Nivedita Prepared Jamoon: ಅಮ್ಮನಿಗಾಗಿ ಜಾಮೂನ್ ಮಾಡಿದ ನಿವೇದಿತಾ ಗೌಡ, ಮಗಳನ್ನ ಹೊಗಳಿದ ತಾಯಿ.
Nivedita Gowda Youtube Cooking Video: ನಟಿ ನಿವೇದಿತಾ ಗೌಡ (Nivedita Gowda) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಲೇ ಇರುತ್ತಾರೆ.
ಇದೀಗ ನಟಿ ಈ ವರ್ಷದ ಅಮ್ಮಂದಿರ ದಿನಾಚರಣೆಯನ್ನು ಅಡುಗೆ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಅಮ್ಮನಿಗಾಗಿ ನಿವಿ ಜಾಮೂನ್ ಮಾಡಿದ್ದಾರೆ. ಜಾಮೂನ್ ತಿಂದ ನಿವಿ ಅಮ್ಮ ಹೇಮಾ ಮಗಳನ್ನು ಹೊಗಳಿದ್ದಾರೆ.
ಅಮ್ಮನಿಗಾಗಿ ಜಾಮೂನ್ ಮಾಡಿದ ನಿವೇದಿತಾ
ನಿವೇದಿತಾ ಗೋದಾ ತಮ್ಮ ಯೂಟ್ಯೂಬ್ ನಲ್ಲಿ ಹೊಸ ಹೊಸ ರೀತಿಯ ಅಡುಗೆಗಳ ಎಕ್ಸ್ಪಿರಿಮೆಂಟ್ ಮಾಡುತ್ತಲೇ ಇರುತ್ತಾರೆ. ಇದೀಗ ನಿವಿ ಅಮ್ಮನಿಗಾಗಿ ಜಾಮೂನ್ ಮಾಡಿದ್ದಾರೆ. ಕೂಕ್ಕಿಂಗ್ ಫಾರ್ ಮೈ ಮೋಮ್, ವುಮೆನ್ಸ್ ಡೇ ಸ್ಪೆಷಲ್ ಎಂದು ಯೂಟ್ಯೂಬ್ (Nivedita Gowda YouTube Channel) ವಿಡಿಯೋ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿವಿ ಮಾಡಿದ ಜಾಮೂನ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಸುತಿದ್ದಾರೆ.
ನಿವಿ ಮಾಡಿದ ಜಾಮೂನ್ ತಿಂದು ಮಗಳನ್ನು ಹೊಗಳಿದ ನಿವಿ ತಾಯಿ ಹೇಮಾ
ಭಯ ಆಗುತ್ತಿದೆ ಏನು ಮಾಡುತ್ತಲೇ ಅಂತ. ಅವಳಿಗೆ ಗೊತ್ತಾಗದಂತೆ ಬಂದು ನೋಡುತ್ತಿರುವೆ. ಸ್ವಲ್ಪ ಕರೆಕ್ಟ್ ಆಗಿ ಮಾಡುತ್ತಿದ್ದಾಳೆ ನೀಟ್ ಆಗಿ ಹೇಳಿಕೊಟ್ಟರೆ ಪರ್ಪೆಕ್ಟ್ ಆಗಿ ಮಾಡುತ್ತಾಳೆ. ನಾನೇ ಮಾಡುತ್ತೀನಿ ಎಂದರು ನನ್ನ ಮಗಳು ನನ್ನ ಮಾತು ಕೇಳುತ್ತಿಲ್ಲ ಎಂದು ನಿವಿ ತಾಯಿ ಹೇಳಿದ್ದಾರೆ.
ಕಪ್ ನಲ್ಲಿ ತಾಯಿಗೆ ಜಾಮೂನ್ ಕೊಟ್ಟು ರುಚಿ ನೋಡಲು ಹೇಳಿದ್ದಾರೆ. ಜಾಮೂನ್ ಮಾಡಿದ ಚಿನ್ನ ಎಂದು ನಿವಿ ತಾಯಿ ಓಡೋಡಿ ಬರುತ್ತಾರೆ. ರುಚಿ ನೋಡಿ ‘ತುಂಬಾ ಚೆನ್ನಾಗಿ ಮಾಡಿರುವೆ, ರುಚಿ ಚೆನ್ನಾಗಿದೆ. ನಿನ್ನಷ್ಟೇ ಚೆನ್ನಾಗಿದೆ ಜಾಮೂನ್. ನಿಜ ಹೇಳಬೇಕು ಅಂದರೆ ಈ ವರ್ಷ ತಾಯಂದಿರ ದಿನ ನನಗೆ ತುಂಬಾ ಸ್ಪೆಷಲ್ ಏಕೆಂದರೆ ಮೊದಲ ಸಲ ನನ್ನ ಮಗಳು ನನಗೆ ಜಾಮೂನ್ ಮಾಡಿಕೊಟ್ಟಿರುವುದು’