗಳಿಂದ ಹಿಡಿದು ಚಿತ್ರರಂಗದ ಸಾಕಷ್ಟು ಜನರು ಸೌಜನ್ಯಾಳ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎನ್ನುದರ ಬಗ್ಗೆ ಹೇಳಿಕೆ ನೀಡಿದ್ದಾರೆ.
#ಸೌಜನ್ಯ ಕುಟುಂಬದ ಬಗ್ಗೆ ನೋವಿದೆ;ಮಧ್ಯರಾತ್ರಿಯಾದ್ರೂ ನಿದ್ರೆ ಬರ್ತಿಲ್ಲ;ತನಿಖೆಯಿಂದno use;2012ರ rapeಆದಾಗ ಇದ್ದpoliceನ ಜಾಡಿಸಿದರೆ ಮಾತ್ರ ಸತ್ಯ ತಿಳಿಯಲಿದೆ
ನನ್ನ ಬೇಸರ ಸಂತೋಷ್ ರಾವ್ ಗೆ ಅನ್ಯಾಯವಾಗಿರೋ ಬಗ್ಗೆ;next ನಾನುattend ಮಾಡೋ 2programmeದುಡ್ಡನ್ನ ಸಂತೋಷ್ ಕುಟುಂಬಕ್ಕೆ ಕೊಡಬೇಕೆಂದಿದ್ದೇನೆ;ತುಂಬಾ ಸಾಲವಾಗಿದೆ.ದುಡ್ಡಿಲ್ಲ— Olle Hudga Pratham (@OPratham) August 3, 2023
ದುನಿಯಾ ವಿಜಯ್ ಟ್ವೀಟ್
ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದುನಿಯಾ ವಿಜಯ್ (Duniya Viajy) ಅವರು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಸೌಜನ್ಯ ಪರ ಟ್ವೀಟ್ ಮಾಡುವ ಮೂಲಕ ಸೌಜ್ಯನ್ಯಾ ಕುಟುಂಬದ ಪರ ನಿಂತಿದ್ದರು.
ಇದೀಗ ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ಸೌಜನ್ಯ ಪ್ರಕರಣದ ಬಗ್ಗೆ ಟ್ವೀಟ್ ಮಾಡುವ ಮೂಲಕ ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ.
ಆತನನ್ನ ಜಾಡಿಸಿದರೆ ಪ್ರಕರಣ ಹೊರಬರುತ್ತದೆ
ಸೌಜನ್ಯ ಕುಟುಂಬದ ಬಗ್ಗೆ ನೋವಿದೆ, ಮಧ್ಯರಾತ್ರಿಯಾದರು ನಿದ್ರೆ ಬರುತ್ತಿಲ್ಲ. ತನಿಖೆಯಿಂದ ನೋ ಯೂಸ್. 2012 ರಲ್ಲಿ ಅಂತಹ ನೀಚ ಕೃತ್ಯ ಆದಾಗ ಇದ್ದ ಪೊಲೀಸರನ್ನು ಜಾಡಿಸಿದರೆ ಮಾತ್ರ ಸತ್ಯ ತಿಳಿಯಲಿದೆ.
ನನ್ನ ಬೇಸರ ಸಂತೋಷ್ ರಾವ್ ಅನ್ಯವಾಗಿರೋ ಬಗ್ಗೆ, ಮುಂದೆ ನಾನು ಭಾಗವಹಿಸುವ 2 ಕಾರ್ಯಕ್ರಮದ ದುಡ್ಡನ್ನು ಸಂತೋಷ್ ಕುಟುಂಬಕ್ಕೆ ಕೊಡಬೇಕೆಂದಿದ್ದೇನೆ. ತುಂಬಾ ಸಾಲವಾಗಿದೆ, ದುಡ್ಡಿಲ್ಲ ಎಂದು ಪ್ರಥಮ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ನ ಮೂಲಕ ಪ್ರಥಮ್ ಸಂತೋಷ್ ರಾವ್ ಬಿಡುಗಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.