Janhvi Kapoor About Marriage: ಮದುವೆಯ ಬಗ್ಗೆ ಮಾತನಾಡಿದ ನಟಿ ಜಾನ್ವಿ ಕಪೂರ್, ಹುಡುಗ ಇನ್ನು ಸಿಕ್ಕಿಲ್ಲ.
Actress Janhvi Kapoor About Marriage: ಬಾಲಿವುಡ್ ನ ಖ್ಯಾತ ನಟಿ ಜಾನ್ವಿ ಕಪೂರ್ (Janhvi Kapoor)ಇದೀಗ ಬಾರಿ ಸುದ್ದಿಯಲ್ಲಿದ್ದಾರೆ ನಟಿ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು.
ಇನ್ನು ಜೂನಿಯರ್ NTR ಅಭಿನಯದ NTR 30 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಮೂಲಕ ಟಾಲಿವುಡ್ ಚಿತ್ರರಂಗದತ್ತ ನಟಿ ಜಾನ್ವಿ ಮುಖ ಮಾಡಿದ್ದಾರೆ. ಇನ್ನು ಇದೀಗ ಜಾನ್ವಿ ಕಪೂರ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ
ತಮ್ಮ ಮದುವೆಯ ಬಗ್ಗೆ ಮಾತನಾಡಿದ ಜಾನ್ವಿ ಕಪೂರ್
ಜಾನ್ವಿ ಕಪೂರ್ ತಮ್ಮ ಮದುವೆಯನ್ನು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಮಾಡಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ತಿರುಪತಿಯಲ್ಲಿ ಮದುವೆಯಾಗುವುದಾಗಿ ಜಾನ್ವಿ ಸಂದರ್ಶನದಲ್ಲಿ ಹೇಳಿದ್ದಾರೆ. ತಮ್ಮ ಮದುವೆಯ ಮುಂಚಿನ ಕಾರ್ಯಕ್ರಮಗಳಾದ ಸಂಗೀತ ಮತ್ತು ಮೆಹಂದಿಗಾಗಿ ಮೈಲಾಪುರದ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.
ಕೆವಲ ಎರಡು ದಿನಗಳಲ್ಲಿ ಮದ್ವೆಯನ್ನು ಮುಗಿಸಲು ಬಯಸುತ್ತೇನೆ ಮತ್ತು ಮದುವೆ ನಂತರ ರಿಸೆಪ್ಷನ್ ಅಗತ್ಯವೆಂದು ಅವರು ಪರಿಗಣಿಸುವುದಿಲ್ಲ. ಕತ್ರಿನಾ ಮತ್ತು ಕಿಯರ ಅವರಂತೆ, ತನ್ನ ಮದುವೆಯನ್ನು ರಾಯಲ್ ಆಗಿ ಮಾಡಿಕೊಳ್ಳದೆ ಸರಳ ಅಲಂಕಾರಗಳಿಂದ ಕೂಡಿದ ಮದುವೆಯನ್ನು ಬಯಸುತ್ತೇನೆ ಎಂದು ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಮಾತನಾಡಿದ್ದಾರೆ.
ಮಲ್ಲಿಗೆ ಮತ್ತು ಮೇಣದದ ಬತ್ತಿಗಳಿಂದ ಅಲಂಕರಿಸಿದ ಮಂಟಪದಲ್ಲಿ ಏಳು ಸುತ್ತುಗಳ ಸಪ್ತಪದಿ ತೆಗೆದುಕೊಳ್ಳಲು ಇಷ್ಟ ಪಡುತ್ತೇನೆ.
ಕಾಂಜೀವರಂ ಅಥವಾ ಪಾಟ್ಟು ಪವಾಡೈ ಸೀರೆಯನ್ನು ಧರಿಸಲು ಬಯಸುತ್ತೇನೆ, ಹಾಗೂ ಮೆಹಂದಿಗೆ ಪಿಂಕ್ ಮತ್ತು ಸಂಗೀತ್ ಗೆ ಹಳದಿ ಬಣ್ಣದ ಔಟ್ ಫಿಟ್ ಧರಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ನಾನು ಬುದ್ದಿವಂತ ಹಾಗೂ ತಿಳುವಳಿಕೆಯುಳ್ಳ ಗಂಡನನ್ನು ಹುಡುಕುತ್ತಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ.