Meghana Raj: ಬಹಳ ಸಮಯದ ನಂತರ ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿ ನೀಡಿದ ಮೇಘನಾ ರಾಜ್.
ಸಿನಿಮಾದ ಕುರಿತು ನಟಿ ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
Actress Meghana Raj New Movie Update: ಖ್ಯಾತ ನಟಿ ಮೇಘನಾ ರಾಜ್ (Meghana Raj)ಇತ್ತೀಚಿಗೆ ತತ್ಸಮ ತದ್ಭವ ಸಿನಿಮಾದ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ ಎನ್ನಬಹುದು. ನಟಿ ಮೇಘನಾ ರಾಜ್ ನಟನೆಯ ತತ್ಸಮ ತದ್ಭವ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇದೀಗ ಇದೆ ಸಿನಿಮಾದ ಸಲುವಾಗಿ ನಟಿ ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತತ್ಸಮ ತದ್ಭವ ಸಿನಿಮಾದ ಟೀಸರ್ ರಿಲೀಸ್
ಈಗಾಗಲೇ ನಟಿ ಮೇಘನಾ ರಾಜ್ ಸಿನಿಮಾ ಪೋಸ್ಟರ್ ಗಳು ಗಮನಾ ಸೆಳೆದಿದೆ. ಇದು ಮಹಿಳಾ ಪ್ರಧಾನ ಸಿನಿಮಾ ಎಂಬ ಕಾರಣಕ್ಕೂ ನೀರಿಕ್ಷೆ ಹೆಚ್ಚಿದೆ. ಇದೀಗ ನಟಿ ಮೇಘನಾ ರಾಜ್ ಅವರು ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಇಂದು ಜುಲೈ 17 ರಂದು, ಅಂದರೆ ಇಂದು ತತ್ಸಮ ತದ್ಭವ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಈ ವಿಚಾರ ತಿಳಿದು ಅಭಿಮಾನಿಗಳು ಖುಷಿ ಆಗಿದ್ದಾರೆ. ಟೀಸರ್ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
ನಟಿ ಮೇಘನಾ ರಾಜ್ ತತ್ಸಮ ತದ್ಭವ ಸಿನಿಮಾ
ನಟಿ ಮೇಘನಾ ರಾಜ್ ಬದುಕಲ್ಲಿ ಈ ಹಿಂದೆ ಹಲವು ಏರುಪೇರುಗಳು ಉಂಟಾದವು. ಪತಿ ಚಿರಂಜೀವಿ ಸರ್ಜಾ ಮೃತಪಟ್ಟ ಬಳಿಕ ಮೇಘನಾ ರಾಜ್ ತಮ್ಮ ಮಗನ ಆರೈಕೆಯಲ್ಲಿ ತೊಡಗಿದರು. ಈಗ ಮೇಘನಾ ರಾಜ್ ಅವರು ಮಗನ ಆರೈಕೆ ಮಾತ್ರವಲ್ಲದೆ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಇವರ ತತ್ಸಮ ತದ್ಭವ ಸಿನಿಮಾದ ಬಗ್ಗೆ ಈಗಾಗಲೇ ಕೆಲವು ಅಪ್ಡೇಟ್ ಗಳು ಹೊರ ಬಿದ್ದಿವೆ. ಈ ಚಿತ್ರದ ಟೀಸರ್ ಇದೀಗ ರಿಲೀಸ್ ಆಗುತ್ತಿದೆ.
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಮೇಘನಾ ರಾಜ್. ಜುಲೈ 17 ರಂದು ತತ್ಸಮ ತದ್ಭವ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಬೀಟಲ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆ ಆಗಲಿದೆ ಎಂದು ಮೇಘನಾ ರಾಜ್ ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್ ನೋಡಿ ಶುಭ ಹಾರೈಸಿದ್ದಾರೆ. ಈ ಚಿತ್ರಕ್ಕಾಗಿ ಕಾದಿದ್ದೇವೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.