Actress Nagma: ಈ ಒಂದು ಕಾರಣಕ್ಕೆ 48 ವರ್ಷವಾದರೂ ಮದುವೆಯಾಗಿಲ್ಲ ನಟಿ ನಗ್ಮಾ, ಕಾರಣ ತಿಳಿಸಿದ ನಟಿ ನಗ್ಮಾ.

ಮದುವೆ ಆಗದೆ ಇರುವುದಕ್ಕೆ ನಟಿ ನಗ್ಮಾ ಅವರು ಕಾರಣವನ್ನ ತಿಳಿಸಿದ್ದಾರೆ.

Actress Nagma About Marriage: ಬಹುಭಾಷಾ ನಟಿ ನಗ್ಮಾ (Nagma) ಶಿವರಾಜ್ ಕುಮಾರ್ ಅಭಿನಯದ ಕುರುಬನ ರಾಣಿ ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ನಟಿ ನಗ್ಮಾ ಕನ್ನಡ ಸೇರಿದಂತಂತೆ ಹಿಂದಿ, ಮಲಯಾಳಂ, ತೆಲುಗು, ಬೋಜಪುರಿ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು 90 ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಗ್ಮಾ ಬೇಡಿಕೆ ಇರುವಾಗಲೇ ಚಿತ್ರರಂಗದಿಂದ ದೂರ ಆಗಿದ್ದರು. ಇನ್ನು ನಟಿ ನಗ್ಮಾ ಅವರು ಚಿತ್ರರಂಗದಿಂದ ದೂರಆದ ಬಳಿಕ ರಾಜಕೀಯದಲ್ಲಿ ಸಕ್ರಿಯ್ರಾಗಿದ್ದಾರೆ. ಇದೀಗ ನಟಿ ನಗ್ಮ ತಮ್ಮ ಮದುವೆಯ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ.

Actress Nagma About Marriage
Image Credit: Tollywood

ಬಹುಬಾಷಾ ನಟಿ ನಗ್ಮಾ
ಹಲವು ಭಾಷೆಗಳಲ್ಲಿ ನಟಿಸುವ ಮೂಲಕ ತಮ್ಮ ಸಿನಿ ಜೀವನದಲ್ಲಿ ನಟಿ ನಗ್ಮಾ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದರು. ತಮ್ಮ ಉತ್ತಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ನಟಿ ನಗ್ಮಾ 2008 ರಿಂದ ಚಿತ್ರರಂಗಕ್ಕೆ ಬ್ರೇಕ್ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು. ರಾಜಕೀಯದಲ್ಲಿ ನಟಿ ಸಕ್ರಿಯರಾಗಿದ್ದಾರೆ. ಇನ್ನು ನಟಿ ನಗ್ಮಾ ಅವರ ಕಾಲದಲ್ಲಿ ಮದುವೆಯ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಇವರು ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.

ಸೌರವ್ ಗಂಗೂಲಿ ಹಾಗೂ ನಗ್ಮಾ ಪ್ರೀತಿಸುತ್ತಿದ್ದರಾ..?
ನಟಿ ನಗ್ಮಾ ಅವರ ಮದುವೆಯ ಸುದ್ದಿ ವೈರಾಲ್ ಆಗುತ್ತಿದೆ ಸಮಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ನಗ್ಮ ಪ್ರೀತಿಸುತ್ತಿದ್ದರು ಎನ್ನುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಈ ಜೋಡಿ ಪ್ರೀತಿಯಲ್ಲಿ ಬ್ರೇಕ್ ಅಪ್ ಆಗಿದೆ ಎನ್ನುವ ಮಾಹಿತಿ ಕೊಡ ಇದೆ. ಇನ್ನು ನಟರಾದ ಶರತ್ ಕುಮಾರ್, ಮನೋಜ್ ತಿವಾರಿ, ರವಿ ಕಿಶನ್ ಅವರ ಜೊತೆ ಮದುವೆಯಾಗುತ್ತಾರೆ ಎನ್ನುವ ಬಗ್ಗೆ ಕೂಡ ಸುದ್ದಿ ಹರಿದಾಡಿತ್ತು. ಆದರೆ ನಟಿ ಈವರೆಗೂ ಮದುವೆಯಾಗಿಲ್ಲ.

Actress Nagma latest news update
Image Credit: Zoomtventertainment

ಮದುವೆಯ ಬಗ್ಗೆ ನಟಿ ನಗ್ಮಾ ಉತ್ತರ
ಇತ್ತೀಚಿನ ಸಂದರ್ಶನದಲ್ಲಿ ನಟಿ ನಗ್ಮಾ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು 48 ವರ್ಷವಾದರೂ ಇನ್ನು ಕೂಡ ಮದುವೆ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆಗೆ ನಟಿ ನಗ್ಮಾ ಅಕ್ಕ್ರಿಯ್ ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

‘ನಾನು ಮದುವೆಯಾಗುವುದಿಲ್ಲ ಎಂದು ಯೋಚಿಸುವುದಿಲ್ಲ. ನನಗೂ ಸಂಗಾತಿ ಹಾಗೂ ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ. ಸಮಯ ಸಿಕ್ಕರೆ ನಾನು ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ’ ಎಂದು ನಟಿ ನಗ್ಮಾ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Join Nadunudi News WhatsApp Group