Chaya Singh: ಅಮೃತಧಾರೆ ಧಾರವಾಹಿ ಖ್ಯಾತಿಯ ನಟಿ ಛಾಯಾ ಸಿಂಗ್ ಅವರ ನಿಜವಾದ ವಯಸ್ಸು ಎಷ್ಟು…?

ಅಮೃತಧಾರೆ ಧಾರಾವಾಹಿಯಲ್ಲಿ 35 ವರ್ಷವಾದರೂ ಮದುವೆಯಾಗದ ಹುಡುಗಿಯ ಪಾತ್ರ ಮಾಡುತ್ತಿರುವ ನಟಿ ಛಾಯಾ ಸಿಂಗ್ ನಿಜವಾದ ವಯಸ್ಸು ಎಷ್ಟು.

Actress Chaya Singh Age: ಬಹುಭಾಷಾ ನಟಿಯಾದ ಛಾಯಾ ಸಿಂಗ್ (Chaya Singh)ಇತ್ತೀಚಿಗೆ ಧಾರಾವಾಹಿ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ ಎನ್ನಬಹುದು. ಖ್ಯಾತ ನಟಿ ಛಾಯ ಸಿಂಗ್ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ಛಾಯ ಸಿಂಗ್ ಅಮೃತಧಾರೆ ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ನಟ ರಾಜೇಶ್ ಮತ್ತು ನಟಿ ಛಾಯ ಸಿಂಗ್ ನಟನೆಯ ಅಮೃತಧಾರೆ ಧಾರಾವಾಹಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ.

Chaya Singh Amarutadare Serial.
Image Credit: Pinterest

ನಟಿ ಛಾಯಾ ಸಿಂಗ್ ಅವರ ಅಮೃತಧಾರೆ ಧಾರಾವಾಹಿ
ನಟಿ ಛಾಯ ಸಿಂಗ್ ಅಮೃತಧಾರೆ ಧಾರಾವಾಹಿಯಲ್ಲಿ 35 ವರ್ಷವಾದರೂ ಮದುವೆಯಾಗದ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ನಾನು ಹೇಗಿದ್ದೀನೋ ಹಾಗೆ ಸ್ವೀಕರಿಸುವ ಹುಡುಗ ನನ್ನ ಸಂಗಾತಿಯಾಗಿ ಬರಬೇಕು ಅಂತ ಭೂಮಿಕಾ ಅವರು ಬಯಸುತ್ತಿದ್ದಾರೆ.

ಅದೇ ರೀತಿ 45 ವರ್ಷ ದಾಟಿದ ಇನ್ನು ಮದುವೆಯಾಗದ ನಾಯಕ ಗೌತಮ್ ಅವರ ಜೊತೆ ಭೂಮಿಕಾಗೆ ಜೋಡಿ ಮಾಡಲಾಗಿದ್ದು ಈ ಜೋಡಿಯನ್ನು ಈಗಾಗಲೇ ಜನ ಮೆಚ್ಚಿಕೊಂಡಿದ್ದಾರೆ. ಇನ್ನು ಮುಂದಿನ ದಿನದಲ್ಲಿ ಈ ಧಾರಾವಾಹಿಯಲ್ಲಿ ಇವರಿಬ್ಬರು ಹೇಗೆ ಒಂದಾಗುತ್ತಾರೆ ಎಂಬುದನ್ನು ನೋಡಬೇಕಿದೆ.

ಅಮೃತಧಾರೆ ಧಾರಾವಾಹಿ ನಟಿ ಛಾಯಾ ಸಿಂಗ್ ಅವರ ನಿಜವಾದ ವಯಸ್ಸು ಎಷ್ಟು
ಅಮೃತಧಾರೆ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳೊಬ್ಬಳು ವಯಸ್ಸು 35 ಆದರೂ ಮದುವೆ ಆಗದೆ ಇದ್ದರೆ ಸಮಾಜ ಅವರನ್ನು ಹೇಗೆ ನೋಡುತ್ತಾರೆ ಅವಳ ಮನಸ್ಥಿತಿ, ಕುಟುಂಬದ ಪರಿಸ್ಥಿತಿಗಾಗಿ ಹೇಗೆ ಹೊರಡುತ್ತಾಳೆ ಎನ್ನುವುದನ್ನು ಈ ಧಾರಾವಾಹಿಯಲ್ಲಿ ಛಾಯಾ ಸಿಂಗ್ ನಟಿಸುವುದರ ಮೂಲಕ ಹೆಣ್ಣು ಮಕ್ಕಳ ನೆಚ್ಚಿನ ನಟಿಯಾಗಿದ್ದಾರೆ.

Join Nadunudi News WhatsApp Group

Actress Chaya Singh Real Age.
Image Credit: Atozpictures

ಆದರೆ ಅವರ ನಿಜ ಜೀವನದಲ್ಲಿ ಅವರು ಪತಿಯ ಜೊತೆ ಸುಂದರವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ನಿಜ ಜೀವನದಲ್ಲಿ ನಟಿ ಛಾಯಾ ಸಿಂಗ್ ಅವರಿಗೆ 42 ವರ್ಷ ವಯಸ್ಸಾಗಿದೆ. ನಟಿ ಛಾಯಾ ಸಿಂಗ್ ಅವರು ಕನ್ನಡ ಮಾತ್ರವಲ್ಲದೆ ತೆಲುಕ್ ಮಲಯಾಳಂ ನಲ್ಲಿ ಸಹ ನಟಿಸಿ ಜನರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಕನ್ನಡದ ಅಮೃಧಾರೆ ಸೀರಿಯಲ್ ಮೂಲಕ ಮತ್ತಷ್ಟು ಖ್ಯಾತಿ ಪಡೆಯುತ್ತಿದ್ದಾರೆ.

Join Nadunudi News WhatsApp Group