Actor Rakesh Adiga: ಬಿಗ್ ಬಾಸ್ ಮನೆಯಿಂದ ಹೊರ ಬಂದ ರಾಕೇಶ್ ಈಗೇನು ಮಾಡುತ್ತಿದ್ದಾರೆ, ಇಲ್ಲಿದೆ ಮಾಹಿತಿ.
ರಾಕೇಶ್ ಅಡಿಗ ಅವರು ಇದೀಗ ಲೈಪ್ ಆಫ್ ಕಾಕ್ರೋಚ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗುತ್ತಿದ್ದರೆ.
Rakesh Adiga New Movie: ಬಿಗ್ ಬಾಸ್ ಸೀಸನ್ 9 (Bigg Boss Season 9)ಗೆ ಬಂದಿದ್ದ ರಾಕೇಶ್ ಅಡಿಗ (Rakesh Adiga)ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡು ವೀಕ್ಷಕರ ಮನ ಗೆದ್ದಿದ್ದರು. ಬಿಗ್ ಬಾಸ್ ಸೀಸನ್ 9 ರಲ್ಲಿ ರನ್ನರ್ ಅಪ್ ಆಗಿ ರಾಕೇಶ್ ಅಡಿಗ ಹೊರ ಬಂದಿದ್ದರು. ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ ಆಗಿದ್ದಕ್ಕೆ ರಾಕೇಶ್ ಅಭಿಮಾನಿಗಳು ಕಿಡಿ ಕಾರಿದ್ದರು. ರಾಕೇಶ್ ಅವರೇ ವಿನ್ ಆಗಬೇಕಿತ್ತು. ಈಸಲ ಜಡ್ಜ್ಮೆಂಟ್ ಕೊಟ್ಟಿದ್ದು ಸರಿ ಆಗಲಿಲ್ಲ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ರಾಕೇಶ್ ಅಡಿಗ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡುತ್ತಿದೆ.
ಬಿಗ್ ಬಾಸ್ ನಂತರ ರಾಕೇಶ್ ಅಡಿಗ ಸಿನಿಮಾ ಮಾಡುತ್ತಿದ್ದಾರೆ
ರಾಕೇಶ್ ಅಡಿಗ ಅವರು ಇದೀಗ ಲೈಪ್ ಆಫ್ ಕಾಕ್ರೋಚ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗುತ್ತಿದ್ದರೆ. ಈ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದೆ. ಹೀರೋ ಆಗಿ ಮಾತ್ರವಲ್ಲ, ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ತೆಗೆದುಕೊಂಡಿದ್ದಾರೆ.
ಲೈಪ್ ಆಫ್ ಕಾಕ್ರೋಚ್ ಸಿನಿಮಾ
ಸದ್ಯ ಲೈಪ್ ಆಫ್ ಕಾಕ್ರೋಚ್ ಸಿನಿಮಾದ ಟೀಸರ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಸದ್ಯದಲ್ಲಿ ಈ ಬಗ್ಗೆ ನಟ ರಾಕೇಶ್ ಅಪ್ಡೇಟ್ ಹಂಚಿಕೊಳ್ಳಲಿದ್ದಾರೆ.
ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ರಾಕೇಶ್ ಅಡಿಗ
ನಟ ರಾಕೇಶ್ ಅಡಿಗ ಅವರಿಗೆ ಬಿಗ್ ಬಾಸ್ ಸೀಸನ್ 9 ರ ನಂತರ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇನ್ನು ನಟ ರಾಕೇಶ್ ಅಡಿಗ ಮತ್ತೆ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರ.