Nayanthara Salary: 50 ಸೆಕೆಂಡ್‌ ಜಾಹೀರಾತಿಗೆ ನಯನತಾರಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ….? ದುಬಾರಿ ನಟಿ.

ಲೇಡಿ ಸೂಪರ್‌ಸ್ಟಾರ್‌ ನಟಿ ಒಂದು ಜಾಹೀರಾತಿಗೆ ಪಡೆಯುವ ಸಂಭಾವನೆ.

Actress Nayanthara Remuneration For Advertisement: ಸಿನಿಮಾ ನಟರು ಮತ್ತು ಆಟಗಾರರು ತಮ್ಮ ಕೆಲಸದ ಜೊತೆಗೆ ಆಗಾಗ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರು ಚಿಕ್ಕ ಜಾಹೀರಾತಿನಲ್ಲಿ ನಟಿಸಲು ಲಕ್ಷಗಟ್ಟಲೇ ಹಣವನ್ನು ಪಡೆಯುತ್ತಾರೆ.

ಆದರೆ ಕೆಲವರು ಒಂದು ಜಾಹೀರಾತಿಗೆ ಕೋಟಿಗಟ್ಟಲೇ ಸಂಭಾವನೆಯನ್ನು ಪಡೆಯುತ್ತಾರೆ. ಇದೀಗ ಖ್ಯಾತ ನಟಿ ನಯನತಾರ (Nayanthara) ಚಿಕ್ಕ ಜಾಹೀರಾತಿಗಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ನಾವೀಗ ಮಾಹಿತಿ ತಿಳಿಯೋಣ.

Actress Nayanthara Remuneration For Advertisement
Image Credit: Tracktollywood

Actress Nayanathara
ಇದೀಗ Actress Nayanathara ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ನಯನತಾರ ಲೇಡಿ ಸೂಪರ್ ಸ್ಟಾರ್ ಅಂತಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ನಟಿ ನಯನತಾರಾ ಹಲವು ವರ್ಷಗಳಿಂದ ದಕ್ಷಿಣ ಭಾಷೆಯ ಬಹುತೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ನಯನತಾರಾ ದಕ್ಷಿಣದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಹೆಸರುವಾಸಿಯಾಗಿದ್ದಾರೆ.

ಲೇಡಿ ಸೂಪರ್‌ಸ್ಟಾರ್‌ ನಟಿ ಒಂದು ಜಾಹೀರಾತಿಗೆ ಪಡೆಯುವ ಸಂಭಾವನೆ
ನಟಿ ನಯನ ತಮ್ಮ ಬೇಡಿಕೆಯಂತೆ ಸಂಭಾವನೆ ಕೇಳುತ್ತಾರೆ. ಸಿನಿಮಾದಲ್ಲಿ ಮಾತ್ರವಲ್ಲದೆ ಜಾಹೀರಾತುಗಳ ವಿಚಾರದಲ್ಲೂ ಲೇಡಿ ಸೂಪರ್‌ಸ್ಟಾರ್‌ ನಟಿ ಸಂಭಾವನೆ ಉತ್ತುಂಗದಲ್ಲಿದೆ. ಇದೀಗ ನಟಿ ನಯನತಾರಾ 50 ಸೆಕೆಂಡ್ ಜಾಹೀರಾತಿಗೆ ಪಡೆಯುವ ಸಂಭಾವನೆ ಕೇಳಿದರೆ ನೀವು ನಿಜವಾಗಿ ಶಾಕ್‌ ಆಗುತ್ತೀರಾ.

Actress Nayanthara Latest News Update
Image Credit: Timesofindia

ಹೌದು ಲೇಡಿ ಸೂಪರ್‌ಸ್ಟಾರ್‌ ನಟಿ 50 ಸೆಕೆಂಡುಗಳ ಜಾಹೀರಾತಿಗೆ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಜಾಹೀರಾತು ಸಮಯ ಹೆಚ್ಚಾದಂತೆ ಸಂಭಾವನೆಯೂ ಹೆಚ್ಚಾಗುತ್ತದೆ. ಒಂದು ಜಾಹೀರಾತಿಗಾಗಿ ನಯನತಾರ ಸುಮಾರು 4 ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

ನಟಿ ನಯನತಾರ ಅವರ ವೃತ್ತಿಪರ ಹಾಗೂ ವಯಕ್ತಿಕ ಜೀವನ
ನಟಿ ನಯನತಾರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ನಟಿ ಪಟ್ಟು, ಲೇಡಿ ಸೂಪರ್ ಸ್ಟಾರ್ 75 , ದಿ ಟೆಸ್ಟ್, ಇರೈವನ್, ಡಿಯರ್ ಸ್ಟೂಡೆಂಟ್ಸ್, ಥಾನಿ ಒರುವನ್ 2 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ನಟಿ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಅಭಿಮಾನಿಗಳಿಗೆ ಅಪ್ಡೇಟ್ ಮಾಡುತ್ತಿರುತ್ತಾರೆ. ನಟಿ ನಯನತಾರ ಅವರ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಜೊತೆಗೆ ಟೈಮ್ ಸ್ಪೆಂಡ್‌ ಮಾಡುತ್ತಿದ್ದಾರೆ. ಅಲ್ಲದೆ ಈ ಕುರಿತ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Join Nadunudi News WhatsApp Group