Actress Karunya Ram: ನಡುರಾತ್ರಿ ರಸ್ತೆಗಳ ಗುಂಡಿಯನ್ನು ಮುಚ್ಚಿ ಜನರ ಪ್ರಶಂಸೆ ಪಡೆದುಕೊಂಡ ನಟಿ ಕಾರುಣ್ಯ.

Actress Karunya Ram Social Work: ಖ್ಯಾತ ನಟಿ ಕಾರುಣ್ಯ ರಾಮ್ (Karunya Ram)ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಕಾರುಣ್ಯ ರಾಮ್ ಇದೀಗ ಜನಮೆಚ್ಚುವ ಕೆಲಸ ಮಾಡಿದ್ದಾರೆ. ತಮ್ಮ ರಾಜರಾಜೇಶ್ವರಿ ನಗರ ಏರಿಯಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮೂಲಕ ಜನರ ಪ್ರಶಂಸೆಗೆ ಕಾರಣರಾಗಿದ್ದಾರೆ.

Actress Karunya Ram Social Work
Image Source: Tweeter

ರಸ್ತೆಗಳ ಗುಂಡಿ ಮುಚ್ಚಲು ಮುಂದಾದ ನಟಿ ಕಾರುಣ್ಯ ರಾಮ್
ನಿನ್ನೆ ರಾತ್ರಿ ಹನ್ನೊಂದು ಗಂಟೆಯ ಸಮಯದಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಿಳಿದು ನಟಿ ಕಾರುಣ್ಯ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಕಾರುಣ್ಯ ರಾಮ್ ನಾನು ಎರಡು ದಿನಗಳಿಂದ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಹೊರಟೆ.

Actress Karunya Ram Social Work
Image Source: Tweeter

ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಕರಣ ತಿಳಿಸಿದ ನಟಿ ಕಾರುಣ್ಯ ರಾಮ್
ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ ಒಬ್ಬರು ವಿಧಿವಶರಾದರು.

ಅಲ್ಲದೆ ನನ್ನ ಕಣ್ಣಾರೆ ಹುಡುಗಿ ಒಬ್ಬಳು ರಸ್ತೆ ಗುಂಡಿಯಲ್ಲಿ ಬಿದ್ದದ್ದು ನೋಡಿದೆ. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಪ್ರಾಣ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಗುಂಡಿ ಮುಚ್ಚಲು ಮುಂದಾದೆ ಎಂದಿದ್ದಾರೆ.

Join Nadunudi News WhatsApp Group

Actress Karunya Ram Social Work
Image Source: Tweeter

ಜನರ ಪ್ರಶಂಸೆ ಪಡೆದುಕೊಂಡ ನಟಿ ಕಾರುಣ್ಯ
ರಾತ್ರಿ ಹನ್ನೊಂದರ ಸಮಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಕಾರುನ್ ಮತ್ತು ಅವರ ಟೀಮ್ ಶುರು ಮಾಡಿದೆ. ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಇವರಿಗೆ ಅಭಿನಂದನೆ ತಳಿಸಿದ್ದಾರೆ.

ಆ ರಸ್ತೆಯಲ್ಲಿ ಹೋಗುತ್ತಿರುವವರು ವಾಹನ ನಿಲ್ಲಿಸಿ ನಮ್ಮನ್ನು ಮಾತನಾಡಿಸಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎನ್ನು ಬೆನ್ನು ತಟ್ಟಿದ್ದರು. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇದಕ್ಕಿಂತ ಬೇರೆ ಮೆಚ್ಚುಗೆ ಬೇಕಿಲ್ಲ ಎನ್ನುತ್ತಾರೆ ನಟಿ ಕಾರುಣ್ಯ ರಾಮ್.

Actress Karunya Ram Social Work
Image Source: Twitter

 

Join Nadunudi News WhatsApp Group