Upendra Home: ಉಪೇಂದ್ರ ಖರೀದಿ ಮಾಡಿದ ಹೊಸ ಐಷಾರಾಮಿ ಬಂಗಲೆಯ ಬೆಲೆ ಎಷ್ಟು, ದುಬಾರಿ ಬಂಗಲೆ.

ನಟ ಉಪೇಂದ್ರ ಅವರು ದುಬಾರಿ ಹಣವನ್ನ ನೀಡಿ ಬೆಂಗಳೂರಿನಲ್ಲಿ ಹೊಸ ಮನೆಯನ್ನ ಖರೀದಿ ಮಾಡಿದ್ದಾರೆ.

Upendra Sadashivanagar New Home: ರಿಯಲ್ ಸ್ಟಾರ್ ಉಪೇಂದ್ರ (Real Star Upendra)ಕಬ್ಜ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಇದ್ದಾರೆ. ಇದೀಗ ನಟ ಉಪೇಂದ್ರ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಇದರ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದಾಶಿವನಗರದಲ್ಲಿ ನಟ ಉಪೇಂದ್ರ ದುಬಾರಿ ವೆಚ್ಚದ ಬಂಗಲೆ ಖರೀದಿಸಿದ್ದು ಸುದ್ದಿ ಆಗುತ್ತಿದೆ.

ಹೊಸ ಮನೆ ಖರೀದಿಸಿದ ನಟ ಉಪೇಂದ್ರ
ನಟ ಉಪೇಂದ್ರ ಹಾಗು ಅವರ ಫ್ಯಾಮಿಲಿ ಇಷ್ಟು ದಿನಗಳ ಕಾಲ ಕತ್ರಿಗುಪ್ಪೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದೀಗ ನಟ ಉಪೇಂದ್ರ ಹೊಸ ಬಂಗಲೆಯನ್ನು ಖರೀದಿ ಮಾಡಿದ್ದು ಫ್ಯಾಮಿಲಿ ಸಮೇತ ಸದಾಶಿವನಗರದ ಮನೆಗೆ ಶಿಫ್ ಆಗುತ್ತಿದ್ದಾರೆ. ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಮುಗಿದು ಹೋಗಿದೆ.

upendra new house
Image Source: Filmibeat

ಹೊಸ ಮನೆ ಗೃಹಪ್ರವೇಶ ಮುಗಿಸಿದ ಉಪೇಂದ್ರ ದಂಪತಿ
ಸಾಕಷ್ಟು ದಿನಗಳಿಂದ ನಟ ಉಪೇಂದ್ರ ಹೊಸ ಮನೆಯನ್ನು ಖರೀದಿಸುವ ಲೆಕ್ಕಾಚಾರದಲ್ಲಿ ಇದ್ದಿದ್ದರು. ಕಾಮನ್ ಫ್ರೆಂಡ್ ಮೂಲಕ ಸದಾಶಿವ ನಗರದಲ್ಲಿ ಬಂಗಲೆ ಮಾರಾಟಕ್ಕಿರುವುದು ನಟ ಉಪೇಂದ್ರ ಅವರಿಗೆ ತಿಳಿದು ಬಂದಿದೆ. ಕೂಡಲೇ ಉಪೇಂದ್ರ ಹಾಗು ಪ್ರಿಯಾಂಕಾ ದಂಪತಿ ಹೋಗಿ ನೋಡಿದ್ದಾರೆ.

ಕಾರ್ನರ್ ಸೈಟ್ ಮನೆ ನೋಡಿದ ಕೂಡಲೇ ಅವರಿಗೆ ಇಷ್ಟವಾಗಿದೆ. ನಂತರ ಉಪೇಂದ್ರ ದಂಪತಿ ಆ ಮನೆಯನ್ನು ಖರೀದಿಸಿದ್ದಾರೆ. ನಟ ಉಪೇಂದ್ರ ಇತ್ತೀಚಿಗೆ ಈ ಹೊಸ ಮನೆಯ ಗೃಹಪ್ರವೇಶ ಸಹ ನೆರವೇರಿಸಿದ್ದಾರೆ.

upendra new house
Image Source: Filmibeat

ಉಪೇಂದ್ರ ಐಷಾರಾಮಿ ಬಂಗಲೆಯ ಬೆಲೆ ಎಷ್ಟು
ಸದಾಶಿವನಗರದಲ್ಲಿ ನಟ ಉಪೇಂದ್ರ ಅವರು ಹೊಸ ಮನೆ ಖರೀದಿ ಮಾಡಿದ್ದು ಅದರ ಬೆಲೆ ಅಂದಾಜು 5 ರಿಂದ 6 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. ಆದರೆ ಇದರ ಬಗ್ಗೆ ಉಪೇಂದ್ರ ಅವರಾಗಲಿ ಅವರ ಕುಟುಂಬದವರಾಗಲಿ ಏನು ಹೇಳಿಕೊಂಡಿಲ್ಲ. ಆದರೆ ಮನೆ ಗೃಹಪ್ರವೇಶದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

upendra new house
Image Source: Public Tv

Join Nadunudi News WhatsApp Group