Ads By Google

Actor Prem: ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗಲು ಮುಂದಾದ ಪ್ರೇಮ್, ಶೋ ನಲ್ಲಿ ಕಣ್ಣೀರಿಟ್ಟ ನಟ.

Actor Prem told about many pains of life in Weekend with Ramesh show
Ads By Google

Actor Prem In Weekend With Ramesh: ವಿಕೇಂಡ್ ವಿಥ್ ರಮೇಶ್ ಸೀಸನ್ 5 (Weekend With Ramesh Season 5) ಈಗಾಗಲೇ ಪ್ರಾರಂಭಗೊಂಡಿದ್ದು ಕೆಲವು ಸಾಧಕರ ಪರಿಚಯ ಮಾಡಿಕೊಟ್ಟಿದೆ. ವೀಕೆಂಡ್ ವಿಥ್ ರಮೇಶ್ ಸಂಚಿಕೆ ಹೆಚ್ಚು ಜನಪ್ರಿಯತೆ ಪಡೆದಿದೆ.

ಅನೇಕ ಸಾಧಕರ ಸಾಧನೆಯ ಪಯಣದ ಬಗ್ಗೆ ಈ ವೇದಿಕೆ ಜನರಿಗೆ ತಿಳಿಸಲಿದೆ. ನಿನ್ನೆ ನಟ ನೆನಪಿರಲಿ ಪ್ರೇಮ್ (Prem) ಅವರು ವೀಕೆಂಡ್ ವಿಥ್ ರಮೇಶ್ ಶೋ ಗೆ ಬಂದು ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ.

Image Credit: vijaykarnataka

ಈ ವಾರ ಸಾಧಕರ ಕುರ್ಚಿಯಲ್ಲಿ ಕುಳಿತ ನೆನಪಿರಲಿ ಪ್ರೇಮ್ (Prem) 
ಇದೀಗ ಈ ವಾರದ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಪ್ರೇಮ್ ಅವರು ಸಾಧಕರ ಕುರ್ಚಿ ಏರಿದ್ದಾರೆ. ಸಂಚಿಕೆಯಲ್ಲಿ ನಟ ಪ್ರೇಮ್ ಅವರ ಬಾಲ್ಯ ಜೀವನದಿಂದ ಹಿಡಿದು ಸಿನಿ ಪಯಣದವರೆಗೂ ಮಾಹಿತಿ ನೀಡಿದ್ದಾರೆ.

ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗಬೇಕೆಂದು ಅಂದುಕೊಂಡಿದ್ದ ನಟ ಪ್ರೇಮ್
ನಿರೂಪಕ, ನಟ ರಮೇಶ್ ಅರವಿಂದ್ ಅವರು ಪ್ರೇಮ್ ಅವರ ವಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೇಳಿದ್ದಾರೆ. ನಟ ಪ್ರೇಮ್ ಅವರು ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗಬೇಕು ಎಂದು ಅಂದುಕೊಂಡಿದ್ದರಂತೆ.

Image Credit: vijaykarnataka

ನಟ ಪ್ರೇಮ್ ಅವರಿಗೆ ಮೊದಲು ಅವರ ಕುಟುಂಬವನ್ನು ದಡ ಸೇರಿಸಬೇಕೆಂಬ ಆಸೆ ಇದ್ದಿತ್ತಂತೆ. ನಂತರ ಅವರು ಯಾವುದಾದರೂ ವಿಶೇಷ ಚೇತನ ಹುಡುಗಿ ನೋಡಿ ಮದುವೆಯಾಗೋಣ ಅಂತ ಅಂದುಕೊಂಡಿದ್ದರಂತೆ. ಜ್ಯೋತಿ ನನ್ನ ಬಾಳಲ್ಲಿ ಬಂದಿದ್ದು ನನ್ನ ಅದೃಷ್ಟ.

ಒಂದು ಸಲ ಹಣದ ಅವಶ್ಯಕತೆ ಇತ್ತು. ಪೇಪರ್‌ನಲ್ಲಿ ಏನನ್ನೋ ಸುತ್ತಿಕೊಂಡು ಬಂದು ನನ್ನ ಕೈಗಿಟ್ಟಳು. ತೆಗೆದು ನೋಡಿದರೆ ಮಾಂಗಲ್ಯ ಸರ. ಅವತ್ತೆ ನಾನು ಬದುಕಿರಬಾರದು ಅನ್ನಿಸಿ ಬಿಟ್ಟಿತು ಎಂದು ಕಣ್ಣೀರು ಹಾಕಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field