Jaya Prada: ನಟಿ ಜಯಪ್ರದ ಮೂರೂ ಮಕ್ಕಳ ತಂದೆಯನ್ನ ಮದುವೆಯಾಗಿದ್ದು ಯಾಕೆ…? ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಮದುವೆಯಾಗಿ ಮೂರು ಮಕ್ಕಳಿರುವವರನ್ನ ಮದುವೆಯಾದ ನಟಿ ಜಯಪ್ರದ.

Jaya Prada Life Story: ಬಾಲಿವುಡ್ ನ ಖ್ಯಾತ ಹಿರಿಯ ನಟಿ ಜಯಪ್ರದಾ (Jaya Prada) ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೂಡ ನಟಿ ಜಯಪ್ರದ ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಹಿಂದೆ ನಟಿ ಜಯಪ್ರದಾ ಅವರು ತಮ್ಮ ವೈಯಕ್ತಿಕ ವಿಚಾರವಾಗಿ ಆಗಾಗ ಸುದ್ದಿಯಲ್ಲಿದ್ದರು.

ನಟಿ ಜಯಪ್ರಧಾ ಅವರ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದ್ದವು. ನಟಿ ಮೂರು ಮಕ್ಕಳ ತಂದೆಯನ್ನು ಮದುವೆಯಾಗಿದ್ದರು ಎನ್ನುವ ಮಾಹಿತಿ ಕೂಡ ಈ ಹಿಂದೆ ಬಾರಿ ವೈರಲ್ ಆಗಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಬಾಲ್ಯದ ಚಿತ್ರವೊಂದು ವೈರಲ್ ಆಗುತ್ತಿದೆ. ಆ ಕಾಲದ ಟಾಪ್ ನಟಿಯಾಗಿದ್ದ ನಟಿ ಜಯಪ್ರಧಾ ಈಗಲೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Actress Jaya Prada Life Story
Image Credit: Spotboye

ಮೊದಲ ಸಂಭಾವನೆಯಾಗಿ ಕೇವಲ 10 ರೂ. ಪಡೆದ ನಟಿ ಜಯಪ್ರಧಾ
ನಟಿ ಜಯಪ್ರದಾ 80 ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ನಟಿ ಜಯಪ್ರದಾ ಕನ್ನಡ ಸೇರಿದಂತೆ, ಹಿಂದಿ, ತೆಲುಗು, ಮಲಯಾಳಂ, ಮರಾಠಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಜಯಪ್ರದಾ ಕನ್ನಡಿಗರಿಗೆ ಪರಿಚಯವಾಗಿದ್ದರು.

80 ರ ದಶಕದಲ್ಲಿ ನಟಿ ಜಯಪ್ರದಾ ಬಾಲಿವುಡ್ ನಲ್ಲಿ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯಾಗಿದ್ದರು. ತಮ್ಮ 13 ನೇ ವಯಸ್ಸಿನಲ್ಲೇ ನಟನೆ ಆರಂಭಿಸಿ ಕೇವಲ 10 ರೂ. ಅನ್ನು ಮೊದಲ ಸಂಭಾವನೆಯಾಗಿ ಪಡೆದಿದ್ದರು. ನಂತರ ನಟಿ ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾದರು. ಇನ್ನು ನಟಿ ನಿರ್ಮಾಪಕರಾದ ಶ್ರೀಕಾಂತ್ ನೇಹತ (Shrikant Nehata) ಅವರನ್ನು ಮದುವೆಯಾಗುವ ಮೂಲಕ ತಮ್ಮ ಸಾಂಸಾರಿಕ ಜೀವನವನ್ನು ಪ್ರಾರಂಭಿಸಿದ್ದರು.

Actress jaya prada latest news update
Image Credit: Starsunzip

ಮೂರು ಮಕ್ಕಳ ತಂದೆಯನ್ನು ಪ್ರೀತಿಸಿ ಮದುವೆಯಾದ ನಟಿ ಜಯಪ್ರದಾ
ನಟಿ ಜಯಪ್ರದಾ ಅವರು ಶ್ರೀಕಾಂತ್ ಅವರನ್ನು ಮದುವೆಯಾಗಿದ್ದರು. ಶ್ರೀಕಾಂತ್ ಅವರಿಗೆ ಮದುವೆಯಾಗಿ ಮೂರು ಮಕ್ಕಳು ಕೂಡ ಇದ್ದಾರೆ. ಮೂರು ಮಕ್ಕಳನ್ನು ಹೊಂದಿದರು ಕೂಡ ನಟಿ ಜಯಪ್ರದಾ ಶ್ರೀಕಾಂತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಜಯಪ್ರದ ಹಾಗೂ ಶ್ರೀಕಾಂತ್ ಅವರ ಮದುವೆಯ ವಿಚಾರಗಳು ಸಾಕಷ್ಟು ಚರ್ಚೆಗೆ ಒಳಗಾಗಿದ್ದವು. ಇನ್ನು ನಿರ್ಮಾಪಕ ಶ್ರೀಕಾಂತ್ ಅವರು ಜಯಪ್ರದಾ ಅವರನ್ನು ಎರಡನೇ ಮದುವೆ ಆಗಲು ಸಜ್ಜಾದಾಗ ಇಡೀ ಚಿತ್ರರಂಗದಲ್ಲಿ ಈ ಇಬ್ಬರ ಮದುವೆಯ ಸುದ್ದಿಗಳು ಸಾಕಷ್ಟು ಚರ್ಚೆಗೆ ಒಳಗಾಗಿದೆ.

Join Nadunudi News WhatsApp Group

ನಿರ್ಮಾಪಕ ಶ್ರೀಕಾಂತ್ ಅವರು ತಮ್ಮ ಮೊದಲ ಪತ್ನಿಗೆ ವಿಚ್ಚೇದನ ನೀಡದೆ ಜಯಪ್ರದಾ ಅವರನ್ನು ವಿವಾಹವಾಗಿದ್ದರು. ಹಾಗಾಗಿ ಶ್ರೀಕಾಂತ್ ಜೀವನದಲ್ಲಿ ಜಯಪ್ರದಾ ಅವರನ್ನು ಇನ್ನೊಬ್ಬ ಮಹಿಳೆ ಎಂದೇ ಗುರುತಿಸಿಕೊಂಡಿದ್ದರು.

Actress Jaya Prada Life Story
Image Credit: Bollywoodshaadis

ಇನ್ನು ಶ್ರೀಕಾಂತ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಇರುವ ಕಾರಣ ಜಯಪ್ರಧಾ ಹಾಗೂ ಶ್ರೀಕಾಂತ್ ಜೊತೆಯಾಗಿ ಬಾಳಲು ಸಾಧ್ಯವಾಗಿರಲಿಲ್ಲ. ಇನ್ನು ನಟಿ ಮದುವೆಯ ನಂತರ ಕೂಡ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೊನೆ ಕೊನೆಗೆ ನಟಿ ತಮ್ಮ ವೈವಾಹಿಕ ಜೀವನದ ವಿವಾದದಿಂದಾಗಿ ಚಿತ್ರರಂಗದಲ್ಲಿ ಅವಕಾಶವನ್ನು ಕಳೆದುಕೊಂಡರು.

Join Nadunudi News WhatsApp Group