Kiccha Sudeep Instagram: ಚಹಲ್, ಪ್ರಥ್ವಿ ಶಾ ಅವರನ್ನು ಭೇಟಿ ಮಾಡಿದ ಕಿಚ್ಚ, ಫೋಟೋ ವೈರಲ್.
Kiccha Sudeep With Yuzvendra Chaha And Prithvi Shaw: ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ಇದೀಗ ತಮ್ಮ ಹೊಸ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ನಟ KCC ಯಲ್ಲಿ ಬ್ಯುಸಿ ಆಗಿದ್ದರು.
ಇದೀಗ ನಟ ಕಿಚ್ಚ ಸುದೀಪ್ ಟೀಮ್ ಇಂಡಿಯಾದ ಯುವ ಕ್ರಿಕೆಟಿಗರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ. ಅವರ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಇವರ ಫೋಟೋಗಳು ಬಾರಿ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಅವರಿಗೆ ಸಿನಿಮಾದ ಮೇಲೆ ಎಷ್ಟು ಪ್ರೀತಿ ಇದೆಯೋ ಹಾಗೆ ಅವರಿ ಕ್ರಿಕೆಟ್ ಅನ್ನು ಕೂಡ ಪ್ರೀತಿಸುತ್ತಾರೆ. ಕ್ರಿಕೆಟ್ ಬಗ್ಗೆ ಕಿಚ್ಚ ಅವರಿಗೆ ವಿಶೇಷ ಆಸಕ್ತಿ ಇದೆ. ಈಗಾಗಲೇ ಸಾಕಷ್ಟು ಕ್ರಿಕೆಟಿಗರನ್ನು ನಟ ಕಿಚ್ಚ ಸುದೀಪ್ ಭೇಟಿ ಮಾಡಿದ್ದರು. ಅವರ ಜೊತೆಗಿನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದರು.
ಇದೀಗ ಮತ್ತೆ ಟೀಮ್ ಇಂಡಿಯಾದ ಯುವ ಕ್ರಿಕೆಟಿಗರ ಜೊತೆ ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಸೇರಿದ್ದಾರೆ. ಎಲ್ಲರು ಸೇರಿ ಪಾರ್ಟಿ ಮಾಡಿದ್ದಾರೆ. ಈ ವಿಶೇಷ ಸಂದರ್ಭದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.
View this post on Instagram
ಚಹಲ್, ಪ್ರಥ್ವಿ ಶಾ ಅವರನ್ನು ಭೇಟಿ ಮಾಡಿದ ಕಿಚ್ಚ
ಇದೀಗ ಸುದೀಪ್ ಕುಟುಂಬದೊಂದಿಗೆ ಚಹಲ್, ಪ್ರಥ್ವಿ ಶಾ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಕ್ರಿಕೆಟ್ ಆಟಗಾರರು ಪಾರ್ಟಿ ಮಾಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟಿಗರ ಜೊತೆಗಿನ ಫೋಟೋಗಳನ್ನು ನಟ ಕಿಚ್ಚ ಸುದೀಪ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟಿಗರ ಜೊತೆ ಸುದೀಪ್ ಮಗಳು ಕೂಡ ಫೋಟೋಗೆ ಸ್ಮೈಲ್ ಮಾಡಿದ್ದಾರೆ. ಲವ್ಲಿ ಇವನಿಂಗ್ ಎಂದು ಕ್ಯಾಪ್ಷನ್ ಕೊಡುವ ಮೂಲಕ ಫೋಟೋಗಳನ್ನು ಕಿಚ್ಚ ಶೇರ್ ಮಾಡಿದ್ದಾರೆ. ಇವರ ಫೋಟೋಗಳು ಇದೀಗ ಕಿಚ್ಚನ ಅಭಿಮಾನಿ ವಲಯದಲ್ಲಿ ಹರಿದಾಡುತ್ತಿದೆ. ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.