Chaya Singh Husband: ಅಮೃತಧಾರೆ ಛಾಯ ಸಿಂಗ್ ಅವರ ರಿಯಲ್ ಲೈಫ್ ಪತಿ ಯಾರು, ಏನು ಮಾಡುತ್ತಿದ್ದಾರೆ.
ರಿಯಲ್ ಲೈಫ್ ನಲ್ಲಿ ಭೂಮಿಕಾ ಪಾತ್ರ ಮಾಡುತ್ತಿರುವ ನಟಿ ಛಾಯ ಸಿಂಗ್ ಅವರ ಗಂಡನ ಬಗ್ಗೆ ಮಾಹಿತಿ.
Actress Chaya Singh Husband: ಖ್ಯಾತ ನಟಿ ಛಾಯ ಸಿಂಗ್ (Chaya Singh)ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಛಾಯ ಸಿಂಗ್ ಅಮೃತಧಾರೆ ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ.
ನಟ ರಾಜೇಶ್ ಮತ್ತು ನಟಿ ಛಾಯ ಸಿಂಗ್ ನಟನೆಯ ಅಮೃತಧಾರೆ ಧಾರಾವಾಹಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಇದೀಗ ನಟಿ ಛಾಯ ಸಿಂಗ್ ಅವರ ಪರ್ಸನಲ್ ಲೈಫ್ ಬಗ್ಗೆ ಚರ್ಚೆ ಆಗುತ್ತಿದೆ.
ನಟಿ ಛಾಯ ಸಿಂಗ್ ಅಮೃತಧಾರೆ ಧಾರಾವಾಹಿ
ನಟಿ ಛಾಯ ಸಿಂಗ್ ಅಮೃತಧಾರೆ ಧಾರಾವಾಹಿಯಲ್ಲಿ 35 ವರ್ಷವಾದರೂ ಮದುವೆಯಾಗದ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ನಾನು ಹೇಗಿದ್ದೀನೋ ಹಾಗೆ ಸ್ವೀಕರಿಸುವ ಹುಡುಗ ನನ್ನ ಸಂಗಾತಿಯಾಗಿ ಬರಬೇಕು ಅಂತ ಭೂಮಿಕಾ ಅವರು ಬಯಸುತ್ತಿದ್ದಾರೆ.
ಅದೇ ರೀತಿ 45 ವರ್ಷ ದಾಟಿದ ಇನ್ನು ಮದುವೆಯಾಗದ ನಾಯಕ ಗೌತಮ್ ಅವರ ಜೊತೆ ಭೂಮಿಕಾಗೆ ಜೋಡಿ ಮಾಡಲಾಗಿದ್ದು ಈ ಜೋಡಿಯನ್ನು ಈಗಾಗಲೇ ಜನ ಮೆಚ್ಚಿಕೊಂಡಿದ್ದಾರೆ. ಇನ್ನು ಮುಂದಿನ ದಿನದಲ್ಲಿ ಈ ಧಾರಾವಾಹಿಯಲ್ಲಿ ಇವರಿಬ್ಬರು ಹೇಗೆ ಒಂದಾಗುತ್ತಾರೆ ಎಂಬುದನ್ನು ನೋಡಬೇಕಿದೆ.
ಛಾಯ ಸಿಂಗ್ ಅವರ ಗಂಡ ಯಾರು
ಅಮೃತಧಾರೆ ಧಾರಾವಾಹಿ ನಟಿ ಛಾಯಾ ಸಿಂಗ್ ಅವರ ರೀಲ್ ಲೈಫ್ ಸ್ಟೋರಿ ಆಗಿದೆ. ಆದರೆ ರಿಯಲ್ ಲೈಫ್ ನಲ್ಲಿ ಭೂಮಿಕಾ ಪಾತ್ರ ಮಾಡುತ್ತಿರುವ ನಟಿ ಛಾಯ ಸಿಂಗ್ ಅವರ ಜೀವನವೇ ಬೇರೆ ರೀತಿ ಆಗಿದೆ. ನಿಜ ಜೀವನದಲ್ಲಿ ಛಾಯ ಸಿಂಗ್ ಅವರಿಗೆ ಮದುವೆಯಾಗಿದೆ. ಮದುವೆಯಾಗಿ 11 ವರ್ಷ ಕಳೆದಿದೆ.
ಕೃಷ್ಣಾ ಎನ್ನುವ ಹುಡುಗನ ಜೊತೆ ಛಾಯ ಅವರ ಮದುವೆಯಾಗಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಅವರು ಪತಿಯ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಛಾಯಾ ಸಿಂಗ್ ಅವರ ಗಂಡ ಕೃಷ್ಣ ತಮಿಳು ಕಿರುತೆರೆಯ ಜನಪ್ರಿಯ ನಟ. 2010 ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಛಾಯ ಸಿಂಗ್ ಭೇಟಿಯಾಗಿದ್ದರು. ಆನಂದಪುರಾತು ವೀಡ್ ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರನ್ನು ಒಪ್ಪಿಸಿ ಅವರ ಆಶೀರ್ವಾದ ಪಡೆದು 2012 ರಲ್ಲಿ ಮದುವೆಯಾಗಿದ್ದಾರೆ.