Pooja Gandhi: ಮುಚ್ಚುಮರೆ ಇಲ್ಲದೆ ಸತ್ಯ ತಿಳಿಸಿದ ಪೂಜಾ ಗಾಂಧಿ, ಇಷ್ಟು ದಿನ ಎಲ್ಲಿದ್ದರು?
ಚಿತ್ರರಂಗದಿಂದ ದೂರ ಉಳಿದಿರುವುದಕ್ಕೆ ಕಾರಣ ತಿಳಿಸಿದ ನಟಿ ಪೂಜಾ ಗಾಂಧಿ
Actress Pooja Gandhi: ಕನ್ನಡದ ಖ್ಯಾತ ನಟಿಯಾದ ಪೂಜಾ ಗಾಂಧಿ ಇದೀಗ ಸುದ್ದಿಯಲ್ಲಿದ್ದಾರೆ. 2006 ರಲ್ಲಿ ಮುಂಗಾರು ಮಳೆ ಸಿನಿಮಾದ ಮೂಲಕ ನಟಿ ಪೂಜಾ ಗಾಂಧಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ ಸಾಕಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ಪೂಜಾ ಗಾಂಧಿ ಜನಪ್ರಿಯತೆ ಪಡೆದಿದ್ದಾರೆ.
ನಟಿ ಪೂಜಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ಮುಂಗಾರು ಸಿನಿಮಾದಿಂದ ಹಿಡಿದು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದರು. ಆದರೆ ಕೆಲವು ವರ್ಷಗಳ ಕಾಲ ಎಲ್ಲೂ ಸಹ ಕಾಣಿಸಿರಲಿಲ್ಲ. ಇದೀಗ ಎಲ್ಲಿ ಹೋಗಿದ್ದರು, ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ ಪೂಜಾ ಗಾಂಧಿ ಉತ್ತರ ಕೊಟ್ಟಿದ್ದಾರೆ.
ಕನ್ನಡ ಭಾಷೆಯ ಮೇಲಿರುವ ಪ್ರೀತಿ ಬಗ್ಗೆ ಮಾತನಾಡಿದ ನಟಿ ಪೂಜಾ ಗಾಂಧಿ
ಮುಂಗಾರು ಮಳೆ ಸಿನಿಮಾದಿಂದ ನಾನು ನೋಡಲು ಹಾಗೆ ಇರುವೆ ಎಂದು ಅನೇಕರು ಹೇಳುತ್ತಿರುವುದಕ್ಕೆ ಖುಷಿಯಾಗಿದೆ. ಆದರೆ ನನ್ನ ಭಾಷೆ ಬದಲಾಗಿದೆ ಆಗ ತಪ್ಪು ಸರಿ ಯೋಚನೆ ಮಾಡದೆ ಕನ್ನಡ ಹೇಗೆ ಬರುತ್ತಿತ್ತು ಹಾಗೆ ಬರೆದುಕೊಂಡೆ ಈಗ ಮಾತನಾಡುವುದು ಓದುವುದನ್ನು ಕಲಿತಿರುವೆ. ಯಾಕೆ ಕಲಿಯುತ್ತಿರುವುದು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಉತ್ತರ ಭಾಷೆ ಮೇಲಿರುವ ನನ್ನ ಪ್ರೀತಿ ಮತ್ತು ಕರ್ನಾಟಕದ ಮೇಲಿರುವ ನನ್ನ ಪ್ರೀತಿ ಅಂತ ಹೇಳುವುದಕ್ಕೆ ಇಷ್ಟಪಡುವೆ. ಒಂದು ಶಬ್ದದಲ್ಲಿ ಹಂಚಿಕೊಳ್ಳಲು ಆಗಲ್ಲ ಏಕೆಂದರೆ ಅಷ್ಟು ಇಷ್ಟ ಪಡುತ್ತಿರುವೆ. ತುಂಬಾ ತುಂಬಾ ಖುಷಿಯಾಗುತ್ತಿದೆ. ಜನರು ಅಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂಚೆ ಮಾತನಾಡುತ್ತಿದ್ದೆ, ಈಗ ಬರೆಯುತ್ತಿರುವೆ ಓದುತ್ತಿರುವೆ ಎಂದು ಕನ್ನಡ ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಪೂಜಾ ಗಾಂಧಿ ಮಾತನಾಡಿದ್ದಾರೆ.
ಚಿತ್ರರಂಗದಿಂದ ದೂರ ಉಳಿದಿರುವುದಕ್ಕೆ ಕಾರಣ ತಿಳಿಸಿದ ನಟಿ ಪೂಜಾ ಗಾಂಧಿ
ನಾನು ಎಲ್ಲೂ ಹೋಗಿರಲಿಲ್ಲ. ಆರೋಗ್ಯ ಸರಿ ಇರಲಿಲ್ಲ. ಆಮೇಲೆ ಸ್ವಲ್ಪ ಬ್ರೇಕ್ ತೆಗೆದುಕೊಂಡೆ. ಈಗ ಅಂಗನವಾಡಿ ಮಕ್ಕಳಿಗೋಸ್ಕರ ಒಂದು ಪ್ರಾಜೆಕ್ಟ್ ಮಾಡುತ್ತಿರುವೆ, ಏನ್ ಜಿ ಓ ಆಕ್ಟಿವಿಟಿಯಲ್ಲಿ ಕೆಲಸ ಮಾಡಿಕೊಂಡು ಓದುತ್ತಿರುವ ಕಾರಣ ಬ್ಯುಸಿಯಾಗಿರುವೆ. ಆರಾಮವಾಗಿರುವೆ ಜೀವನಕ್ಕೆ ಏನ್ ಏನು ಬೇಕೋ ಅದು ಮಾಡುತ್ತಿರುವೆ ಅದಕ್ಕೆ ನೀವು ಎರಡು ಗಂಟೆ ಸಂದರ್ಶನ ಮಾಡಬೇಕಾಗುತ್ತದೆ ಹೀಗಾಗಿ ಸದ್ಯಕ್ಕೆ ಇಷ್ಟೇ ಎಂದು ಪೂಜಾ ಗಾಂಧಿ ಹೇಳಿದ್ದಾರೆ.