ಕನ್ನಡದ ಖ್ಯಾತ ನಟ ಶಿವರಾಮ್ ಅವರ ಸ್ಥಿತಿ ಬಹಳ ಗಂಭೀರ, ಸಾವು ಬದುಕಿನ ನಡುವೆ ಹೋರಾಟ, ಆಗಿದ್ದೇನು ನೋಡಿ.

ಕನ್ನಡ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಅನ್ನುವುದು ಮತ್ತೆ ಮತ್ತೆ ಸಾಭೀತಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕನ್ನಡ ಚಿತ್ರರಂಗಕ್ಕೆ ಕಪ್ಪುಮೋಡ ಆವರಿಸಿದೆ ಎಂದು ಹೇಳಬಹುದು. ಕನ್ನಡ ಚಿತ್ರರಂಗಕ್ಕೆ ಪ್ರತಿದಿನ ಶಾಕಿಂಗ್ ಸುದ್ದಿ ಬರುತ್ತಿದ್ದು ಇದು ಚಿತ್ರರಂಗಕ್ಕೆ ತುಂಬಲಾರದ ತುತ್ತಾಗಿ ಪರಿಣಮಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ವರ್ಷಗಳಿಂದ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ಎಂದೇ ಒಂದು ಕಾಲದಲ್ಲಿ ಹೆಸರನ್ನ ಗಳಿಸಿಕೊಂಡಿದ್ದ ಖ್ಯಾತ ನಟ ಶಿವರಾಮ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದು ಜನರು ಇವರ ಆರೋಗ್ಯದಲ್ಲಿ ಆದಷ್ಟು ಬೇಗ ಚೇತರಿಕೆ ಕಂಡುಬರಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡುತ್ತಿದ್ದಾರೆ.

ಹಾಗಾದರೆ ಶಿವರಾಮ್ ಅವರಿಗೆ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ನೀವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ. ಹೌದು ಸ್ನೇಹಿತರೆ ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ಎನಿಸಿಕೊಂಡಿರುವ ನಟ ಶಿವರಾಮ್ ಅವರ ಆರೋಗ್ಯ ಬಹಳ ಗಂಭೀರವಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ಮೊನ್ನೆ ಶಿವರಾಮ್ ಅವರ ಕಾರು ಅಪಘಾತವಾಗಿದ್ದು ಅವರಿಗೆ ಗಾಯಗಳು ಆಗಿದ್ದವು ಮತ್ತು ಕಳೆದ ಮೂರೂ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಂಡು ಮನೆಗೆ ಬಂದಿದ್ದರು ಎಂದು ಅವರ ಪುತ್ರ ರವಿಶಂಕರ್ ಅವರು ಮಾಹಿತಿಯನ್ನ ನೀಡಿದರು.

Actor shivaram

ಇನ್ನು ಮೊನ್ನೆ ರಾತ್ರಿ ಶಿವರಾಮ್ ಅವರು ಅಯ್ಯಪ್ಪನ ಪೂಜೆಯನ್ನ ಮಾಡಲು ರೂಮ್ ಒಳಗೆ ಹೋಗಿದ್ದರು ಮತ್ತು ಆ ಸಮಯದಲ್ಲಿ ಅವರು ಅಲ್ಲಿ ಜಾರಿ ಬಿದ್ದಿದ್ದರು ಎಂದು ಹಿರಿಯ ಪುತ್ರ ರವಿಶಂಕರ್ ಅವರು. ಅವರು ನೆಲಕ್ಕೆ ಬಲವಾಗಿ ಬಿದ್ದ ಕಾರಣ ಅವರಿಗೆ ತಲೆಗೆ ಗಂಭೀರ ಪೆಟ್ಟಾಗಿದ್ದು ಅವರಿಗೆ ಮೆದುಳಿಗೆ ಕೂಡ ಬಲವಾದ ಪೆಟ್ಟಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು ಬಿದ್ದ ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ತಲೆಯನ್ನ ಸ್ಕ್ಯಾನ್ ಮಾಡಿದ ಸಮಯದಲ್ಲಿ ಮೆದುಳಿನಲ್ಲಿ ರಕ್ತಶ್ರಾವವಾಗಿರುವುದು ತಿಳಿದುಬಂದಿದೆ ಎಂದು ಪುತ್ರ ಹೇಳಿದ್ದಾರೆ.

ಇನ್ನು ನಮ್ಮ ತಂದೆಗೆ ತುಂಬಾ ವಾಯಸ್ಸಾದ ಕಾರಣ ಅವರಿಗೆ ಸರ್ಜರಿ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ ಕಾರಣ ಅವರನ್ನ ICU ನಲ್ಲಿ ಇಡಲಾಗಿದೆ ಎಂದು ಪುತ್ರ ರಚಿಶಂಕರ್ ಹೇಳಿದ್ದಾರೆ. ಇನ್ನು ಸದ್ಯ ಶಿವರಾಮ್ ಅವರನ್ನು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಶಿವರಾಮ್ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದ್ದಾರೆ. ಸ್ನೇಹಿತರೆ ನಟ ಶಿವರಾಮ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Actor shivaram

Join Nadunudi News WhatsApp Group