Upendra And Deepika Padukone: ನಟಿ ದೀಪಿಕಾ ಪಡುಕೋಣೆ ನೆನಪು ಮಾಡಿಕೊಂಡ ಉಪ್ಪಿ, ನಾನು ತುಂಬಾ ಲಕ್ಕಿ ಅಂದ ಉಪೇಂದ್ರ.
Actor Upendra And Deepika Padukone Aishwarya Movie: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕಬ್ಜ ಸಿನಿಮಾದ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ.
ಕಬ್ಜ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಈಗಾಗಲೇ ಎರಡು ಹಾಡಿನ ಮೂಲಕ ಕಬ್ಜ (Kabzaa) ಸಿನಿಮಾ ಸಾಕಷ್ಟು ಸದ್ದು ಸದ್ದು ಮಾಡಿದೆ. ಈ ಹಾಡನ್ನು ವೀಕ್ಷಿಸಿದ ಸಿನಿ ಪ್ರೇಕ್ಷಕರು ಕಬ್ಜ ಸಿನಿಮಾವನ್ನು ತೆರೆ ಮೇಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ.
ದೀಪಿಕಾ ಪಡುಕೋಣೆ ಅವರನ್ನು ನೆನಪಿಸಿಕೊಂಡ ನಟ ಉಪೇಂದ್ರ
ನಟ ಉಪೇಂದ್ರ ಅವರು ಇತ್ತೀಚಿಗೆ ಮುಂಬೈನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಕಬ್ಜ ಸಿನಿಮಾ ಇದೆ ತಿಂಗಳು ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಲಿದೆ. ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ಕಬ್ಜ ರಿಲೀಸ್ಗೆ ರೆಡಿಯಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿದೆ.
ಸುದೀಪ್ ಹಾಗು ಉಪೇಂದ್ರ ನಟನೆಯ ಕಬ್ಜ ಸಿನಿಮಾ
ನಟ ಸುದೀಪ್ ಹಾಗು ನಟ ಉಪೇಂದ್ರ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಅಭಿಮಾನಿಗಳು ನಟ ಸುದೀಪ್ ಮತ್ತು ನಟ ಉಪೇಂದ್ರ ಅವರು ಜೊತೆಯಾಗಿ ನಟಿಸಿರುವ ಸಿನಿಮಾವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಾರೆ ಎನ್ನಬಹುದು.
ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ನಾನು ಲಕ್ಕಿ ಎಂದು ಹೇಳಿದ ನಟ ಉಪೇಂದ್ರ
ಕಬ್ಜ ಸಿನಿಮಾಗೆ ಸಂಭಂದಿಸಿದ ಮುಂಬೈನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಉಪೇಂದ್ರ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಜೊತೆ ನಾನು ನಟಿಸಿದ್ದಕ್ಕೆ ಲಕ್ಕಿ ಎಂದು ಅವರು ಹೇಳಿದ್ದಾರೆ. ಉಪೇಂದ್ರ ಹಾಗು ದೀಪಿಕಾ ಪಡುಕೋಣೆ 2006 ರಲ್ಲಿ ರೊಮ್ಯಾಂಟಿಕ್ ಸಿನಿಮಾ ಐಶ್ವರ್ಯದಲ್ಲಿ ನಟಿಸಿದ್ದಾರೆ.