Yash And Narendra Modi: ಮೋದಿ ಬಳಿ ಸ್ಪೆಷಲ್ ಡಿಮ್ಯಾಂಡ್ ಮಾಡಿದ ಯಶ್, ಯಶ್ ಬೇಡಿಕೆ.

Yash And Narendra Modi Aero India: ಏರೋ ಇಂಡಿಯಾ ಶೋ ಉದ್ಘಾಟನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರದಂದು ಬೆಂಗಳೂರಿಗೆ ಭೇಟಿ ನೀಡಿದಾರು. ಈ ವೇಳೆ ಮೋದಿ ಚಿತ್ರರಂಗದ ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರಿಗೆ ಔತಣಕೂಟ ಆವ್ಹಾನ ನೀಡಿದ್ದರು.

ಮೋದಿ ನಡೆಸಿದ ಔತಣ ಕೂಟಕ್ಕೆ ಯಶ್ (Yash), ರಿಷಬ್ (Rishabh Shetty), ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar)  ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಈ ವೇಳೆ ನಟ ಯಶ್ ಮೋದಿ ಅವರ ಬಳಿ ವಿಶೇಷ ಬೇಡಿಕೆ ಇಟ್ಟಿದ್ದಾರೆ.

Actor Yash demanded from Narendra Modi
Image Credit: twitter

ಚಿತ್ರರಂಗದ ಬೆಳವಣಿಗೆಯ ಬಗ್ಗೆ ಮೋದಿ ಜೊತೆ ಯಶ್ ಮಾತುಕತೆ
ನರೇಂದ್ರ ಮೋದಿ ನೀಡಿದ ಡಿನ್ನರ್ ಪಾರ್ಟಿಯಲ್ಲಿ ರಕ್ಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದರು. ಹಾಗು ಮೋದಿ ಅವರ ಬಳಿ ಯಶ್ ಮನವಿ ಮಾಡಿಕೊಂಡಿದ್ದಾರೆ.

ಮೋದಿ ಅವರ ಜೊತೆ ನಡೆದ ಸಂವಾದದಲ್ಲಿ ಕನ್ನಡ ಸಿನಿಮಾ ರಂಗದ ಬೆಳವಣಿಗೆಯ ಬಗ್ಗೆ ಯಶ್ ಮಾತನಾಡಿದ್ದಾರೆ. ಚಿತ್ರರಂಗದ ಬೇಡಿಕೆಯನ್ನು ಯಶ್ ಮೋದಿ ಮುಂದೆ ಇಟ್ಟಿದ್ದಾರೆ.

In the conversation with Modi, Yash spoke about the development of Kannada cinema
Image Credit: instagram

ಮೋದಿ ಬಳಿ ಯಶ್ ಮನವಿ
“ಒಂದು ಒಳ್ಳೆಯ ಫಿಲಂ ಸಿಟಿ ನಿರ್ಮಾಣ ಆಗಬೇಕು ಎಂಬುವುದು ಚಿತ್ರರಂಗದ ಬೇಡಿಕೆ. ಸಿನಿಮಾ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗುವ ಬದಲು ಇಲ್ಲಿಯೇ ಫಿಲಂ ಸಿಟಿ ನಿರ್ಮಾಣ ಮಾಡಿ ಎಂದು ಯಶ್ ಹೇಳಿದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಇರುವಂತಹ ಫಿಲಂ ಸಿಟಿ ನಿರ್ಮಾಣ ಮಾಡಿ” ಎಂದು ಯಶ್ ಅವರು ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.

Join Nadunudi News WhatsApp Group

Actor Yash spoke to Modi about the film industry
Image Credit: twitter

ಇನ್ನು ಪ್ರಧಾನಿ ನರೇಂದ್ರ ಮೋದಿ ನಡೆಸಿದ ಔತಣ ಕೂಟಕ್ಕೆ ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ ಮೋದಿ ಅವರು ಪುನೀತ್ ಅಗಲಿಕೆಯ ಸಂತಾಪವನ್ನು ಸೂಚಿಸಿದ್ದರು.

ಹಾಗೆಯೆ ಕಾಂತಾರ ಸ್ಟಾರ್ ಆದ ರಿಷಬ್ ಶೆಟ್ಟಿ ಅವರನ್ನು ಭೇಟಿ ಮಾಡಿ ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ನಿರ್ಮಾಪಕ ವಿಜಯ ಕಿರಗಂದೂರ್ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಶ್ರದ್ದಾ ಜೈನ್ ಅವರ ಜೊತೆ ಕೂಡ ಮೋದಿ ಸಂವಾದ ನಡೆಸಿದ್ದಾರೆ.

Join Nadunudi News WhatsApp Group