Ads By Google

Shiva Rajkumar Speech: ಅಭಿಮಾನಿಗಳಿಗೆ ಬಾಸ್ ಯಾರು ಎಂದು ಅಭಿಮಾನಿಗಳಿಗೆ ತಿಳಿಸಿ ಹೇಳಿದ ಶಿವಣ್ಣ.

Shivanna told the fans who is the boss of the fans.

Image Source: India Today

Ads By Google

Shiva Rajkumar Speech: ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ (Shivraj Kumar) ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಛಾಪು ಮೂಡಿಸಿದ್ದಾರೆ.

ಖ್ಯಾತ ನಟ ಶಿವರಾಜ್ ಕುಮಾರ್ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಅವರ 125 ವೇದ ಸಿನಿಮಾ ಈಗಾಗಲೇ ತೆರೆ ಮೇಲೆ ಬಂದಿದ್ದು ಹಲವಾರು ಜನರ ಮೆಚ್ಚುಗೆ ಪಡೆದುಕೊಂಡಿದೆ.

Image Source: India Today

ಅಭಿಮಾನಿಗಳಿಗೆ ಕಿವಿಮಾತು ಹೇಳಿದ ನಟ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಹಲವಾರು ಬಾರಿ ನೇರ ಮಾತುಗಳನ್ನು ಆಡಿದ್ದಾರೆ. ಬಾಸ್ ಬಿರುದಿಗಾಗಿ ಅಭಿಮಾನಿಗಳ ಮಧ್ಯೆ ಕಿತ್ತಾಟ ನಡೆದಿದೆ. ಹಲವು ಸ್ಟಾರ್ ಗಳ ಅಭಿಮಾನಿಗಳು ಈ ವಿಚಾರಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಜಗಳ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವರಾಜ್​ಕುಮಾರ್ ಅವರು ಕಿವಿಮಾತು ಹೇಳಿದ್ದಾರೆ. ಎಲ್ಲರಿಗೂ ಒಬ್ಬರೇ ಬಾಸ್. ಅದು ದೇವರು ಎಂದಿದ್ದಾರೆ.

ನಾನೊಬ್ಬನೇ ಬಾಸ್ ಅಲ್ಲ ಶಿವಣ್ಣ ಹೇಳಿಕೆ
ನವೆಂಬರ್ 28 ರಂದು ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಡಾ. ರಾಜ್ ಕುಮಾರ್ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿ ಆಗಿದ್ದರು.

Image Source: India Today

ಈ ಕಾರ್ಯಕ್ರಮದಲ್ಲಿ ಅವರು ಬಾಸ್ ವಿಚಾರವಾಗಿ ಮಾತನಾಡಿದ್ದಾರೆ. ಎಲ್ಲರಿಗೂ ಬಾಸ್ ಒಬ್ಬರೇ ದೇವರು. ಏಕೆ ಬಾಸ್ ಬಾಸ್ ಅಂತ ಒದ್ದಾಡ್ತಿದ್ದೀರಾ, ಎಲ್ಲರ ಮನೆಯಲ್ಲೂ ಒಬ್ಬಬ್ಬು ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲಿ ಒಬ್ಬ ಬಾಸ್ ಇರುತ್ತಾನೆ. ಮನೆಗೆ ಅವನೇ ಬಾಸ್. ನಾನೊಬ್ಬನೇ ಬಾಸ್ ಅಲ್ಲ ಎಂದು ಹೇಳಿದ್ದಾರೆ ಶಿವರಾಜ್ ಕುಮಾರ್.

ನಟ ಶಿವರಾಜ್ ಕುಮಾರ್ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಅಲ್ಲದೆ ಜನರ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ನಟ ಶಿವರಾಜ್ ಕುಮಾರ್ ಚಿತ್ರರಂಗದಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದಾರೆ.

Image Source: Times Of India
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field