Dhruva Sarja: ನನ್ನ ಧ್ರುವ ಸರ್ಜಾ ನಡುವಿನ ಸಂಬಂಧ ಏನು, ಅರ್ಥವಾಗದ ಸಂಬಂಧದ ಸ್ಪಷ್ಟನೆ ಕೊಟ್ಟ ಮೇಘನಾ.

ಧ್ರುವ ಸರ್ಜಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್.

Actress Meghana Raj About Dhruva Sarja: ಖ್ಯಾತ ನಟಿ ಮೇಘನಾ ರಾಜ್ (Meghana Raj) ಇದೀಗ ತತ್ಸಮ ತದ್ಭವ ಸಿನಿಮಾದ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ ಎನ್ನಬಹುದು. ಇತ್ತೀಚಿಗೆ ಸರ್ಜಾ ಫ್ಯಾಮಿಲಿ ಹಾಗು ಮೇಘನಾ ರಾಜ್ ಫ್ಯಾಮಿಲಿ ಬಗ್ಗೆ ಗಾಸಿಪ್ ಗಳು ಹುಟ್ಟಿಕೊಂಡಿವೆ.

ಸಾಮಾಜಿಕ ಜಾಲತಾಣದಲ್ಲಿ ಚಿರು ಫ್ಯಾಮಿಲಿಗೂ ಹಾಗು ಸರ್ಜಾ ಫ್ಯಾಮಿಲಿಗೂ ಏನೋ ಸರಿ ಇಲ್ಲ ಎನ್ನೋ ರೀತಿ ವ್ಯಕ್ತವಾಗುತ್ತಿದೆ. ಇಂತಹ ಗಾಸಿಪ್ ಗಳಿಗೆ ನಟಿ ಮೇಘನಾ ರಾಜ್ ತೆರೆ ಎಳೆದಿದ್ದಾರೆ.

Actress Meghana Raj About Dhruva Sarja
Image Credit: Indiaglitz

ಮೇಘನಾ ರಾಜ್ ಹಾಗು ಧ್ರುವ ಸರ್ಜಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಮೇಘನಾ ರಾಜ್ ನಡುವಿನ ಬಾಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಅದರಲ್ಲೂ ಸರ್ಜಾ ಫ್ಯಾಮಿಲಿ ಜೊತೆ ರಾಜ್ ಫ್ಯಾಮಿಲಿ ಸರಿಯಾಗಿಲ್ಲ ಮನಸ್ತಾಪವಿದೆ ಎಂದು ಹರಿದಾಡುತ್ತಿದೆ. ಈ ಎಲ್ಲಾ ಮಾತುಗಳಿಗೆ ಬ್ರೇಕ್ ಹಾಕಲು ನಟಿ ಮೇಘನಾ ರಾಜ್ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

ಧ್ರುವ ಸರ್ಜಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್
ನನ್ನ ಧ್ರುವ ಸರ್ಜಾ ನಡುವಿನ ಸಂಬಂಧ ಯಾರಿಗೂ ಅರ್ಥವಾಗಿಲ್ಲ. ಚಿರುಗೆ ಗೊತ್ತು ಧ್ರುವಗೆ ಗೊತ್ತು ಆಮೇಲೆ ನನಗೆ ಗೊತ್ತು. ಧ್ರುವ ಯಾವತ್ತೂ ಹೇಳಿಕೊಳ್ಳುವುದಿಲ್ಲ ಎಂದು ನನಗೆ ಗೊತ್ತು. ತತ್ಸಮ ತದ್ಭವ ಸಿನಿಮಾದ ಟೀಸರ್ ಧ್ರುವ ಸರ್ಜಾಗೆ ಕಳುಹಿಸಿದಾಗ ತುಂಬಾನೇ ಎಕ್ಸೈಟ್ ಆಗಿದ್ದ. ಆಮೇಲೆ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಆಗ ಯಾವ ಪಾಯಿಂಟ್ ಧ್ರುವಗೆ ಅದರಲ್ಲಿ ಇಷ್ಟವಾಗಿಲ್ಲ ಅನ್ನೋದು ಅರ್ಥವಾಗಿತ್ತು. ಯಾರಿಗೂ ನಮ್ಮ ಬಾಂಡ್ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ.

Actress Meghana Raj spoke about the relationship between Dhruva Sarja
Image Credit: Facebook

ನಾವು ಪಬ್ಲಿಕ್ ಫಿಗರ್ ಅಂದಮೇಲೆ ಜನರಿಗೆ ನಮ್ಮ ಮೇಲೆ ಕ್ಯೂರಿಯೋಸಿಟಿ ಇದೆ. ಜನರೆಲ್ ಆಗಿ ನಮ್ಮ ಬಗ್ಗೆ ನಿಮಗೆ ಗೊತ್ತಿರಬೇಕು ಹಾಗಂತ ನನ್ನ ಪರ್ಸನಲ್ ವಿಚಾರಗಳನ್ನು ಟಾರ್ಗೆಟ್ ಮಾಡಿ ಅದರ ಬಗ್ಗೆ ಮಾತನಾಡುವುದು ನನಗೆ ಇಷ್ಟವಿಲ್ಲ. ಅಲ್ಲದೆ ನನಗೆ ಗೊತ್ತು ಯಾವುದು ಪರ್ಸನಲ್ ಆಗಿರಬೇಕು ಯಾವುದು ಪಬ್ಲಿಕ್ ಆಗಿರಬೇಕು ಎಂದು ಮೇಘನಾ ರಾಜ್ ಧ್ರುವ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group