Yash Radhika Love Story: ಯಶ್ ಕೊಟ್ಟ ಮೊದಲ ಗಿಫ್ಟ್ ಬಗ್ಗೆ ಹೇಳಿಕೊಂಡ ನಟಿ ರಾಧಿಕಾ ಪಂಡಿತ್.
Actress Radhika Pandit And Yash Propose Gift: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ತಮ್ಮ ಮದುವೆಯ ಬಳಿಕ ಚಿತ್ರರಂಗದಿಂದ ದೂರ ಇದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ.
ಇನ್ನು ಮಾರ್ಚ್ 7 ರಂದು ರಾಧಿಕಾ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಈ ಬಾರಿ ನಟಿ ಬರ್ತ್ ಡೇ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಇರುವುದಿಲ್ಲ ಎಂದು ಸ್ವತಃ ರಾಧಿಕಾ ಪಂಡಿತ್ ತಿಳಿಸಿದ್ದರು.
ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಆಸ್ಕ್ ರಾಧಿಕಾ ಸೆಷನ್ ನಡೆಸಿದ್ದಾರೆ. ಈ ಸೆಷನ್ ನಲ್ಲಿ ರಾಧಿಕಾ ಅಭಿಮಾನಿಗಳು ಸಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಈ ಸೆಷನ್ ನಲ್ಲಿ ನಟಿ ಒಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆಸ್ಕ್ ರಾಧಿಕಾ ಸೆಷನ್
ನಟಿ ರಾಧಿಕಾ ಪಂಡಿತ್ ತಮ್ಮ ಇಸ್ಟಾಗ್ರಾಮ್ ನಲ್ಲಿ ಆಸ್ಕ್ ರಾಧಿಕಾ ಸೆಷನ್ ನಡೆಸಿದ್ದಾರೆ. ಈ ಸೆಷನ್ ನಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗೆ ರಾಧಿಕಾ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬ ಈ ಸೆಷನ್ ನಲ್ಲಿ ರಾಧಿಕಾ ಅವರಿಗೆ ಸ್ಪೆಷಲ್ ಪ್ರಶ್ನೆ ಕೇಳಿದ್ದಾರೆ. “ಯಶ್ ಅವರಿಂದ ನಿಮಗೆ ಸಿಕ್ಕ ಮೊದಲ ಉಡುಗೊರೆ ಏನು”? ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ನಟಿ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಕಿ ಭಾಯ್ ರಾಧಿಕಾ ಅವರಿಗೆ ನೀಡಿದ ಮೊದಲ ಉಡುಗೊರೆ
ಇದಕ್ಕೆ ಉತ್ತರಿಸಿದ ನಟಿ ರಾಧಿಕಾ ಪಂಡಿತ್, ಪ್ರೀತಿ ತುಂಬಿದ ಪ್ರೆಶ್ ಸೊಪ್ಪಿನ ಕಟ್ಟು ಎಂದಿದ್ದಾರೆ. ಪ್ರಶ್ನೆಗೆ ಉತ್ತರಿಸುದರ ಜೊತೆಗೆ ಥ್ರೋ ಬ್ಯಾಕ್ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.