Alia Bhatt: ಮಗು ಆದ ಕೆಲವೇ ತಿಂಗಳಲ್ಲಿ ಆಲಿಯಾ ಮತ್ತು ರಣಬೀರ್ ಡೈವೋರ್ಸ್, ವೈರಲ್ ಆಗಿದೆ ಹೀಗೊಂದು ಸುದ್ದಿ.
ಅತ್ತೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾಗಿಯಾಗದ ನಟಿ ಆಲಿಯಾ ಭಟ್.
Actress Alia Bhatt: ಇದೀಗ ಆಲಿಯಾ ಭಟ್ ಹಾಗು ರಣ್ ಬೀರ್ ಕಪೂರ್ ಅವರ ವಿಚ್ಛೇಧನದ ಸುದ್ದಿ ಮತ್ತೆ ಚರ್ಚೆ ಆಗುತ್ತಿದೆ. ನಟಿ ನೀತು ಕಪೂರ್ ಅವರು ಜುಲೈ 8 ರಂದು 65 ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆದರೆ ಅವರ ಈ ಜನ್ಮದಿನದ ಕೆಲವು ಫೋಟೋಗಳು ಒಂದಷ್ಟು ವದಂತಿಗೆ ಕಾರಣವಾಗಿದೆ. ಈ ಹುಟ್ಟುಹಬ್ಬದಂದು ಅವರ ಸೊಸೆ ಆಲಿಯಾ ಭಟ್ ಕುಟುಂಬದೊಂದಿಗೆ ಇರಲಿಲ್ಲ. ಇದೀಗ ಈ ವಿಚಾರ ಸುದ್ದಿಯಾಗುತ್ತಿದೆ.
ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ಆಲಿಯಾ ಭಟ್
ನಟಿ ನೀತು ಕಪೂರ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಸೊಸೆ ಆಲಿಯಾ ಭಟ್ ಇಲ್ಲದಿರುವುದನ್ನು ನೋಡಿ ನಟಿ ಕಂಗನಾ ರಣಾವತ್ ಮೊದಲು ಈ ವಿಷಯದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಆಲಿಯಾ ಭಟ್ ಮತ್ತು ಕಪೂರ್ ಕುಟುಂಬದ ನಡುವೆ ಎಲ್ಲವೂ ಸರಿಯಾಗಿದೆಯೇ ಎಂಬ ಚರ್ಚೆಗಳು ಬಾಲಿವುಡ್ ನ ಗಾಸಿಪ್ ವಲಯಗಳನ್ನು ನಡೆಯುತ್ತಿದೆ.
ಇನ್ನು ಕಂಗನಾ ಅವರ ಈ ಪೋಸ್ಟ್ ಬೆನ್ನಲ್ಲೇ ಆಲಿಯಾ ಭಟ್ ಮತ್ತು ರಣಭೀರ್ ವಿಚ್ಛೇಧನ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಸಾಮಾಜಿಕ ಜಲತನದಲ್ಲಿ ಹಬ್ಬಿದೆ. ಸದ್ಯ ಈ ಸುದ್ದಿಯ ಕುರಿತಂತೆ ಆಲಿಯಾ ಭಟ್ ಮತ್ತು ರಣಭೀರ್ ಕಪೂರ್ ಎಲ್ಲಿಯೂ ಹೇಳಿಕೆ ನೀಡಿಲ್ಲ. ಆಲಿಯಾ ಭಟ್ ಈ ದಿನಗಳಲ್ಲಿ ತನ್ನ ಮುಂಬರುವ ಬಾಲಿವುಡ್ ಸಿನಿಮಾ ರಾಕೀ ಮತ್ತು ರಾಣಿ ಕಿ ಪ್ರೇಮ್ ಕಹಾನಿ ಮತ್ತು ಹಾಲಿವುಡ್ ಆಫ್ ಸ್ಟೋನ್ ಚಿತ್ರಗಳ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಅತ್ತೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾಗಿಯಾಗದ ನಟಿ ಆಲಿಯಾ ಭಟ್
ನೀತು ಕಪೂರ್ ಇತ್ತೀಚಿಗೆ ಇಟಲಿಯಲ್ಲಿ ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಮಾರಂಭದಲ್ಲಿ ಅವರು ಪುತ್ರ ರಣಬೀರ್ ಕಪೂರ್ ಮತ್ತು ಮಗಳು ರಿದ್ಧಿಮಾ ಕಪೂರ್ ಸಾಹ್ನಿ ಅವರ ಪತಿ ಭಾರತ್ ಸಾಹ್ನಿ ಮತ್ತು ಮಗಳು ಸಮರಾ ಜೊತೆಗಿದ್ದರು. ನೀತು ಕಪೂರ್ ಜೊತೆ ಆಲಿಯಾ ಭಟ್ ಇರಲಿಲ್ಲ.
ಅಲ್ಲದೆ ಬುಧವಾರ ಬೆಳಿಗ್ಗೆ ನೀತು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಈ ಸ್ಟೋರಿಯಲ್ಲಿ ನೀತು ಕಪೂರ್ ಕುಟುಂಬವನ್ನು ಒಟ್ಟಿಗೆ ಇಟ್ಟುಕೊಂಡವರನ್ನು ನಾವು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬಗಳು ಇನ್ನು ಮುಂದೆ ಒಂದೇ ಆಗಿಲ್ಲ ಎಂದು ಬರೆದಿದ್ದಾರೆ.
ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಈ ಲೈನ್ಸ್ ಯಾರಿಗಾಗಿ ಎಂದು ಜನರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಆಲಿಯಾ ಭಟ್ ಗಾಗಿ ಬರೆಯಲಾಗಿದೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಸದ್ಯ ಮಗಳ ಪೋಷಣೆಯಲ್ಲಿ ಆಲಿಯಾ ಭಟ್ ಬಹಳ ಬ್ಯುಸಿ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ.