Nivedhita Gowda Angry: ನನ್ನ ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ, ಜನರ ಮೇಲೆ ಕೋಪ ಮಾಡಿಕೊಂಡ ನಿವೇದಿತಾ ಗೌಡ.
Nivedhita Gowda Angry: ಡಬ್ಸ್ಮ್ಯಾಶ್ (Dubsmash) ವಿಡಿಯೋಗಳೊಂದಿಗೆ ಖ್ಯಾತಿ ಪಡೆದ ನಿವೇದಿತಾ ಗೌಡ (Niveditha Gowda) ಬಿಗ್ ಬಾಸ್ (Bigg Boss) ಗೆ ಎಂಟ್ರಿ ಕೊಟ್ಟು ಬಿಗ್ ಬಾಸ್ ಶೋ ನ ವಿನ್ನರ್ ಚಂದನ್ ಶೆಟ್ಟಿ (Chandan shetty) ಅವರನ್ನು ವಿವಾಹವಾಗಿದ್ದರು.
ಅಕ್ಟೋಬರ್ 21 2019 ರಂದು ಚಂದನ್ ಶೆಟ್ಟಿ ಅವರನ್ನು ನಿಶ್ಚಿತಾರ್ಥ ಮಾಡಿಕೊಂಡು. ಫೆಬ್ರವರಿ 26 2020 ರಂದು ಚಂದನ್ ಶೆಟ್ಟಿ ಅವರನ್ನು ವಿವಾಹ ಆಗಿದ್ದರು.
ಆದರೆ ಇದೀಗ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಅವರನ್ನು ಬಿಟ್ಟು ಸೋಲೋ ಟ್ರಿಪ್ (Solo Trip) ಹೋಗಿರುವ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ತಮ್ಮ ಎಲ್ಲ ಕೆಲಸಕ್ಕೂ ಬ್ರೇಕ್ ಹಾಕಿ ನಿವೇದಿತಾ ಗೌಡ ಇದೀಗ ಬಾಲಿಯಲ್ಲಿ (Baali) ಒಬ್ಬರೇ ಸಮಯ ಕಳೆಯುತ್ತಿದ್ದಾರೆ. ಬಾಲಿಯಲ್ಲಿ ಎಂಜಾಯ್ ಮಾಡುತ್ತ ಕೆಲವು ಫೋಟೋ ಗಳನ್ನೂ ಸಾಮಾಜಿಕ ಜಾಲತಾಣ (Social Media) ದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿದ್ದ ಫೋಟೋ (Photo) ನೆಟ್ಟಿಗರ ಗಮನಸೆಳೆದಿದೆ.
ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಫುಲ್ ಫೇಮಸ್
ಸದ್ಯ ನಟಿ ನಿವೇದಿತಾ ಗೌಡ ಅವರು ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡಲು ಆಯ್ಕೆ ಆಗಿದ್ದು ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.
View this post on Instagram
ಸದ್ಯ ನಟಿ ನಿವೇದಿತಾ ಗೌಡ ಅವರ ಹಲವು ರೀಲ್ಸ್ ಗಳು ಬಹಳ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿ ನಿವೇದಿತಾ ಗೌಡ ಲಕ್ಷಾಂತರ ಅಭಿಮಾನಿಗಳನ್ನ ಕೂಡ ಹೊಂದಿದ್ದಾರೆ.
ನಿವೇದಿತಾ ಗೌಡ ಅವರು ಬಾಲಿಯಲ್ಲಿ ಸೋಲೋ ಆಗಿ ತೆಗೆದ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಕೆಲವರು ನೆಗೆಟಿವ್ (Nagative) ಆಗಿ ನಿವೇದಿತಾ ಅವರಿಗೆ ಕಾಮೆಂಟ್ ಮಾಡಿದ್ದಾರೆ. ಇದರಿಂದಾಗಿ ನಿವೇದಿತಾ ಅವರು ಸಿಟ್ಟಾಗಿ ಕಾಮೆಂಟ್ ಮಾಡಿದವರಿಗೆ ಗರಂ ಆಗಿದ್ದಾರೆ.
View this post on Instagram
ನೆಗೆಟಿವ್ ಕಾಮೆಂಟ್ ಗಳಿಗೆ ನಿವೇದಿತಾ ಗೌಡ ಕೊಟ್ಟ ಉತ್ತರ
ಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡುತ್ತಿದ್ದೀಯ?, ಎಂದು ಕೆಲವರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಗೆ ನೀವಿ ಪ್ರತ್ಯುತ್ತರವನ್ನು ನೀಡಿದ್ದಾರೆ.
‘ನಾನು ನನ್ನ ದುಡ್ಡಿನಲ್ಲಿ ಪ್ರವಾಸ ಮಾಡುತ್ತಿರುವುದು. ನನಗು ದುಡಿಯುವ ಶಕ್ತಿ ಇದೆ. ಹುಡುಗರು ಸೋಲೋ ಟ್ರಿಪ್ ಹೋದರೆ ಯಾರಿಗೂ ಏನು ಅನಿಸುದಿಲ್ಲ . ಹುಡಿಗಿಯರು ಹೋದರೆ ಈ ರೀತಿ ಕೆಟ್ಟ ಕಾಮೆಂಟ್ ಮಾಡುತ್ತೀರಿ. ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಟ್ರಿಪ್ ಹೋದರೆ ನಿಮಗೇನು ಸಮಸ್ಯೆ ? ಎಂದು ನಿವೇದಿತಾ ಗೌಡ ನೆಗೆಟಿವ್ ಕಮೆಂಟ್ ಗಳಿಗೆ ಉತ್ತರ ನೀಡಿದ್ದಾರೆ.
ಸದ್ಯ ಕಮೆಂಟ್ ಮಾಡಿದವರ ಮೇಲೆ ನಟಿ ನಿವೇದಿತಾ ಗೌಡ ಕೋಪ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರ ಮೂಲಕ ತಮ್ಮ ಕೋಪವನ್ನ ಹೊರಹಾಕಿದ್ದಾರೆ.
View this post on Instagram