Janhvi Kapoor Birthday: ಹುಟ್ಟುಹಬ್ಬದ ದಿನದಂದು ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡ ನಟಿ ಜಾನ್ವಿ ಕಪೂರ್.

Actress Janhvi Kapoor Birthday Celebration: ಬಾಲಿವುಡ್ (Bollywood)ನ ಖ್ಯಾತ ನಟಿ ಜಾನ್ವಿ ಕಪೂರ್ (Janhvi Kapoor) ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಜಾನ್ವಿ ಕಪೂರ್ ಹಿರಿಯ ನಟಿ ಶ್ರೀದೇವಿ ಅವರ ಮಗಳಾಗಿದ್ದರು ಸಹ ಅವರಿಗೆ ನಟಿ ಶ್ರೀದೇವಿ ಅವರ ರೀತಿ ಚಿತ್ರರಂಗದಲ್ಲಿ ಗೆಲುವು ಸಿಗಲಿಲ್ಲ.

ನಟಿ ಜಾನ್ವಿ ಕಪೂರ್ ಅವರು ಆದರೂ ಸಹ ಛಲಬಿಡದೆ ಅನೇಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮ್ಮ ಗೆಲುವಿಗಾಗಿ ಕಾಯುತ್ತಿದ್ದಾರೆ. ನಟಿ ಜಾನ್ವಿ ಕಪೂರ್ ಅವರಿಗೂ ಶ್ರೀದೇವಿ ಅವರ ರೀತಿ ಅಭಿಮಾನಿಗಳು ಇದ್ದಾರೆ.

Actress Janhvi Kapoor in new movie with NTR
Image Credit: instagram

ನಟಿ ಜಾನ್ವಿ ಕಪೂರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಾಯಿ ಶ್ರೀದೇವಿ ಅವರ ಹಾದಿಯಲ್ಲೇ ಯುವ ನಟಿ ಜಾನ್ವಿ ಹೆಜ್ಜೆ ಇಡುತ್ತಿದ್ದಾರೆ. ಟಾಲಿವುಡ್‌ ಚಿತ್ರರಂಗದತ್ತ ನಟಿ ಜಾನ್ವಿ ಮುಖ ಮಾಡಿದ್ದಾರೆ.

Actress Janhvi Kapoor shared information about her new film with NTR on her birthday
Image Credit: instagram

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್
ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಜಾನ್ವಿ ಕಪೂರ್, ಗುಡ್ ಲಕ್ ಜೆರ್ರಿ, ಮಿಲಿ ಸೇರಿದಂತೆ ಒಂದಿಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ತಾಯಿ ಶ್ರೀದೇವಿ ಅವರು ಯಶಸ್ಸು ಗಳಿಸಿದಂತೆ ಜಾನ್ವಿ ಕಪೂರ್ ಅವರಿಗೆ ಆ ಸಕ್ಸಸ್ ಸಿಗಲಿಲ್ಲ. ಆದರೂ ಛಲ ಬಿಡದೇ ನಟಿ ಹೆಜ್ಜೆ ಇಡುತ್ತಿದ್ದಾರೆ.

Nay Janhvi Kapoor as the heroine of NTR 30th movie
Image Credit: instagram

ಹುಟ್ಟುಹಬ್ಬದ ದಿನದಂದು ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ ಜಾನ್ವಿ
ನಟಿ ಜಾನ್ವಿ ಕಪೂರ್ ತೆಲುಗು ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಜ್ಯೂ.ಎನ್‌ ಟಿ ಆರ್‌ ಅವರಿಗೆ ನಾಯಕಿಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಜಾನ್ವಿ ತಮ್ಮ ತೆಲುಗಿನ ಮೊದಲ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

Join Nadunudi News WhatsApp Group

Join Nadunudi News WhatsApp Group