Anushka Shetty: ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಚಿತ್ರರಂಗ ಬಿಟ್ಟಿದ್ದು ಯಾಕೆ, ಈ ಒಂದು ಕಾರಣಕ್ಕೆ ನಟನೆ ನಿಲ್ಲಿಸಿದ ಅನುಷ್ಕಾ.
ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಇರಲು ಕಾರಣ ಏನು ಎನ್ನುವುದನ್ನು ಬಿಚ್ಚಿಟ್ಟ ಟಾಲಿವುಡ್ ಪತ್ರಕರ್ತ ಚೇಯ್ಯರು ಬಾಲು.
Actress Anushka Shetty Leave Filmy Industry: ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) (Anushka Shetty) ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ.
ಚಿತ್ರರಂಗದಿಂದ ದೂರ ಉಳಿದ ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಯಾರಿಗೂ ಮುಖ ತೋರಿಸದೆ ನಟಿ ಅನುಷ್ಕಾ ಶೆಟ್ಟಿ ಎಲ್ಲರಿಂದ ದೂರ ಇದ್ದಿದ್ದರು. ಇನ್ನೊಬ್ಬರನ್ನು ಕಂಡರೆ ಸಾಕು ನಟಿ ಅನುಷ್ಕಾ ಶೆಟ್ಟಿ ದೂರ ಓಡಿ ಹೋಗುತ್ತಿದ್ದರು.
ಅನುಷ್ಕಾ ಶೆಟ್ಟಿ ಹೀಗೆ ಏಕೆ ಮಾಡಿದ್ದರು, ಯಾವ ಕಾರಣದಿಂದ ಅವರು ಅಷ್ಟೊಂದು ತಿಂಗಳು ಸಾರ್ವಜನಿಕ ಜೀವನದಿಂದ ಹೊರಗೆ ಉಳಿದಿದ್ದರು. ಅದಕ್ಕೆಲ್ಲ ಕಾರಣ ಏನು ಅಂತ ಒಬ್ಬ ವ್ಯಕ್ತಿ ಉತ್ತರ ಕೊಟ್ಟಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಉಳಿಯಲು ಕಾರಣ ಏನು ಗೊತ್ತಾ
ಟಾಲಿವುಡ್ ಪತ್ರಕರ್ತ ಚೇಯ್ಯರು ಬಾಲು ಅವರು ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ದೂರ ಇರಲು ಕಾರಣ ಏನು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಸೈಜ್ ಜೀರೋ ಇದು ಅನುಷ್ಕಾ ಅಭಿನಯದ ಸಿನಿಮಾವಾಗಿದೆ. ಪಾತ್ರ ನಿಜವಾಗಿರಲೆಂದು ಅವರು ತೂಕ ಹೆಚ್ಚಿಸಿಕೊಂಡಿದ್ದರು. ಆ ಶೂಟಿಂಗ್ ಮುಗಿದ ಮೇಲೆ ನಿಜವಾದ ತಾಪತ್ರಯ ಶುರುವಾಯಿತು.
ಆ ತೂಕ ಇಳಿಸಿಕೊಳ್ಳಲು ತುಂಬಾ ಕಷ್ಟಪಟ್ಟರು. ಕೆಲವರ ದೇಹದ ತೂಕ ಇಳಿಸುವ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ಅದನ್ನು ಅವರು ಒಪ್ಪಲಿಲ್ಲ. ಹೀಗಾಗಿ ದೇಹದ ತೂಕದಿಂದ ಅವರು ಎಷ್ಟೋ ತಿಂಗಳು ಮನೆ ಬಿಟ್ಟು ಈಚೆ ಬರಲಿಲ್ಲ. ಯಾರಿಗೂ ಮುಖ ತೋರಿಸಲಿಲ್ಲ. ಒಟ್ಟಿನಲ್ಲಿ ಸಿನಿಮಾ ಹಾಗು ಸಾರ್ವಜನಿಕ ಬದುಕಿನಿಂದ ಹೊರಗೆ ಉಳಿದರು ಎಂದು ಹೇಳಿದ್ದಾರೆ.
ಮತ್ತೆ ಚಿತ್ರರಂಗಕ್ಕೆ ಮರಳಿ ಬರಲಿದ್ದಾರೆ ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ ಕೆರಿಯರ್ ಗ್ರಾಫ್ ಇಳಿಯಲು ಅವರು ತೂಕ ಹೆಚ್ಚಿಸಿಕೊಂಡಿದ್ದು ಕಾರಣವೆಂದು ಹೇಳಿದ್ದಾರೆ. ಸೈಜ್ ಜೀರೋ ಮುಂಚೆಯೇ ಬಾಹುಬಲಿ ಮೊದಲ ಭಾಗ ಮಾಡಿದ್ದರು. ತೂಕವನ್ನು ಹೇಗೋ ಇಳಿಸಿಕೊಂಡ ಮೇಲೆ ಎರಡನೇ ಭಾಗದಲ್ಲಿ ನಟಿಸಿದರು.
ಹೀರೊ ರೀತಿ ಪಾತ್ರದ ನೈಜತೆಗಾಗಿ ನಟಿ ಅನುಷ್ಕಾ ಶೆಟ್ಟಿ ದಪ್ಪಗಾಗಿದ್ದಾರೆ. ಅದನ್ನು ಇಳಿಸಿಕೊಳ್ಳಲು ನಟಿ ಅನುಷ್ಕಾ ಶೆಟ್ಟಿ ಶ್ರಮ ಪಟ್ಟಿದ್ದಾರೆ. ಇದೀಗ ಬಾಹುಬಲಿ ಖ್ಯಾತಿಯಾ ನಟಿ ಅನುಷ್ಕಾ ಶೆಟ್ಟಿ ಮತ್ತೆ ಚಿತ್ರರಂಗಕ್ಕೆ ಮರಳಿ ಬರಲಿದ್ದಾರೆ ಎನ್ನಲಾಗುತ್ತಿದೆ.