Puneeth Rajkumar: ಅಂದು ಅಭಿಮಾನಿ ತಂದುಕೊಟ್ಟ ಹಳಸಿದ ಬಿರಿಯಾನಿ ತಿಂದು ಅಪ್ಪು ಮಾಡಿದ್ದೇನು..? ಇದು ಅಪ್ಪು ಗುಣ.
ಅಭಿಮಾನಿ ತಂದಿದ್ದ ಹಳಸಿಹೋದ ಬಿರಿಯಾನಿ ತಿಂದ ಪುನೀತ್ ರಾಜ್ ಕುಮಾರ್.
Actor Puneeth Rajkumar Simplicity: ಕನ್ನಡ ಚಿತ್ರರಂಗದ ಖ್ಯಾತ ನಟರಾದ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಅಗಲಿದರು ಸಹ ಕರುನಾಡ ಜನರ ಮನದಲ್ಲಿ ಸದಾ ಚಿರಋಣಿ ಆಗಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಸರದಾರರಾದ ನಟ ಪುನೀತ್ ರಾಜ್ ಕುಮಾರ್ ಅವರು ವಿಧಿವಶರಾಗಿ ಒಂದು ವರೆ ವರ್ಷ ಕಳೆದಿದೆ.
ನಟ ಪುನೀತ್ ರಾಜ್ ಕುಮಾರ್ ಅವರು ಜೀವಿತಾವಧಿಯಲ್ಲಿ ಸಾಕಷ್ಟು ಸಮಾಜಸೇವೆಗಳನ್ನು, ಪುಣ್ಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ನಟ ಅಗಲಿದ ನಂತರ ಕೆಲವು ವಿಚಾರಗಳು ಬೆಳಕಿಗೆ ಬಂದಿವೆ.
ಪುನೀತ್ ಭೇಟಿಗಾಗಿ ಕಾದಿದ್ದ ಅಭಿಮಾನಿ
ಇದೀಗ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿ ತಂದ ಬಿರಿಯಾನಿ ತಿಂದಿದ್ದರ ಬಗ್ಗೆ ಸೀಕ್ರೆಟ್ ಒಂದು ಹೊರ ಬಿದ್ದಿದೆ. ಜಾಕಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಒಬ್ಬ ಪುನೀತ್ ಅಭಿಮಾನಿ ತುಂಬಾ ಹೊತ್ತಿನಿಂದಲೂ ಕೈಯಲ್ಲಿ ಏನೋ ಹಿಡಿದು ನಿಂತಿದ್ದರಂತೆ. ಅದನ್ನು ಎಲ್ಲರೂ ಗಮನಿಸಿದರು ಏನು ಕೇಳೋಕೆ ಹೋಗಲಿಲ್ಲವಂತೆ.
ಜಾಕಿ ಸಿನಿಮಾದ ಶೂಟಿಂಗ್ ಸಮಯದಲ್ಲೇ ಇದೆಲ್ಲ ನಡೆದಿತ್ತು. ಇದನ್ನು ನಟ ನಿರ್ಮಾಪಕ ಕಡ್ಡಿಪುಡಿ ಚಂದ್ರು ಅವರು ಗಮನಿಸುತ್ತಾ ಇದ್ದಿದ್ದರಂತೆ. ಆದರೆ ಏನು ಹೇಳೋಕೆ ಹೋಗಿರಲಿಲ್ಲ ಅಂತೇ. ಯಾರು ಆ ಅಪ್ಪು ಅಭಿಮಾನಿಯನ್ನು ಅಲ್ಲಿಂದ ಹೋಗು ಅಂತಲೂ ಹೇಳಿರಲಿಲ್ಲ ಅಂತೇ. ಆ ಅಭಿಮಾನಿಯೂ ಅಲ್ಲಿಯೇ ಇದ್ದು ಅಪ್ಪು ಭೇಟಿಗಾಗಿ ತುಂಬಾ ಸಮಯದವರೆಗೂ ಕಾದಿದ್ದನಂತೆ.
ಅಭಿಮಾನಿ ತಂದಿದ್ದ ಹಳಸಿಹೋದ ಬಿರಿಯಾನಿ ತಿಂದ ಪುನೀತ್ ರಾಜ್ ಕುಮಾರ್
ಇನ್ನು ಪುನೀತ್ ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಿಕೊಂಡು ಆ ಅಭಿಮಾನಿಯನ್ನು ತನ್ನ ಬಳಿ ಕರೆಸಿಕೊಂಡರಂತೆ. ಆ ಕ್ಷಣ ಅಭಿಮಾನಿಯೂ ತುಂಬಾ ಖುಷಿ ಪಟ್ಟಿದ್ದನಂತೆ. ತಾನೇ ತನ್ನ ಕೈಯಾರೆ ಅಪ್ಪುಗಾಗಿಯೇ ಬಿರಿಯಾನಿ ಮಾಡಿ ತಂದಿದ್ದನಂತೆ. ಇದರಿಂದ ತುಂಬಾನೇ ಸಂತೋಷ ಪಟ್ಟ ಅಪ್ಪು ಏನು ಯೋಚನೆ ಮಾಡದೇನೆ ಆ ಬಿರಿಯಾನಿ ತಿಂದು ಖುಷಿ ಪಟ್ಟಿದ್ದರಂತೆ.
ಆದರೆ ಪಕ್ಕದಲ್ಲಿಯೇ ಇದ್ದ ನಟ ನಿರ್ಮಾಪಕ ಕಡ್ಡಿಪುಡಿ ಚಂದ್ರು ಅದನ್ನು ತಿನ್ನಲೇ ಇಲ್ಲವಂತೆ. ಇದಕ್ಕೆ ಬಲವಾದ ಕಾರಣವೂ ಸಹ ಇದ್ದಿತ್ತಂತೆ. ಬೆಳಗ್ಗೆ ಬೇಗ ಎದ್ದು ಮಾಡಿದ್ದ ಬಿರಿಯಾನಿ ಅದಾಗಿತ್ತಂತೆ. ಮಧ್ಯಾಹ್ನದ ಹೊತ್ತಿಗೆ ಅದೆಲ್ಲ ಹಳಸಿಹೋಗಿತ್ತಂತೆ ಮತ್ತು ವಾಸನೆ ಬರ್ತಾನೆ ಇತ್ತು. ಆದರೆ ಅಪ್ಪು ಅವರು ಆ ತಪ್ಪನ್ನು ಲೆಕ್ಕಿಸದೆ ಅಭಿಮಾನಿ ಪ್ರೀತಿಯಿಂದಲೇ ತಂದಿದ್ದ ಆ ಬಿರಿಯಾನಿ ಸೇವಿಸಿದರು.
ಆಗ ಚಂದ್ರು ಅವರು ಕೇಳಿದ್ದಾರೆ, ಅಲ್ಲಾ ಬಿರಿಯಾನಿ ಅಷ್ಟು ವಾಸನೆ ಬರುತ್ತಾ ಇದೆ. ಆದರೂ ನೀವು ಅದನ್ನು ತಿಂದಿದರಲ್ಲ ಯಾಕೆ ಅಂತ ಕೇಳಿದ್ದರಂತೆ. ಆ ಅಭಿಮಾನಿ ನನಗೋಸ್ಕರ ಈ ಬಿರಿಯಾನಿ ಮಾಡಿಕೊಂಡು ತಂದಿದ್ದಾನೆ. ಆತನ ಪ್ರೀತಿಗೆ ನಾನು ಗೌರವ ಕೊಟ್ಟಿದ್ದೇನೆ. ಆ ಪ್ರೀತಿಗೆ ಬೆಲೆ ಕಟ್ಟುವುದಕ್ಕೆ ಆಗುವುದೇ ಇಲ್ಲ ಅನ್ನೋ ಅರ್ಥದಲ್ಲಿ ಅಪ್ಪು ಹೇಳಿದ್ದಾರೆ.