Divya Bharti: 18ನೇ ವಯಸ್ಸಿನಲ್ಲಿ ಮದುವೆ 19ನೇ ವಯಸ್ಸಿನಲ್ಲಿ ನಿಗೂಢ ಸಾವು, ನಿಗೂಢವಾಗಿದೆ ಖ್ಯಾತ ನಟಿ ಸಾವು.

18 ನೇ ವಯಸ್ಸಿನಲ್ಲಿ ಮದುವೆಯಾಗಿ, 19 ನೇ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದ ನಟಿ ದಿವ್ಯ ಭಾರತಿ.

Actress Divya Bharti: ಟಾಲಿವುಡ್ ಚಿತ್ರರಂಗದ ಖ್ಯಾತ ನಟಿ ದಿವ್ಯ ಭಾರತಿ (Divya Bharti) ತಮ್ಮ 16 ನೇ ವಯಸ್ಸಿನಲ್ಲಿಯೇ ಸಾಕಷ್ಟು ಖ್ಯಾತಿ ಪಡೆದಿದ್ದರು. ಇನ್ನು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿ ಪಡೆದ ಈ ನಟಿ ಕೇವಲ 19 ನೇ ವಯಸ್ಸಿನಲ್ಲಿ ದುರಂತ ಸಾವನ್ನು ಕಂಡಿದ್ದಾರೆ.

ನಟಿ ದಿವ್ಯ ಭಾರತಿ ಅವರ ಸಾವು ಈವರೆಗೂ ನಿಗೂಢವಾಗಿದೆ. ಇದೀಗ ನಟಿ ದಿವ್ಯ ಭಾರತಿ ಅವರ ಅಕಾಲಿಕ ಮರಣದ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ.

Actress Divya Bharti has become famous by acting in many films in her young age.
Image Credit: bollywoodmdb

ಟಾಲಿವುಡ್ ನ ಖ್ಯಾತ ನಟಿ ದಿವ್ಯ ಭಾರತಿ
ನಟಿ ದಿವ್ಯ ಭಾರತಿ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ದಿವ್ಯ ಭಾರತಿ ಅವರು ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ತಮಿಳಿನ ನೀಲ ಪೆಣ್ಣೆ ಚಿತ್ರದಲ್ಲಿ ನಟಿಸುವ ಮೂಲಕ ನಟಿ ದಿವ್ಯ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ತೆಲುಗು ಮತ್ತು ತಮಿಳಿನಲ್ಲಿ ನಟಿ ದಿವ್ಯ ಭಾರತಿ ಬಹುಬೇಡಿಕೆಯ ನಟಿ ಆಗಿದ್ದರು. ವಿಶ್ವಾತ್ಮ ಚಿತ್ರದ ಮೂಲಕ ನಟಿ ಬಾಲಿವುಡ್ ಗೆ ಎಂಟ್ರಿ ನೀಡಿ ಇನ್ನಷ್ಟು ಹೆಸರು ಗಳಿಸಿದ್ದರು. ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ ಮೇಲೆ ನಟಿ ಇನ್ನಷ್ಟು ಹೆಚ್ಚಿನ ಆಫರ್ ಗಳನ್ನೂ ಪಡೆದುಕೊಂಡಿದ್ದರು.

Actress Divya Bharti has become famous by acting in many films in her young age.
Image Credit: newsnationtv

ಪ್ರೀತಿ ಮತ್ತು ಮದುವೆಯೇ ನಟಿಯ ದುರಂತ ಸಾವಿಗೆ ಕಾರಣವಾಗಿದೆ
ನಟಿ ಚಿತ್ರರಂಗದಲ್ಲಿ ಕೆಲವೇ ವರ್ಷಗಳು ಸಕ್ರಿಯರಾಗಿದ್ದರು 14 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಿರ್ಮಾಪಕರಾದ ಸಾಜಿದ್ ನಾಡಿಯಾದಲ್ವಾ ಅವರನ್ನು ನಟಿ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಟಿ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಕೆಳಗೆ ಬಿದ್ದು ನಿಧನರಾಗಿದ್ದಾರೆ.

Join Nadunudi News WhatsApp Group

ಇನ್ನು ಕೇವಲ 18 ನೇ ವಯಸ್ಸಿನಲ್ಲಿ ನಟಿ ಮದುವೆಯಾಗಿದ್ದರು. ಮೇ 10 1992 ರಂದು ನಟಿ ಬಾಲಿವುಡ್ ನಿರ್ಮಾಪಕರ ಜೊತೆ ರಹಸ್ಯವಾಗಿ ಮದುವೆಯಾಗಿದ್ದರು. ಆದರೆ ಮಾಡುವೆ ಆಗಿ ಒಂದೇ ವರ್ಷದ ನಂತರ ನಟಿ ದುರಂತ ಅಂತ್ಯ ಕಂಡಿದ್ದಾರೆ. ನಟಿ ದಿವ್ಯ ಭಾರತಿ ಅವರು ಸಾಯುವಾಗ ಅವರಿಗೆ ಕೇವಲ 19 ವರ್ಷಗಳು.

Join Nadunudi News WhatsApp Group