Meghana Raj: ಚಿರು ಕುಟುಂಬದ ಜೊತೆ ಮನಸ್ತಾಪ ಇದೆಯಾ ಕೇಳಿದ್ದಕ್ಕೆ ನೇರ ಉತ್ತರ ಕೊಟ್ಟ ಮೇಘನಾ ರಾಜ್.
ಸಂದರ್ಶನಲ್ಲಿ ನಟಿ ಮೇಘನಾ ರಾಜ್ ಮನದಾಳದ ಮಾತುಕತೆ.
Actress Meghana Raj Interview: ಖ್ಯಾತ ನಟಿ ಮೇಘನಾ ರಾಜ್ (Meghana Raj) ಇತ್ತೀಚಿಗೆ ತತ್ಸಮ ತದ್ಭವ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಟಿ ಮೇಘನಾ ರಾಜ್ ತಮ್ಮ ಮಗನ ಆರೈಕೆಯಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಅವರ ಪತ್ನಿಯಾದ ನಟಿ ಮೇಘನಾ ರಾಜ್ ನಟನೆಯ ತತ್ಸಮ ತದ್ಭವ ಸಿನಿಮಾದ ಟೀಸರ್ ಇತ್ತೀಚಿಗಷ್ಟೇ ರಿಲೀಸ್ ಆಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ತತ್ಸಮ ತದ್ಭವ ಸಿನಿಮಾದ ಸಂದರ್ಶನಲ್ಲಿ ನಟಿ ಮೇಘನಾ ರಾಜ್ ಮನದಾಳದ ಮಾತುಕತೆ
ಇದೀಗ ನಟಿ ಮೇಘನಾ ರಾಜ್ ತತ್ಸಮ ತದ್ಭವ ಸಿನಿಮಾದ ಸಂದರ್ಶನ ಒಂದರಲ್ಲಿ ತಮ್ಮ ಕುಟುಂಬದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ನಿರೂಪಕ ನಟಿ ಮೇಘನಾ ರಾಜ್ ಅವರಿಗೆ ಕುಟುಂಬದ ವಿಚಾರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ನಿಮ್ಮ ಕುಟುಂಬಕ್ಕೂ ಸರ್ಜಾ ಕುಟುಂಬಕ್ಕೂ ಭಿನ್ನಾಭಿಪ್ರಾಯ ಇದೆಯಂತೆ. ಮಗನ ನಾಮಕರಣದ ಸಮಯದಲ್ಲಿ ಕೆಲವು ವಿವಾದಗಳು ಆಗಿದೆಯಂತೆ ಎಂದೆಲ್ಲ ಕೇಳಿದ್ದಾರೆ. ಇದಕ್ಕೆ ನಟಿ ಮೇಘನಾ ರಾಜ್ ಮನಮುಕ್ತವಾಗಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್
ನಮ್ಮ ಕುಟುಂಬಕ್ಕೂ ಹಾಗು ಸರ್ಜಾ ಕುಟುಂಬಕ್ಕೂ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲಾ. ಎರಡು ಕುಟುಂಬದವರು ಸಂಕಷ್ಟಲ್ಲಿರುವಾಗ ಕೆಲವು ಜನರು ತಮ್ಮ ಬಗ್ಗೆ ಆಚೆ ಈಚೆ ಮಾಡಿದ್ದಾರೆ. ಅಂದರೆ ಎರಡು ಕುಟುಂಬದ ಮಧ್ಯೆ ಹುಳಿ ಹಿಂಡಿದ್ದಾರೆ. ಆದರೆ ಅದು ಯಾವುದು ಸಹ ಸಾಧ್ಯವಾಗಲಿಲ್ಲ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ. ಅಲ್ಲದೆ ದ್ರುವ ಸರ್ಜಾ ಅವರ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ನಮ್ಮಿಬ್ಬರ ಸಂಬಂಧದ ಬಗ್ಗೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ಸಂದರ್ಶನದಲ್ಲಿ ತಮ್ಮ ಫ್ಯಾಮಿಲಿ ಬಗ್ಗೆ ಕ್ಲಾರಿಟಿ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ನಮ್ಮ ಬಗ್ಗೆ ನಮಗೆ ಗೊತ್ತು. ನನ್ನ ಕುಟುಂಬದವರಿಗೆ ಗೊತ್ತು. ಆದ್ದರಿಂದ ನಮ್ಮ ಫ್ಯಾಮಿಲಿ ವಿಚಾರವನ್ನೆಲ್ಲ ಇನ್ಸ್ಟಾಗ್ರಾಮ್ ಹಾಗು ಫೇಸ್ ಬುಕ್ ನಲ್ಲಿ ಹಾಕುವ ಅವಶ್ಯಕತೆ ಇಲ್ಲ ಎಂದು ನಟಿ ಮೇಘನಾ ರಾಜ್ ತಮ್ಮ ಫ್ಯಾಮಿಲಿ ಬಗ್ಗೆ ಹೇಳಿಕೊಂಡಿದ್ದಾರೆ.