Shah Rukh Khan: ಹಿಂದೂ ಹುಡುಗಿಯನ್ನು ಮದುವೆಯಾಗಲು ಹೆಸರು ಬದಲಿಸಿಕೊಂಡ ನಟ ಶಾರುಖ್ ಖಾನ್ ಏನಿದು?

ಹಿಂದೂ ಯುವತಿಯನ್ನು ಮದುವೆಯಾಗಲು ತಮ್ಮ ಹೆಸರನ್ನು ಬದಲಿಸಿಕೊಂಡ ಬಾಲಿವುಡ್ ನ ಕಿಂಗ್ ಖಾನ್.

Actor Shah Rukh Khan: ಬಾಲಿವುಡ್ ನ ಖ್ಯಾತ ನಟರಾದ ಶಾರುಖ್ ಖಾನ್ (Shah Rukh Khan) ಇದೀಗ ಸುದ್ದಿಯಲ್ಲಿದ್ದಾರೆ. ನಟ ಶಾರುಖ್ ಖಾನ್ ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಶಾರುಖ್ ಖಾನ್ ಇದೀಗ ವಯಕ್ತಿಕ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ನಟ ಶಾರುಖ್ ಖಾನ್ ಅವರ ದಾಂಪತ್ಯ ಜೀವನ
ನಟ ಶಾರುಖ್ ಖಾನ್ ಅವರ ದಾಂಪತ್ಯ ಜೀವನದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇದೆ. ನಟ ಶಾರುಖ್ ಖಾನ್ ಅವರು ಗೌರಿ ಎಂಬ ಹಿಂದೂ ಮಹಿಳೆಯನ್ನು ವಿವಾಹ ಆಗಿದ್ದಾರೆ. ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರ ದಾಂಪತ್ಯ ಜೀವನಕ್ಕೆ 32 ವರ್ಷಗಳಾಗುತ್ತಾ ಬಂದಿವೆ.

Shah Rukh khan wife gowri khan.
Image Credit: Livemint

ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತಕರಾರುಗಳು ಇರುವ ನಡುವೆಯೂ ಈ ದಂಪತಿ ಮೂರೂ ದಶಕಗಳಿಂದ ಸುಖವಾದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ನಟ ಶಾರುಖ್ ಖಾನ್ ವಯಸ್ಸು 57 ಆದರೂ ಚಿತ್ರರಂಗದಲ್ಲಿ ನಾಯಕ ನಟನಾಗಿಯೇ ಮಿಂಚುತ್ತಿದ್ದಾರೆ. ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬ್ಯುಸಿ ಆಗಿದ್ದಾರೆ.

ಹಿಂದೂ ಹುಡುಗಿಯನ್ನು ಮದುವೆಯಾಗಲು ಹೆಸರು ಬದಲಿಸಿಕೊಂಡ ನಟ ಶಾರುಖ್ ಖಾನ್
ಇದೀಗ ನಟ ಶಾರುಖ್ ಖಾನ್ ಹಾಗು ಗೌರಿ ಖಾನ್ ಅವರ ಮದುವೆಯ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ನಟ ಶಾರುಖ್ ಖಾನ್ ಹಿಂದೂ ಯುವತಿಯನ್ನು ಮದುವೆಯಾಗಲು ತಮ್ಮ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದರಂತೆ.

ಶಾರುಖ್ ಖಾನ್ ಮದುವೆಗಾಗಿ ಜೀತೆಂದ್ರ ಕುಮಾರ್ ತುಲ್ಲಿ ಎಂದು ಹೆಸರು ಬದಲಿಸಿಕೊಂಡಿದ್ದರಂತೆ. ಮುಷ್ತಾಕ್ ಶೇಖ್ ಅವರು ಬರೆದಿರುವ ಪುಸ್ತಕದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಹಿಂದೂ ಯುವತಿಯನ್ನು ಆರ್ಯ ಸಮಾಜದಲ್ಲಿ ಹಿಂದೂ ಸಂಪ್ರದಾಯಂತೆ ಮದುವೆಯಾಗಲು ಶಾರುಖ್ ಖಾನ್ ಹೆಸರು ಬದಲಾಯಿಸಿದ್ದರಂತೆ.

Join Nadunudi News WhatsApp Group

Shah Rukh khan and Gowri Khan marriage secrete.
Image Credit: Tribuneindia

ಇನ್ನು ಅಷ್ಟಕ್ಕೂ ಅವರು ಈ ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಅವರ ಅಜ್ಜಿಯೆಂದು ಪುಸ್ತಕದಲ್ಲಿ ಬರೆಯಲಾಗಿದೆ. ಇಬ್ಬರು ಮಹಾನ್ ಹಿರಿಯ ನಟರ ಹೆಸರು ಇಟ್ಟುಕೊಳ್ಳುವಂತೆ ತಮ್ಮ ಅಜ್ಜಿ ಹೇಳಿರುವುದಾಗಿ ಶಾರುಖ್ ಖಾನ್ ಹೇಳಿದ್ದಾರೆ.

ನಟರಾದ ಜೀತೇಂದ್ರ ಹಾಗೂ ರಾಜೇಂದ್ರ ಕುಮಾರ್ ಇವರ ಪೂರ್ತಿ ಹೆಸರು ರಾಜೇಂದ್ರ ಕುಮಾರ್​ ತುಲ್ಲಿ ಅವರ ಹೆಸರನ್ನು ಸೇರಿಸಿಕೊಂಡು ತಮ್ಮ ಹೆಸರನ್ನು ಇಟ್ಟುಕೊಂಡಿದ್ದರಂತೆ. ಅಜ್ಜಿ ಯಾವಾಗಲೂ ನೀನು ನೋಡೋಕೆ ಜಿತೇಂದ್ರ ರೀತಿಯೇ ಕಾಣುತ್ತಿ ಎನ್ನುತ್ತಿದ್ದರು. ಅದೇ ಕಾರಣಕ್ಕೆ ಆ ಹೆಸರನ್ನು ಆರಿಸಿಕೊಂಡೆ ಎಂದು ನಟ ಶಾರುಖ್ ಖಾನ್ ಹಿಂದೊಮ್ಮೆ ಹೇಳಿದ್ದಾರೆ.

Join Nadunudi News WhatsApp Group