ಪತಿಯ ನಿಧನದ ನೋವಿನಿಂದ ಹೊರಬಂದು ಸಿಹಿಸುದ್ದಿ ಹಂಚಿಕೊಂಡ ನಟಿ ಮೀನಾ

ದಕ್ಷಿಣ ಭಾರತದ ಸಿನಿ ಪ್ರಿಯರಿಗೆ ನಟಿ ಮೀನಾ ಎಂದರೆ ಬಹುಶ ಎಲ್ಲಾ ಸಿನಿಪ್ರಿಯರಿಗೂ ಗೊತ್ತಿರುವ ಹೆಸರು. ಕನ್ನಡ ತೆಲುಗು ತಮಿಳು ಹಿಂದಿಯಲ್ಲೂ ಕೂಡ ನಟಿಸಿ ಮೆರೆದಿರುವ ಮೀನಾ ಉತ್ತಮ ಭರತ ಭರತನಾಟ್ಯ ಕಲಾವಿದೆ ಕೂಡ. ಇನ್ನು ಸಾಹಸಿಂಹ ವಿಷ್ಣುವರ್ಧನ್ ಜೊತೆ ಇವರಿಗಿರುವ ಕಾಂಬಿನೇಷನ್ ಅಂದು ಇಡೀ ಸಿನಿ ಜಗತ್ತೇ ಕೊಂಡಾಡಿದಿತ್ತು.

ಬದಲಾದ ಸಮಯದಲ್ಲಿ ನಟಿ ಇದೀಗ ವೈಕೆಯುಕ್ತಿಕ ಜೀವನದ ನೋವಿನಲ್ಲಿದ್ದಾರೆ.ಬಿ ಹೌದು ಇತ್ತೀಚಿಗಷ್ಟೇ ಪತಿಯನ್ನು ಕಳೆದುಕೊಂಡ ನಟಿ ಮೀನಾ ವಿಧಿ ಆಟಕ್ಕೆ ಸಂಸಾರ ನೌಕೆಯಲ್ಲಿ ನೋವನ್ನು ಅನುಭವಿಸಿದರು. ಇಬ್ಬರು ಮಕ್ಕಳ ತಾಯಿಯಾಗಿರುವ ನಟಿ ಮೀನಾಗೆ ದಿಕ್ಕೇ ತೋಚದ ಪರಿಸ್ಥಿತಿ ಅದು. ಒಂದೆಡೆ ಸಿನೆಮಾ ರಂಗದಲ್ಲೂ ಹೇಳುವಷ್ಟು ಅವಕಾಶಗಳು ಇರಲಿಲ್ಲ.

ಇನ್ನು ಮೀನಾ ಪತಿಗೆ ಬಂದಿದ್ದ ಸಮಸ್ಯೆ ಅಂತಿಂತದ್ದಲ್ಲ . ದೀರ್ಘ ಸಮಯದ ಶ್ವಾಸಕೋಶದ ಕಾಯಿಲೆ ಹಾಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಅವರ ಪತಿ. ಪಾರಿವಾಳದ ಹಿಕ್ಕೆಯಿಂದ ಆದ ಸೋಂಕು ಇವರ ಜೀವಕ್ಕೆ ಕುತ್ತು ಬಂದಿತು ಎಂದು ಹೇಳಲಾಗುತ್ತಿದೆ. ಸದ್ಯ ಇದೆ ವಿಚಾರ ಸಿನಿ ರಂಗದಲ್ಲೂ ಕೂಡ ಬಹಳ ಸದ್ದು ಮಾಡಿದೆ.

ಇನ್ನು ಇಬ್ಬರ ಮಕ್ಕಳ ಜವಾಬ್ದಾರಿ ಹೊತ್ತಿರುವ ಮೀನಾ ಇದೀಗ ಪತಿ ನಿಧನದ ಬಳಿಕ ಒಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹೌದು ನಟಿ ಮೀನಾ ಈಗ ತಾನು ಹೊಸ ಸಿನೆಮಾದ ಶೂಟಿಂಗ್ ಒಂದರಲ್ಲಿ ಬ್ಯುಸಿಯಿಯಾಗಿರುವ ಹಾಗು ಪರಭಾಷಾ ಚಿತ್ರಗಳಲ್ಲೂ ಉತ್ತಮ ಅವಕಾಶಗಳು ಬಂದಿರುವ ಬಗ್ಗೆ ಸಿಹಿಸುದ್ದಿ ತಿಳಿಸಿದ್ದಾರೆ. ನೋವಿನ ಬಳಿಕ ಹೊರಬಂದಿರುವ ನಟಿ ಮೀನಾ ಇದೀಗ ಚಿತ್ರರಂಗದಲ್ಲಿ ಮತ್ತೆ ಕಾರ್ಯ ಮಾಡುತ್ತಿದ್ದಾರೆ.

ಈ ಸುದ್ದಿ ಅಭಿಮಾನಿಗಳು ಕೂಡ ಅವರಿಗೆ ಶುಭಕೋರಿದ್ದಾರೆ. ಹೌದು ನಟಿ ಮೀನಾ ಸಿನೆಮಾಗೆ ಹಿಂತಿರುಗಿದ ಬಗ್ಗೆ ಕಾಮೆಂಟ್ ಮಾಡಿರುವ ಅವರ ಅಭಿಮಾನಿಗಳು ವಿಭಾಳ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನು ಇತ್ತೀಚಿಗೆ ನಟಿ ಮೀನಾ ಅಭಿನಯದ ದ್ರಶ್ಯಮ್ 2 ಓಟಿಟಿಯಲ್ಲಿ ಬಹಳ ಸುದ್ದಿ ಮಾಡಿತ್ತು. ಇದೀಗ ಅವರ ಮುಂದಿನ ಚಿತ್ರ ದ್ರಶ್ಯಮ್ 3 ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group