Megha Shetty: ಮುಂದೆ ಯಾವುದೇ ಸೀರಿಯಲ್ ನಲ್ಲಿ ನಟಿಸಲ್ಲ ಅಂದ ಮೇಘ ಶೆಟ್ಟಿ, ಮುಂದಿನ ನಡೆ ಏನು.

ಮುಂದಿನ ದಿನಗಳಲ್ಲಿ ಯಾವುದೇ ಧಾರಾವಾಹಿಯಲ್ಲಿ ನಟನೆ ಮಾಡಲ್ಲ ಮತ್ತು ಸಿನೆಮಾಗಳ ಕಡೆ ಗಮನ ಕೊಡುತ್ತೇನೆ ಅಂದ ಮೇಘ ಶೆಟ್ಟಿ.

Megha Shetty About Jothe Jotheyali Serial: ಕನ್ನಡಿಗರ ನೆಚ್ಚಿನ ಧಾರಾವಾಹಿಯಾದ ಜೊತೆ ಜೊತೆಯಲಿ (Jote Joteyali) ಇನ್ನೇನು ಕೆಲವ ದಿನಗಳಲ್ಲಿ ಅಂತ್ಯ ಕಾಣಲಿದೆ. ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ಧಾರಾವಾಹಿ ಮುಕ್ತಾಯಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆ ಜೊತೆಯಲಿ ದಾರಾವಾಹಿಯಲ್ಲಿನ ಪ್ರತಿ ಪಾತ್ರದಾರಿಗಳು ಕೂಡ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.

ಇದೀಗ ಜೊತೆ ಜೊತೆಯಲಿ ಧಾರಾವಾಹಿಯ ನಾಯಕಿ ಮೇಘ ಶೆಟ್ಟಿ (Megha Shetty) ಅವರು ಧಾರಾವಾಹಿ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. ಧಾರಾವಾಹಿ ಅಂತ್ಯಗೊಳ್ಳುವ ಕುರಿತು ಮಾತನಾಡುತ್ತ ನಟಿ ಭಾವುಕರಾಗಿದ್ದಾರೆ.

Megha Shetty said that she will not act in any serial in the coming days and will focus on movies.
Image Credit: vijaykarnataka

ಧಾರಾವಾಹಿ ಮುಗಿದ ಬಳಿಕ ಮೇಘ ಶೆಟ್ಟಿ ಮುಂದಿನ ನಡೆ ಏನು
ಇನ್ನು ನಟಿ ಮೇಘಾ ಶೆಟ್ಟಿ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿದೆ. ಈ ಸೀರಿಯಲ್ ನಲ್ಲಿ ನಟಿಸಿದಾ ಮೇಲೆ ಮೇಘಾ ಶೆಟ್ಟಿ ಅವರು ಎರಡು ಸಿನಿಮಾಗಳನ್ನು ಮಾಡಿದರೆ. ಈಗಾಗಲೇ ಚಿತ್ರಗಳು ಬಿಡುಗಡೆಗೊಂಡಿದ್ದು ಪ್ರೇಕ್ಷಕರ ಮನ ಗೆದ್ದಿದೆ.

ಇನ್ನು ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯಗೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಈ ಧಾರಾವಾಹಿ ಮುಗಿದ ಬಳಿಕ ತಮ್ಮ ಮುಂದಿನ ನಡೆ ಏನು ಎನ್ನುವ ಬಗ್ಗೆ ಮಾತನಾಡಿದ್ದಾರೆ.

Actress Megha Shetty has said that she will focus on movies in the coming days
Image Credit: instagram

ಧಾರಾವಾಹಿ ಬಗ್ಗೆ ಮಾತನಾಡುತ್ತ ಭಾವುಕರಾದ ಮೇಘಾ ಶೆಟ್ಟಿ
ಜೊತೆ ಜೊತೆಯಲಿ ಸೀರಿಯಲ್ ತಂಡದ ಜೊತೆಗಿನ ಅನುಭವವನ್ನು ನಟಿ ಹಂಚಿಕೊಂಡಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಮೊದಲ ಶಾಟ್ ಎದುರಿಸಿದ್ದು ನಾನೇ, ಕೊನೆಯ ಶಾಟ್ ಕೂಡಾ ನನ್ನದೇ. ಈ ಎರಡರ ನಡುವೆ ಸಾಕಷ್ಟು ದಿನಗಳ ಅಂತರವಿದೆ. ಯಾರು ಪರಿಚಯವಿಲ್ಲದೆ ಈ ತಂಡಕ್ಕೆ ಕಾಲಿಟ್ಟ ನನಗೆ ಈಗ ಈ ತಂಡ ಎರಡನೇ ಕುಟುಂಬ. ಈ ಕುಟುಂಬದೊಂದಿನ ನಂಟನ್ನು ಮುಗಿಸುತ್ತಿದ್ದೇನೆ ಎಂದು ನಟಿ ಭಾವುಕರಾಗಿದ್ದಾರೆ.

Join Nadunudi News WhatsApp Group

Actress Megha Shetty told how her journey was in the serial jothe jotheyali
Image Credit: instagram

ಮುಂದೆ ಯಾವುದೇ ಸೀರಿಯಲ್ ಗಳಲ್ಲಿ ನಟಿಸಲ್ಲ ಎಂದ ನಟಿ
ಇನ್ನು ನಟಿ ಮುಂದಿನ ದಿನಗಳಲ್ಲಿ ಯಾವುದೇ ಸೀರಿಯಲ್ ನಲ್ಲಿ ನಟಿಸದಿರಲು ನಿರ್ಧರಿಸಿರುವ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಗಳತ್ತ ಗಮನವಹಿಸುತ್ತೇನೆ. ಒಳ್ಳೊಳ್ಳೆ ಕಥೆಗಳನ್ನು ಕೇಳುತ್ತಿದ್ದೇನೆ. ಈಗ ನಟಿಸಿರುವ ಕೈವಾ ಮತ್ತು ಆಪರೇಷನ್ ಲಂಡನ್ ಕೆಫೆ ಸಿನಿಮ ಚೆನ್ನಾಗಿದೆ. ಈ ಎರಡು ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿದೆ. ಇನ್ನು ಒಳ್ಳೆಯ ಕಥೆಯ ನಿರೀಕ್ಷೆಯಲ್ಲಿದ್ದೇನೆ ಎಂದು ನಟಿ ಹೇಳಿದ್ದಾರೆ.

Join Nadunudi News WhatsApp Group