Spandana Death: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ, ಅಷ್ಟಕ್ಕೂ ನಿನ್ನೆ ಬ್ಯಾಂಕಾಕ್ ನಲ್ಲಿ ಆಗಿದ್ದೇನು….?
ನಿನ್ನೆ ಬ್ಯಾಂಕಾಕ್ ನಲ್ಲಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಆಗಿದ್ದೇನು..?
Vijay Raghavendra Wife Death: ಸ್ಯಾಂಡಲ್ ವುಡ್ ನ ಸ್ಟಾರ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನ ಅವರು ಅಕಾಲಿಕ ಮರಣ ಹೊಂದಿದ್ದಾರೆ. ವಿಜಯ್ ಪತ್ನಿ ಸ್ಪಂದನ ಅವರ ಮರಣದ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಿರುವ ವಿಜಯ್ ರಾಘವೇಂದ್ರ ಅವರಿಗೆ ಇದೀಗ ನುಂಗಲಾರದ ನೋವು ಸಂಭವಿಸಿದೆ. ಪತ್ನಿಯ ಮರಣದಿಂದಾಗಿ ನಟ ವಿಜಯ್ ಕಂಗಾಲಾಗಿದ್ದಾರೆ.
ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ
ಕನ್ನಡ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಗೆ ಪ್ರವಾಸಕ್ಕೆ ಹೋದ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ. ಲೋ ಬಿಪಿ ಹಾಗೂ ಹೃದಯಾಘಾತ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಷ್ಟಕ್ಕೂ ಬ್ಯಾಂಕಾಕ್ ನಲ್ಲಿ ಆಗಿದ್ದೇನು
ಇನ್ನು ವಿಜಯ್ ಅವರ ಪತ್ನಿ ಹೃದಯಾಘಾತ ಹೇಗೆ ಸಂಭವಿಸರಬಹದು ಎನ್ನುವ ಬಗ್ಗೆ ಎಲ್ಲರೂ ಯೋಚಿಸಿರುತ್ತಾರೆ. ಸ್ಪಂದನ ತಮ್ಮ ಸ್ನೇಹಿತೆಯರ ಜೊತೆಗೆ ಬ್ಯಾಂಕಾಕ್ ತೆರಳಿದ್ದರು. ಆಗಸ್ಟ್ 6 ರ ಸಂಜೆ ಸ್ಪಂದನ ಅವರಿಗೆ ಎದು ನೋವು ಕಾಣಿಸಿಕೊಂಡಿದೆ. ಎದೆ ನೋವಿನ ಜೊತೆಗೆ ಲೊ ಬಿಪಿ ಕಾಣಿಸಿಕೊಂಡ ಕಾರಣ ಸ್ಪಂದನ ಅವರನ್ನ ಆಸ್ಫತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಸ್ಪಂದನ ಬ್ಯಾಂಕಾಕ್ ಪ್ರವಾಸದ ವೇಳೆ ಹೃದಯಾಘಾತ ಸಂಭವಿಸಿದ್ದು ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪ್ರತೆಯಲ್ಲಿ ಸ್ಪಂದನ ಸಾವು ಬದುಕಿನ ಹೋರಾಟ ನಡೆಸಿದ್ದರು, ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿ ಆಗದೆ ಸ್ಪಂದನ ಇಂದು ನಿಧನರಾಗಿದ್ದಾರೆ. ಸ್ಪಂದನ ಅವರ ಹಠಾತ್ ನಿಧಾನಕ್ಕೆ ಚಿತ್ರರಂಗದವರು, ಹಿತೈಷಿಗಳು, ರಾಜಕೀಯದವರು ಸಂತಾಪ ಸೂಚಿಸುತ್ತಿದ್ದಾರೆ.
ಕೆಲವೇ ದಿನಗಳಲ್ಲಿ ವಿಜಯ್ ಸ್ಪಂದನ ವಿವಾಹ ವಾರ್ಷಿಕೋತ್ಸವ
ಇನ್ನು ವಿಜಯ್ ಅವರು 2007 ಆಗಸ್ಟ್ 26 ರಂದು ಸ್ಪಂದನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಶೌರ್ಯ ಹೆಸರಿನ ಮುದ್ದಾದ ಮಗ ಇದ್ದಾನೆ. ಇನ್ನು ಕೇವಲ 19 ದಿನಗಳಲ್ಲಿ ವಿಜಯ್ ಹಾಗೂ ಸ್ಪಂದನ ವಿವಾಹ ವಾರ್ಷಿಕೋತ್ಸವ ಸಮಾರಂಭ ಬರುತ್ತಿತ್ತು. ಆದರೆ ವಿವಾಹ ವಾರ್ಷಿಕೋತ್ಸವ ಸಮಾರಂಭದ ಖುಷಿಯಲ್ಲಿ ಇರಬೇಕಾದ ಕುಟುಂಬಕ್ಕೆ ಇದೀಗ ಮರಣದ ನೋವು ಎದುರಾಗಿದೆ.