Actress Meena Love: ಬಾಲಿವುಡ್ ನಟನ ಮೇಲೆ ಪ್ರೀತಿ ಆಗಿರುವ ವಿಷಯವನ್ನು ಹೇಳಿಕೊಂಡ ನಟಿ ಮೀನಾ.
Actress Meena Interview: ಬಹುಭಾಷಾ ನಟಿ ಮೀನಾ (Mena) ಇತ್ತೀಚಿಗೆ ತಮ್ಮ ಎರಡನೆಯ ಮದುವೆಯ ವಿಚಾರವಾಗಿ ಬಾರಿ ಸುದ್ದಿಯಲ್ಲಿದ್ದರು. ತಮ್ಮ ಪತಿಯ ನಿಧನದ ನಂತರ ನಟಿ ಬಹಳ ಸಮಯದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಇನ್ನು ನಟಿ ಹಲವು ವರ್ಷಗಳ ಬಳಿಕ ತಮ್ಮ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹಲವು ವರ್ಷಗಳ ಪ್ರೀತಿಯ ವಿಚಾರವನ್ನು ಹಂಚಿಕೊಂಡ ನಟಿ ಮೀನಾ
ಬಾಲ ನಟಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಮೀನಾ ಇದೀಗ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಈ ವೇಳೆ ನಟಿ ತಮ್ಮ ಜೀವನದಲ್ಲಿ ನಡೆದ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ತಮಿಳು ಚಾನೆಲ್ ಸಿನಿ ಉಲಗಂನಲ್ಲಿ ನಟಿ ಸುಹಾಸಿನಿ ನಡೆಸಿಕೊಟ್ಟ ಚಾಟ್ ಶೋ ಗೆ ನಟಿ ಮೀನಾ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ನಟಿ ತಮ್ಮ ಹಲವು ವರ್ಷಗಳ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ನನ್ನ ಕ್ರಶ್ ಎಂದ ನಟಿ ಮೀನಾ
ಸಂದರ್ಶನದಲ್ಲಿ ನಟಿ ಮೀನಾ ತಮ್ಮ ಕ್ರಶ್ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಬಾಲಿವುಡ್ ನಟನ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿದ್ದಾರೆ. ಅವರ ಮದುವೆಯ ಸುದ್ದಿ ನನ್ನ ಹಾರ್ಟ್ ಬ್ರೇಕ್ ಮಾಡಿತ್ತು ಎಂದು ನಟಿ ಮೀನಾ ಹೇಳಿದ್ದಾರೆ.
ಮೀನಾ ಹೃದಯ ಕದ್ದ ನಟ ಬೇರೆ ಯಾರು ಅಲ್ಲ, ಕಡಿಮೆ ಅವಧಿಯಲ್ಲಿ ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ ನಟ ಹೃತಿಕ್ ರೋಷನ್‘. ಬಾಲಿವುಡ್ ನಟ ಹೃತಿಕ್ ರೋಷನ್ ನನ್ನ ಕ್ರಶ್ ಎಂದು ನಟಿ ಮೀನಾ ಹೇಳಿಕೊಂಡಿದ್ದಾರೆ.
ನಾನು ಹೃತಿಕ್ ರೋಷನ್ ಅವರನ್ನು ತುಂಬಾ ಪ್ರೀತಿಸುತ್ತಿದೆ. ನನಗೆ ಹೃತಿಕ್ ರೀತಿಯ ಹುಡುಕ ಬೇಕು ಎಂದು ಮದುವೆಯ ಪ್ರಸ್ತಾಪ ಮಾಡುತ್ತಿದ್ದ ಅಮ್ಮನಿಗೆ ಏಳುತ್ತಿದ್ದೆ. ಹೃತಿಕ್ ಮದುವೆಯ ದಿನದಂದು ನನ್ನ ಹಾರ್ಟ್ ಬ್ರೇಕ್ ಆಗಿತ್ತು. ಆಗ ನನಗೆ ಮದುವೆ ಆಗಿರಲಿಲ್ಲ ಎಂದು ಮೀನಾ ಹೇಳಿದ್ದಾರೆ.