Rajinikanth: ಜೀವನದ ಬಹುದೊಡ್ಡ ನಿರ್ಧಾರ ತಗೆದುಕೊಂಡ ತಲೈವಾ, ರಜಿನಿ ಫ್ಯಾನ್ಸ್ ಗೆ ಬೇಸರದ ಸುದ್ದಿ.
ನಟ ರಜಿನಿಕಾಂತ್ ಅವರು ಚಿತ್ರರಂಗದಿಂದ ವಿಧಾಯವನ್ನ ತಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ.
Actor Rajinikanth Retirement: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಕೋಟ್ಯಾಂತರ ಅಭಿಮಾನಿಗಳ ಸರದಾರ ಆಗಿದ್ದಾರೆ. ರಜನಿಕಾಂತ್ ಅವರ ಸಿನಿಮಾಗಳೆಂದರೆ ನೋಡುಗರಿಗೆ ಅಚ್ಚುಮೆಚ್ಚು.
ಈಗಲೂ ಸಹ ನಟ ರಜನಿಕಾಂತ್ ಅವರು ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇನ್ನು ಕೆಲವು ಸಿನಿಮಾದ ನಂತರ ಸಿನಿಮಾ ಬದುಕಿಗೆ ಅಂತ್ಯ ಹೇಳಲಿದ್ದಾರಂತೆ.
ಸಿನಿಮಾರಂಗದಿಂದ ನಿವೃತ್ತಿ ಪಡೆಯಲಿರುವ ನಟ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈಗ 72 ವರ್ಷ ವಯಸ್ಸಾಗಿದೆ. ಅವರು ಸಿನಿಮಾರಂಗಕ್ಕೆ ಬಂದು 48 ವರ್ಷವಾಯಿತು. ಈ ವರ್ಷವೂ ಅವರ ಸಿನಿಮಾ ಡೇಟ್ಸ್ ಗಳು ಈಗಾಗಲೇ ಬುಕ್ ಆಗಿವೆ. ಬಂದು ಸಿನಿಮಾ ಬಿಡುಗಡೆಯಾಗಿದ್ದರೆ ಇನ್ನೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿವೆ.
ಮತ್ತೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಇನ್ನು ಕೆಲವು ಸಿನಿಮಾಗಳ ಬಳಿಕ ತಲೈವಾ ಬಣ್ಣದ ಬದುಕಿಗೆ ಗುಡ್ ಬೈ ಹೇಳುತ್ತಾರಂತೆ. ನಟ ರಜನಿಕಾಂತ್ ಸಿನಿಮಾ ಲೈಫ್ ನಿಂದ ನಿವೃತ್ತಿ ಪಡೆಯುತ್ತಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ.
ನಟ ರಜನಿಕಾಂತ್ ಕೊನೆಯ ಸಿನಿಮಾ
ನಟ ರಜನಿಕಾಂತ್ ಅವರು ಲೋಕೇಶ್ ಕನಗರಾಜ್ ಅವರ ನಿರ್ದೇಶನದಲ್ಲಿ ಕೊನೆಯ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಈ ಸಿನಿಮಾ ಅವರ 171 ನೇ ಸಿನಿಮಾ ಆಗಿದೆಯಂತೆ. ಈ ಸಿನಿಮಾದ ನಂತರ ನಟ ರಜನಿಕಾಂತ್ ನಟನೆಯಿಂದ ಹಿಂದೆ ಸರಿಯುತ್ತಾರೆ ಎನ್ನಲಾಗುತ್ತಿದೆ.
ಕೊನೆಯ ಸಿನಿಮಾದಲ್ಲಿ ರಜನಿಕಾಂತ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಬೇಕಾದ ತಯಾರಿ ಮಾಡುತ್ತಿದ್ದಾರಂತೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಆಗುತ್ತಿದೆ.