Jaya Prada Jail: ನಟಿ ಜಯಪ್ರದ ಅವರಿಗೆ 6 ತಿಂಗಳು ಜೈಲು ಶಿಕ್ಷೆ, ಮಹತ್ವದ ತೀರ್ಪು ನೀಡಿದ ಚನೈ ಕೋರ್ಟ್.

ನಟಿ ಜಯಪ್ರದ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Actress Jaya Prada Jailed: ನಟಿ ಜಯಪ್ರದ (Jaya Prada) ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳೇ ಇರುತ್ತಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆಯನ್ನ ಮಾಡಿರುವ ನಟಿ ಜಯಪ್ರದ ಅವರು ದೇಶದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಕೂಡ ಗಳಿಸಿಕೊಂಡಿದ್ದಾರೆ. ಬರಿ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಸಾಧನೆಯನ್ನ ಮಾಡಿರುವ ನಟಿ ಜಯಪ್ರದ ಅವರು ಕೆಲವು ವಿವಾದಗಳಲ್ಲಿ ಕೂಡ ಸುದ್ದಿಯಾಗಿದ್ದರೂ ಎಂದು ಹೇಳಬಹುದು.

ಹೌದು ನಟಿ ಜಯಪ್ರದ ಅವಾರ್ಯ್ ಕುಟುಂಬದ ವಿಷಯವಾಗಿ ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದಾರೆ. ಇನ್ನು ನಟಿ ಜಯಪ್ರದ ಅವರಿಗೆ ಈಗ ಹೈಕೋರ್ಟ್ ಆರು ತಿಂಗಳು ಜೈಲು ಶಿಕ್ಷೆಯ ಜೊತೆಗೆ ದಂಡವನ್ನ ಕೂಡ ವಿಧಿಸಿದ್ದು ನಟಿ ಜಯಪ್ರದ ಸದ್ಯ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಹೇಳಬಹುದು.

Actress Jaya Prada Jailed
Image Credit: Pinkvilla

ನಟಿ ಜಯಪ್ರದ ಮೇಲೆ ಕೇಸ್ ಹಾಕಿದ ಕೆಲಸಗಾರರು
ಚಿತ್ರರಂಗ, ರಾಜಕೀಯ ಮತ್ತು ಕೆಲವು ವ್ಯವಹಾರಗಳನ್ನ ಮಾಡುತ್ತಿದ್ದ ನಟಿ ಜಯಪ್ರದ ಅವರು ತನ್ನದೇ ಆದ ಸ್ವಂತ ಚಿತ್ರ ಮಂದಿರವನ್ನ ಕೂಡ ಹೊಂದಿದ್ದಾರೆ. ನಟಿ ಜಯಪ್ರದ ಅವರು ತಮ್ಮದೇ ಸ್ವಂತ ಚಿತ್ರ ಮಂದಿರವನ್ನ ನಡೆಸುತ್ತಿದ್ದು ಅಲ್ಲಿ ಸಾಕಷ್ಟು ಜನರು ಕೆಲಸವನ್ನ ಕೂಡ ಮಾಡುತ್ತಿದ್ದಾರೆ. ಹಲವು ಸಮಯಗಳಿಂದ ಚಿತ್ರ ಮಂದಿರದಲ್ಲಿ ಕೆಲಸವನ್ನ ಮಾಡುತ್ತಿದ್ದ ಕೆಲಸಗಾರರು ಸಂಬಳದ ವಿಷಯವಾಗಿ ನಟಿ ಜಯಪ್ರದ ಅವರ ಧಾವೆ ಹೂಡಿದ್ದಾರೆ.

ನಟಿ ಜಯಪ್ರದ ಅವರಿಗೆ 5000 ರೂ ದಂಡ ಮತ್ತು 6 ತಿಂಗಳು ಜೈಲು
ಹೌದು ಚನೈ ನಲ್ಲಿ ಚಿತ್ರ ಮಂದಿರದ ನೌಕರರು ಹಾಕಿದ ಕೇಸ್ ಗೆ ತೀರ್ಪು ಕೊಟ್ಟಿರುವ ಚನೈ ಎಗ್ಮೋರ್ ಕೋರ್ಟ್ ಸದ್ಯ ನಟಿ ಜಯಪ್ರದ ಅವರಿಗೆ ಆರು ತಿಂಗಳು ಜಿಲು ಶಿಕ್ಷೆ ಮತ್ತು 5000 ರೂ ದಂಡವನ್ನ ವಿಧಿಸಿದ್ದು ನಟಿ ಜಯಪ್ರದ ಅವರು ಜೈಲಿಗೆ ಹೋಗುವ ಸುದ್ದಿ ಕೇಳಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರ ಬೇಸರವನ್ನ ಹೊರಹಾಕಿದೆ. ಚಿತ್ರ ಮಂದಿರದಲ್ಲಿ ಕೆಲಸವನ್ನ ಮಾಡುವ ನೌಕರರಿಗೆ ಸರಿಯಾದ ESI ಮತ್ತು ಸಂಬಳವನ್ನ ನೀಡಲಿಲ್ಲ ಅನ್ನುವ ಕಾರಣಕ್ಕೆ ನಟಿ ಜಯಪ್ರದ ಅವರ ಮೇಲೆ ಕೇಸ್ ಹಾಕಲಿತ್ತು.

Actress Jayaprada fined Rs 5000 and jailed for 6 months
Image Credit: Jswtv

ತೆರಿಗೆ ಪಾವತಿಸದ ನಟಿ ಜಯಪ್ರದ
ಹೌದು ನಟಿ ಜಯಪ್ರದ ಅವರು ನೌಕರರಿಗೆ ಸರಿಯಾದ ಸಂಬಳದ ಜೊತೆಗೆ ಥೀಯೇಟರ್ ಮತ್ತು ಕಾಂಪ್ಲೆಕ್ಸ್ ಗೆ 20 ಲಕ್ಷ ರೂ ತೆರಿಗೆ ಕೂಡ ಕಟ್ಟಬೇಕಿರುವುದು ಈ ಸಮಯದಲ್ಲಿ ಬೆಳಕಿಗೆ ಬಂದಿರುತ್ತದೆ.

Join Nadunudi News WhatsApp Group

ಸದ್ಯ ನಟಿ ಜಯಪ್ರದ ಅವರಿಗೆ ಕೋರ್ಟ್ ಆರು ತಿಂಗಳು ಜೈಲು ಮತ್ತು 5000 ರೂ ದಂಡವನ್ನ ವಿಧಿಸಿದ್ದು ಈ ಕೇಸ್ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಾಗಿದೆ. ನಟಿ ಜಯಪ್ರದ ಅವರ ವಿರುದ್ಧವಾಗಿ ಸಾಕಷ್ಟು ಆಪಾಧನೆಗಳು ಕೇಳಿ ಬರುತ್ತಿದ್ದು ನಟಿ ಜಯಪ್ರದ ಅವರು ಕೇಸ್ ವಿಷಯವಾಗಿ ಸುಪ್ರೀಂ ಕೋರ್ಟ್ ಮೊರೆಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group