Makeup Movie: ಮೇಕಪ್ ಸಿನಿಮಾದಲ್ಲಿ ದೊಡ್ಡಮ್ಮ ಪಾತ್ರ ಮಾಡಿದ್ದು ಯಾರು, ಹಲವು ವರ್ಷಗಳ ನಂತರ ಸತ್ಯ ಬಯಲಿಗೆ.

ಮೇಕಪ್ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಪಂಕಜ, ಪಾತ್ರ ಯಾರು ಮಾಡಿದ್ದು ಎಂದು ಹೇಳಿದ ಪಂಕಜ.

Actress Pankaja About Mekeup Movie:  ಹಾಸ್ಯ ನಾಯಕ ನಟ ಕಾಮಿಡಿ ಕಿಂಗ್ ಜಗ್ಗೇಶ್ ನಟನೆಯ ಮೇಕಪ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಖಂಡಿತ್ತು. ದೊಡ್ಡಮ್ಮ ಪಾತ್ರದಲ್ಲಿ ನಟ ಜಗ್ಗೇಶ್ (Jaggesh) ಅದ್ಭುತವಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗಿ ಜನರ ಮನ ಗೆದ್ದಿತ್ತು. ಇನ್ನು ನಟ ಜಗ್ಗೇಶ್ ಅವರು ಈ ಸಿನಿಮಾದಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ ಎಂದು ಹೇಳಿದರೆ ಸುಳ್ಳಾಗಲ್ಲ.

ಸಂಗೀತ ಶ್ರೀನಿವಾಸ್ ರಾವ್ ನಿರ್ದೇಶನದ ಕಾಮಿಡಿ ಕಿಂಗ್ ಜಗ್ಗೇಶ್ ನಟನೆಯ ಮೇಕಪ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹಿಟ್ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ದೊಡ್ಡಮ್ಮನ ಪಾತ್ರ ಮಾಡಿದ್ದಾರೆ. ಆದರೆ ಈ ಪಾತ್ರದಲ್ಲಿ ನಟ ಜಗ್ಗೇಶ್ ಮಾತ್ರ ಕಾಣಿಸಿಕೊಂಡಿಲ್ಲ ನಟಿ ಪಂಕಜಾ ಕೂಡ ನಟಿಸಿದ್ದಾರೆ ಎನ್ನುವ ವಿಚಾರ ಈಗ ತಿಳಿದು ಬಂದಿದೆ.

Actress Pankaja About Mekeup Movie
Image Credit: Asianetnews

ಮೇಕಪ್ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಪಂಕಜ
ಮೇಕಪ್ ಸಿನಿಮಾದಲ್ಲಿ ನಮ್ಮ ಮುಖಕ್ಕೆ ಮೊಲ್ಡ್ ಹಾಕುತ್ತಿದ್ದರು. ಪ್ಲಾಸ್ಟರ್ ಆಫ್ ಪ್ಯಾರಿಷ್ ಅಂತ ಬರುತ್ತದೆ. ಅದನ್ನು ಬೋಂಬೆ ಮೇಲೆ ಮಾಡಿ ಅನಂತರ ನಮಗೆ ಹಾಕುತ್ತಿದ್ದರು. ಈ ಮುಖವಾಡ 24 ಗಂಟೆ ಎಸಿಯಲ್ಲಿ ಇರಬೇಕು.

ಇಲ್ಲದಿದ್ದರೆ ಸಣ್ಣ ಸಣ್ಣ ಬಿರುಕುಗಳು ಬರುತ್ತಿತ್ತು. ಈ ಮೇಕಪ್ ಲಕ್ ನ ಮೂರೂ ಜನ ಹಾಕಿಕೊಂಡಿದ್ದು ನನಗೆ ಜಯ ಲಲಿತ ರೀತಿ ಇರಬೇಕು ಸ್ಪಾಂಜ್ ಹಾಕಿ ದಪ್ಪ ಮಾಡುತ್ತಿದ್ದರು ಬೇಸಿಗೆ ಕಾಲದಲ್ಲಿ ಏನು ಮಾಡಲಾಗುತ್ತಿರಲಿಲ್ಲ ಆದರೆ ಜಗ್ಗೇಶ್ ಅಣ್ಣ ಮತ್ತು ಅವರ ಪತ್ನಿ ಪರಿಮಳ ಅವರು ಚೆನ್ನಾಗಿ ನೋಡಿಕೊಂಡರು.

ಮೊದಲು ನಾನು ಹಾಕಿಕೊಂಡೆ ನಂತರ ಟೆನಿಸ್ ಕೃಷ್ಣಾ ಹಾಕಿಕೊಳ್ಳುತ್ತಾರೆ. ಕೊನೆಯಲ್ಲಿ ಜಗೇಶ್ ಹಾಕಿಕೊಳ್ಳುತ್ತಾರೆ. ಮೂರೂ ಜನ ಹಾಕಿಕೊಳ್ಳುತ್ತಾರೆ ಆದರೆ ಮುಖ್ಯವಾಗಿ ದೊಡ್ಡಮ್ಮಾ ದ್ವನಿ ನಾನೇ. ಮೇಕಪ್ ಸಿನಿಮಾದಲ್ಲಿ ದೊಡ್ಡಮ್ಮ ಪಾತ್ರವನ್ನು ಹುಡುಕಿ ಪಂಕಜಾ ಅವರೇ ಮಾಡಬೇಕು ಎಂದು ಮಾಡಿಸಿದ್ದು ಏಕೆಂದರೆ ಅವರ ಕಿಲಾಡಿ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೆ.

Join Nadunudi News WhatsApp Group

Actress Pankaja latest news
Image Credit: Asianetnews

ಅಲ್ಲದೆ ಅವರ ಸಹೋದರನ ಸಿನಿಮಾದಲ್ಲಿ ಆಟೋ ಡ್ರೈವರ್‌ ಆಗಿ ಕೆಲಸ ಮಾಡಿದ್ದೆ. ನನ್ನ ಪಾತ್ರಗಳನ್ನು ನೋಡಿದಾಗ ಪಾತ್ರಕ್ಕೆ ಜೀವ ತುಂಬುತ್ತೀಯಾ ಬಿಡಮ್ಮ ಎನ್ನುತ್ತಿದ್ದರು. ಜಗ್ಗೇಶ್ ಅಣ್ಣ ಅವರ ಜೊತೆ ಇದ್ದರೆ ಯಾರೇ ಆದರೂ ಖುಷಿಯಿಂದ ಕೆಲಸ ಮಾಡಿಕೊಂಡು ಇರುತ್ತಿದ್ದರು ಎಂದು ಪಂಕಜಾ ಖಾಸಗಿ ಕನ್ನಡ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Join Nadunudi News WhatsApp Group