Puneeth Rajakumar Predicted About Kabzaa Movie: ನಟ ಉಪೇಂದ್ರ (Upendra) ಹಾಗು ಕಿಚ್ಚ ಸುದೀಪ್ (Kiccha Sudeep) ಜೊತೆಯಾಗಿ ನಟಿಸಿರುವ ಕಬ್ಜ (Kabzaa) ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನಾಳೆ ಮಾರ್ಚ್ 17 ಪುನೀತ್ ರಾಜಕುಮಾರ್ (Puneeth Rajkumar) ಅವರ ಹುಟ್ಟುಹಬ್ಬದ ಸಲುವಾಗಿ ಕಬ್ಜ ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಬಾಷೆಯಲ್ಲಿ ಸಹ ರಿಲೀಸ್ ಆಗುತ್ತಿದೆ. ಈಗಾಗಲೇ ಎರಡು ಹಾಡಿನ ಮೂಲಕ ಹೆಚ್ಚು ಸದ್ದು ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜವನ್ನು ತೆರೆ ಮೇಲೆ ನೋಡಲು ಸಿನಿ ಪೇಕ್ಷಕರು ಸಜ್ಜಾಗಿದ್ದಾರೆ.
ಕಬ್ಜ ಸಿನಿಮಾದ ಬಗ್ಗೆ ಮಾತನಾಡಿದ್ದ ಕರುನಾಡ ಯುವರತ್ನ ಪುನೀತ್ ರಾಜಕುಮಾರ್
ಇದೀಗ ಕಬ್ಜ ಸಿನಿಮಾದ ಬಗ್ಗೆ ಕರುನಾಡ ಯುವರತ್ನ ದಿವಂಗತ ನಟ ಪುನೀತ್ ರಾಜಕುಮಾರ್ ಅವರು ಮಾತನಾಡಿರುವ ಮಾತು ವೈರಲ್ ಆಗಿದೆ. ಕಬ್ಜ ಸಿನಿಮಾವನ್ನು ಆರ್ ಚಂದ್ರು ಅವರ ನಿರೀಕ್ಷೆಯ ಸಿನಿಮಾವಾಗಿದೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತೇನೆ ಆಂತ ಆರ್ ಚಂದ್ರು ಹೊರಟಾಗ ನಟ ಅಪ್ಪು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿದ್ದೀರಿ ಹುಷಾರು ಅಂತ ಎಚ್ಚರಿಸಿದ್ದರಲ್ಲದೆ ಜೊತೆಗೆ ನಾನು ನಿಮ್ಮ ಜೊತೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಅವರು ಹೇಳಿದ್ದರು.
ಕಬ್ಜ ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದ ಅಪ್ಪು
ಆರ್ ಚಂದ್ರು ಅವರು ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ ಅಂದಾಗ ಪುನೀತ್ ಅವರಿಗೂ ಆ ಸಿನಿಮಾ ಸೆಟ್ ಗೆ ಹೋಗಬೇಕು, ಹೇಗೆ ಮೇಕಿಂಗ್ ಮಾಡುತ್ತಿದ್ದಾರೆ ಅಂತ ನೋಡಬೇಕು ಎಂಬ ಕುತೂಹಲದಿಂದ ಕಬ್ಜ ಸಿನಿಮಾ ಸೆಟ್ ಗೆ ನಗುಮುಖದ ರಾಜಕುಮಾರ ಎಂಟ್ರಿ ಕೊಟ್ಟಿದ್ದರು.
ಮಾನಿಟರ್ ನಲ್ಲಿ ಶಾಟ್ಸ್ ನೋಡುತ್ತಾ ಖುಷಿ ಪಟ್ಟಿದ್ದರು. ನೀವು ಸಾಮಾನ್ಯರಲ್ಲಿ ಅಂತ ಚಂದ್ರು ಅವರ ಬೆನ್ನು ತಟ್ಟಿದ್ದರು. ಇದು ದೊಡ್ಡ ಸಿನಿಮಾ ಆಗುತ್ತದೆ ಅಂತ ಭವಿಷ್ಯ ಸಹ ನುಡಿದಿದ್ದರು.
ಪುನೀತ್ ರಾಜಕುಮಾರ್ ಅವರು ಹೇಳಿದ ಮಾತಿನಂತೆ ಆಗುತ್ತಿದೆ. ಕಬ್ಜ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡಿದೆ. ಇನ್ನು ನಾಳೆ ಬಿಡುಗಡೆಯಾಗಲಿರುವ ಕಬ್ಜ ಸಿನಿಮಾ ಅದ್ಬುತ ಸೃಷ್ಟಿಸಲಿದೆ.