Anushree: ಮದುವೆ ಯಾವಾಗ ಎಂದು ಕೇಳಿದವರಿಗೆ ಖಡಕ್ ಉತ್ತರ ನೀಡಿದ ಅನುಶ್ರೀ, ಮದುವೆ ಯಾವಾಗ ಎಂದು ಹೇಳಿದ ಅನುಶ್ರೀ.
ಮದುವೆ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ನಿರೂಪಕಿ.
Actress Anushree About Marriage: ಖ್ಯಾತ ನಿರೂಪಕಿ ಆದ ಅನುಶ್ರೀ (Anushree) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಅನುಶ್ರೀ ಬರಿ ನಿರೂಪಕಿ ಮಾತ್ರವಲ್ಲದೆ ನಟಿ ಸಹ ಆಗಿದ್ದಾರೆ. ನಟಿ ಅನುಶ್ರೀ ಅವರಿಗೆ ಯಾವಾಗಲು ಅಭಿಮಾನಿಗಳಿಂದ ಎದುರಾಗುವ ಪ್ರಶ್ನೆ ಎಂದರೆ ಅದು ಮದುವೆ ವಿಚಾರ. ನಟಿ ಅನುಶ್ರೀಗೆ ಯಾವಾಗ ಮದುವೆಯಾಗುತ್ತೀರಾ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ.
ನಟಿ ಅನುಶ್ರೀ ಮದುವೆ ಸುದ್ದಿ
ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಮಾಡುವಾಗ ಮದುವೆ ಮ್ಯಾಟರ್ ಅನ್ನೇ ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆ ನಟಿ ಅನುಶ್ರೀ ರಿಯಾಕ್ಟ್ ಮಾಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿಗೆ 36 ವರ್ಷ ವಯಸ್ಸಾಗಿದ್ದು, ಸದಾ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಿ ಬರುತ್ತದೆ. 40 ವರ್ಷದ ಹತ್ತಿರದಲ್ಲಿರುವ ನಟಿ ಅನುಶ್ರೀ ನನ್ನ ಮದುವೆ ವಿಚಾರ ಕೊರಗಜ್ಜನಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. ಈಗ ಮತ್ತೆ ಅದೇ ಪ್ರಸಂಗ ನಟಿಗೆ ಎದುರಾಗಿದೆ. ಅಭಿಮಾನಿಗಳು ಬಿಟ್ಟು ಬಿಡದೆ ಅನುಶ್ರೀ ಅವರನ್ನು ಕಾಡುತ್ತಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟ ನಟಿ ಅನುಶ್ರೀ
ನಿರೂಪಕಿ ಅನುಶ್ರೀ ಅವರು ತಮ್ಮ ನಿರೂಪಣೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಮಾತಿನಲ್ಲೇ ಸಾಕಷ್ಟು ಜನರನ್ನು ಮೋಡಿ ಮಾಡುವ ಅನುಶ್ರೀ ಅವರಿಗೆ ಹಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು. ಹಲವು ಪ್ರಶ್ನೆಗಳಲ್ಲಿ ಅವರ ಮದುವೆಯ ಕುರಿತಾದ ಪ್ರಶ್ನೆಯು ಒಂದಾಗಿತ್ತು. ನಂತರ ಅನುಶ್ರೀ ಅವರು ಮೊದಲ ಬಾರಿಗೆ ಮದುವೆಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಆಡಿದ್ದರು.
ಮದುವೆಯ ಬಗ್ಗೆ ಮಾತನಾಡಿದ ನಿರೂಪಕಿ ಅನುಶ್ರೀ
ಮದುವೆ ಮಾಡಿಕೊಳ್ಳಲು ತುಂಬಾ ಸಮಯವಿದೆ. ಮೊದಲು ಕೆಲಸ ಮಾಡಿಕೊಳ್ಳೋಣ. ಮದುವೆ ಅನ್ನೋದು ಒಂದು ಸುಂದರ ಅನುಭವ ಹಾಗೆ ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ಪ್ಲೀಸ್ ನನ್ನ ಮದುವೆಯ ಬಗ್ಗೆ ಮಾತ್ರ ಕೇಳ್ಬೇಡಿ.
ಮದುವೆಯನ್ನು ಒಬ್ಬ ವ್ಯಕ್ತಿ ಯಾವಾಗ ಯಾಕೆ ಆಗ್ತಾರೆ ಗೊತ್ತಾ, ಮದುವೆ ಅನ್ನೋದು ಸುಂದರ ಅನುಭವ ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ. ಈ ಸಂಬಂಧದ ಒಳಗೆ ಇಬ್ಬರು ಹೋಗಬೇಕು. ಇದಕ್ಕೆಲ್ಲ ಸ್ವಲ್ಪ ಟೈಮ್ ಬೇಕು. ನಿಮಗೆ ಏಜ್ ಆಯ್ತು ಮದುವೆ ಆಗಿ ಅಂತಾರೆ ಹೀಗೆ ಹೇಳಿದ್ರು ಅಂತ ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜ ಮೇಲೆ ಬಿಡ್ತೀನಿ ದೇವರೇ ಎಲ್ಲ ನೋಡಿಕೊಳ್ತಾನೆ ಎಂದು ಅನುಶ್ರೀ ಹೇಳಿದ್ದಾರೆ.