Shivarajkumar Politics Entry: ರಾಜಕೀಯಕ್ಕೆ ಬರುವುದರ ಬಗ್ಗೆ ಸ್ಪಷ್ಟನೆ ನೀಡಿದ ಶಿವರಾಜ್ ಕುಮಾರ್, ಮೆಚ್ಚಿದ ಅಭಿಮಾನಿಗಳು.

Shivarajkumar Politics Entry: ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ (Shivrajkumar) ಕನ್ನಡ ಹೆಮ್ಮೆಯ ನಟ. ನಟ ಶಿವರಾಜ್ ಕುಮಾರ್ ಕನ್ನಡಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಅವರ ಸಿನಿ ಜರ್ನಿಯಲ್ಲಿ ಒಂದು ವಿವಾದಕ್ಕೂ ಕೂಡ ಒಳಗಾಗದ ನಟ.

Shivraj Kumar clarified about entering politics
Image Credit: ottplay

ರಾಜಕೀಯ ಪ್ರವೇಶಕ್ಕೆ ನಿರಾಕರಿಸಿದ ರಾಜಕುಮಾರ್
ಪ್ರತಿ ಸಾರಿಯೂ ಚುನಾವಣೆ ಬಂದಾಗ ಡಾ. ರಾಜ್ (D.Raj) ಕುಟುಂಬದ ಹೆಸರು ಕಾಣಿಸಿಕೊಳ್ಳುತ್ತದೆ. ಅದು ರಾಜಕುಮಾರ್ ಕಾಲದಿಂದಲೂ ಕೇಳಿ ಬರುತ್ತಿದೆ.

ಈ ಹಿಂದೆ ರಾಜಕುಮಾರ್ (Rajakumar) ಅವರನ್ನು ಚುನಾವಣೆಗೆ ನಿಲ್ಲಿಸವ ಕಸರತ್ತು ನಡೆಯಿತು. ಆದರೆ ರಾಜಕೀಯ ಪ್ರವೇಶಕ್ಕೆ ಅವರು ನಿರಾಕರಿಸಿದರು. ರಾಜಕೀಯ ಪಕ್ಷಗಳಿಂದ ಸದಾ ಅಂತವರನ್ನೇ ಕಾಯ್ದುಕೊಂಡು ಬಂದರು. ಚುನಾವಣೆಯ ನಿಲ್ಲಿಸುವ ವಿಚಾರ ಜೋರಾದಾಗ ತಪ್ಪಿಸಿಕೊಂಡು ಓಡಾಡಿದರು.

Actor Shivraj Kumar who said that he will not join politics
Image Credit: ottplay

ರಾಜಕೀಯ ಪ್ರವೇಶಕ್ಕೆ ನಿರಾಕರಿಸಿದ ಪುನೀತ್ ರಾಜಕುಮಾರ್
ರಾಜಕುಮಾರ್ ನಂತರ ಹೆಸರು ಬಂದಿದ್ದು ಪುನೀತ್ ರಾಜಕುಮಾರ್ (Puneeth Rajakumar) ಅವರದ್ದು. ಬೆಂಗಳೂರಿನಲ್ಲಿ ಪುನೀತ್ ಅವರು ಮೋದಿಯನ್ನು ಭೇಟಿಯಾದಾಗ ಪುನೀತ್ ಬಿಜೆಪಿ ಸೇರಿಕೊಳ್ಳುತ್ತಾರೆ ಎನ್ನುವ ಸುದ್ದಿ ಆಯಿತು. ಅಲ್ಲದೆ ಬಿಜೆಪಿಯ ಹಲವು ಮುಖಂಡರು ಪುನೀತ್ ಅವರ ಮನೆಯಲ್ಲಿ ಭೇಟಿ ಮಾಡಿದರು. ಆಗಂತು ಇನ್ನು ದೊಡ್ಡ ಸುದ್ದಿ ಆಯಿತು.

ನಂತರ ಪುನೀತ್ ರಾಜಕುಮಾರ್ ರಾಜಕೀಯಕ್ಕೆ ಬರವುದಿಲ್ಲ ಎಂದು ಸ್ಪಷ್ಟನೆ ಪಡಿಸಿದರು. ತಮಗೂ ರಾಜಕೀಯಕ್ಕೂ ಯಾವುದೇ ಕಾರಣಕ್ಕೂ ನಂಟು ಇರುವುದಿಲ್ಲ ಎಂದು ಮಾತನಾಡಿದರು.

Join Nadunudi News WhatsApp Group

Actor Shiva Rajkumar said that I am not fit for politics and I will not enter politics
Image Credit: ottplay

ರಾಜಕೀಯ ಪ್ರವೇಶಕ್ಕೆ ನಿರಾಕರಿಸದ ನಟ ಶಿವರಾಜ್ ಕುಮಾರ್
ಈ ನಡುವೆ ನಟ ಶಿವರಾಜ್ ಕುಮಾರ್ ಹೆಸರು ಕೂಡ ರಾಜಕಾರಣದಲ್ಲಿ ಕೇಳಿ ಬಂದಿದೆ. ಶಿವರಾಜ್ ಕುಮಾರ್ ಪತ್ನಿ ಗೀತಾ (Geetha) ಅವರು ಈಗಾಗಲೇ ರಾಜಕೀಯ ಅಖಾಡ ಪ್ರವೇಶ ಮಾಡಿದ್ದಾರೆ.

ಹಾಗಾಗಿ ಸಹಜವಾಗಿಯೇ ಶಿವಣ್ಣ ಹೆಸರು ತೇಲಿ ಬಂದಿದೆ. ಈ ಕುರಿತು ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ತಮಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾವು ರಾಜಕಾರಣ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Join Nadunudi News WhatsApp Group